Advertisement
ವರ್ಗಾವಣೆ ಹಿಂಪಡೆದ ಸರಕಾರ:ವೈದ್ಯರನ್ನು ಬೆದರಿಸಲೆಂದೇ ಪಶ್ಚಿಮ ಬಂಗಾಳ ಸರಕಾರ ವರ್ಗಾವಣೆಗಳನ್ನು ಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಸರಕಾರ ತನ್ನ ನಿರ್ಧಾರ ಹಿಂಪಡೆದಿದೆ.
ಮಾಧ್ಯಮವೊಂದರ ಜತೆ ಮಾತನಾಡಿದ ಮೃತ ವೈದ್ಯೆಯ ಹೆತ್ತವರು, ಸಿಎಂ ಮಮತಾ ಬ್ಯಾನರ್ಜಿ ಅವರ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. ಮೊದಲು ಅವರ ಮೇಲೆ ನಮಗೆ ತುಂಬಾ ನಂಬಿಕೆ ಇತ್ತು. ಅವರು ನ್ಯಾಯ ಕೇಳುತ್ತಿದ್ದಾರೆ. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಅವರು ಏನನ್ನು ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ತನ್ನ ಮಗಳ ಡೈರಿಯೊಂದನ್ನು ಸಿಬಿಐಗೆ ನೀಡಿರುವುದಾಗಿ ಅವರು ಹೇಳಿದ್ಧಾರೆ. 2 ಗಂಟೆಗೊಮ್ಮೆ ವರದಿ ಕೊಡಿ: ರಾಜ್ಯಗಳಿಗೆ ಕೇಂದ್ರ
ದೇಶಾದ್ಯಂತ ವೈದ್ಯರು ಮತ್ತು ಆರೋಗ್ಯ ಕಾರ್ಯಕ ರ್ತರ ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತೀ 2 ಗಂಟೆಗೆ ಒಮ್ಮೆ ವರದಿ ಸಲ್ಲಿಸಬೇಕೆಂದು ಕೇಂದ್ರ ರವಿವಾರ ನಿರ್ದೇಶಿಸಿದೆ. ಪ್ರತಿಭಟನೆ ವಿಕೋಪಕ್ಕೆ ತಲುಪದಂತೆ ಎಚ್ಚರ ವಹಿಸಲು ಈ ಕ್ರಮ ಕೈಗೊಂಡಿದೆ.
Related Articles
ವೈದ್ಯೆ ಅತ್ಯಾ ಚಾ ರದ ವಿರುದ್ಧದ ಪ್ರತಿಭಟನೆ ಮೋಹನ್ ಬಾಗಾನ್ ಹಾಗೂ ಈಸ್ಟ್ ಬೆಂಗಾಲ್ ಫುಟ್ಬಾಲ್ ತಂಡಗಳ ಅಭಿಮಾನಿಗಳ ನಡುವಿನ ವೈರತ್ವವನ್ನು ದೂರ ಮಾಡಿದೆ. ರವಿವಾರ ಈ ಅಭಿಮಾನಿಗಳು ವೈರತ್ವ ಮರೆತು ಒಂದಾಗಿ, ತಮ್ಮ ತಂಡದ ಧ್ವಜ ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಕೈಮೀರಿದ್ದರಿಂದ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
Advertisement
ಪ್ರಕರಣದ ಬಗ್ಗೆ ವದಂತಿ: ಬಿಜೆಪಿ ನಾಯಕ, 2 ವೈದ್ಯರಿಗೆ ಸಮನ್ಸ್!ಟ್ರೈನಿ ವೈದ್ಯೆ ಹತ್ಯೆ ಪ್ರಕರಣದಲ್ಲಿ ಸುಳ್ಳು ಮಾಹಿತಿ ಹಬ್ಬಿಸಿದ್ದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಹಾಗೂ ಇಬ್ಬರು ವೈದ್ಯರಿಗೆ ಕೋಲ್ಕತಾ ಪೊಲೀಸರು ಸಮನ್ಸ್ ನೀಡಿದ್ದಾರೆ. ವೈದ್ಯೆಯ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಆಕೆಯ ದೇಹದಲ್ಲಿ 150 ಗ್ರಾಂ ವೀರ್ಯ ಪತ್ತೆಯಾಗಿದೆ ಎಂದು ವೈದ್ಯ ಸುಬರ್ನೋ ಗೋಸ್ವಾಮಿ ವದಂತಿ ಹಬ್ಬಿಸಿದ್ದರು ಎನ್ನಲಾಗಿದೆ. ಮತ್ತೋರ್ವ ವೈದ್ಯ ಕುನಾಲ್ ಸರ್ಕಾರ್ ಜಾಲತಾಣಗಳಲ್ಲಿ ಈ ಕುರಿತು ಕಮೆಂಟ್ ಮಾಡಿರುವ ಕಾರಣಕ್ಕೆ ಈ ಇಬ್ಬರಿಗೂ ಪೊಲೀಸರು ಸಮನ್ಸ್ ನೀಡಿದ್ದಾರೆ. ಜತೆಗೆ ಸಂತ್ರಸ್ತೆಯ ಫೋಟೋ ಹಾಗೂ ಹೆಸರನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿಗೂ ಸಮನ್ಸ್ ನೀಡಲಾಗಿದೆ. ಸರಕಾರ ತನಿಖೆ ಬಗ್ಗೆ ಗಮನಹರಿಸದೇ ಸಾಮಾಜಿಕ ಜಾಲತಾಣಗಳನ್ನು ನೋಡುತ್ತಾ ಕುಳಿತಿದೆ ಎಂದು ಚಟರ್ಜಿ ಚಾಟಿ ಬೀಸಿದ್ದಾರೆ. ಟಿಎಂಸಿ ಸಂಸದನಿಗೂ ನೋಟಿಸ್: ಹತ್ಯೆ ನಡೆದ 3 ದಿನದ ಬಳಿಕ ಆಸ್ಪತ್ರೆಗೆ ಶ್ವಾನದಳ ಕಳುಹಿಸಲಾಗಿತ್ತು ಎಂದು ಟಿಎಂಸಿ ಸಂಸದ ಸುಖೇಂದು ಶೇಖರ್ ರಾಯ್ ಹೇಳಿಕೆ ನೀಡಿದ್ದರು. ಆದರೆ ಇದು ತಪ್ಪು ಮಾಹಿತಿ. ಹತ್ಯೆ ನಡೆದ ದಿನವೇ ಶ್ವಾನದಳ ಕಳುಹಿಸಲಾಗಿತ್ತು ಎಂದು ಬಂಗಾಲ ಪೊಲೀಸರು ಹೇಳಿದ್ದು, ಈ ಸಂಬಂಧ ರಾಯ್‌ಗೆ ನೋಟಿಸ್ ಕೂಡ ಜಾರಿ ಮಾಡಿದ್ದಾಗಿ ಹೇಳಿದ್ದಾರೆ. ಆರೋಪಿಗೆ ಮಾನಸಿಕ ಪರೀಕ್ಷೆ
ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣದ ಆರೋಪಿಯನ್ನು ಸಿಬಿಐ ಅಧಿಕಾರಿ ಗಳು ರವಿವಾರ ಮಾನಸಿಕ ಪರೀಕ್ಷೆಗೆ ಒಳ ಪಡಿಸಿದ್ದಾರೆ. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ (ಸಿಎಫ್ಎಸ್‌ಎಲ್) ಐವರು ಅಧಿಕಾರಿಗಳ ತಂಡ ಪರೀಕ್ಷೆಯ ಮೇಲ್ವಿಚಾರಣೆ ನಡೆಸಲಿದೆ. ಅಧಿಕಾರಿಗಳ ತಂಡವು ಶನಿವಾರವೇ ಕೋಲ್ಕತಾಗೆ ಆಗಮಿಸಿದ್ದು, ಆರೋಪಿ ಸಂಜಯ್ ರಾವ್‌ನನ್ನು ಪ್ರಶ್ನಿಸಲು ಪ್ರಶ್ನೆ ಪಟ್ಟಿಯನ್ನೂ ಮುಂಚೆಯೇ ಸಿದ್ಧಪಡಿಸಿ ಕೊಂಡಿದೆ. ಇದು ಆರೋಪಿಯ ಮನೋವಿಶ್ಲೇಷಣೆ ಪರೀಕ್ಷೆ ಯಾಗಿದ್ದು, ಆರೋಪಿಯ ದಿನಚರಿ, ನಡವಳಿಕೆ, ಅಭ್ಯಾಸ ಗಳನ್ನು ಅರ್ಥೈಸಿಕೊಳ್ಳಲು ಈ ಪರೀಕ್ಷೆ ನೆರವಾಗಲಿದೆ.