ಕೊಳ್ಳೇಗಾಲ: ತಾಲ್ಲೂಕಿನ ಜಾಗೇರಿ ಸಮೀಪ ಜೀವಂತವಾಗಿರುವ ಎರಡು ತಲೆ ಹಾವನ್ನು ಚೀಲದಲ್ಲಿ ತುಂಬಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರನ್ನು ಅರಣ್ಯ ಪೊಲೀಸ್ ದಳ ದಾಳಿ ನಡೆಸಿ ಗುರುವಾರ ಬಂಧಿಸಿದ್ದಾರೆ..
ಕೊಪ್ಪಳ ಜಿಲ್ಲೆಯ ಅಬ್ಬೀಗೇರಿ ಗ್ರಾಮದ ಬಸವರಾಜು (36). ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಹನುಮಂತ 38. ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ಬಿಳಿ ಇದ್ದ ಎರಡು ತಲೆಯ ಜೀವಂತ ಹಾವು ಎರಡು ಮೊಬೈಲ್ ಗಳನ್ನು ಅರಣ್ಯ ಪೊಲೀಸ್ ದಳದ ಎಸ್. ಐ ವಿಜಯ ರಾಜ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಾಳಿಯಲ್ಲಿ ಟಕ್ಕಿಉಲ್ಲಾ, ರಾಮಚಂದ್ರ ಸಿಬಂದಿ ವರ್ಗ ಇದ್ದರು.