Advertisement

ಕೋಲ್ಕತಾ: ತಲೆಎತ್ತುತ್ತಿದೆ ಭಾಷಾ ಮ್ಯೂಸಿಯಂ; ಮುಂದಿನ ವರ್ಷಾರಂಭದಲ್ಲೇ ಲೋಕಾರ್ಪಣೆ ಸಾಧ್ಯತೆ

12:16 AM Aug 22, 2022 | Team Udayavani |

ಕೋಲ್ಕತಾ: ದೇಶದಲ್ಲಿ ಇದೇ ಮೊದಲ ಬಾರಿಗೆ ಕನ್ನಡ, ಕೊಂಕಣಿ ಸೇರಿದಂತೆ ಭಾರತೀಯ ಭಾಷೆಗಳು, ಬರೆಹ ಮತ್ತು ಪದಗಳಿಗೆಂದೇ ಮೀಸಲಾದ ಹೊಸ ಮ್ಯೂಸಿಯಂವೊಂದು ತಲೆ ಎತ್ತುತ್ತಿದೆ.

Advertisement

ಪಶ್ಚಿಮ ಬಂಗಾಲದ ಕೋಲ್ಕತಾದ ನ್ಯಾಶ‌ನಲ್‌ ಲೈಬ್ರರಿ ಕ್ಯಾಂಪಸ್‌ನಲ್ಲಿರುವ ಐತಿಹಾಸಿಕ ಹೌಸ್‌ ಆಫ್ ಬೆಲ್ವೆಡೆರ್‌ನಲ್ಲಿ ಈ ವಸ್ತು ಸಂಗ್ರಹಾಲಯವು ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿ ಅದು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆಯಿದೆ.

ಪ್ರಮುಖ ಧ್ಯೇಯಗಳೇನು?
ವಿಶೇಷವಾಗಿ ಪ್ರಮುಖ ವಿದ್ವಾಂಸರು, ಕವಿಗಳು ಹಾಗೂ ಬರೆಹಗಾರರನ್ನು ಗಮನದಲ್ಲಿಟ್ಟುಕೊಂಡು ಭಾಷೆಗಳು, ಬರವಣಿಗೆಗಳು ಮತ್ತು ಸಾಹಿತ್ಯಗಳ ಇತಿಹಾಸವನ್ನು ಸಂರಕ್ಷಿಸುವುದೇ ಶಬ್ದಲೋಕ್‌ ಸ್ಥಾಪನೆಯ ಪ್ರಮುಖ ಧ್ಯೇಯ ಎಂದು ನ್ಯಾಶ‌ನಲ್‌ ಲೈಬ್ರರಿ ಪ್ರಧಾನ ನಿರ್ದೇಶಕ ಅಜಯ್‌ ಪ್ರತಾಪ್‌ ಸಿಂ ಸ್‌ ಹೇಳಿದ್ದಾರೆ. ಇಲ್ಲಿ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಎಲ್ಲರಿಗೂ ಅರ್ಥವಾಗುವಂತೆ ನಮ್ಮ ವಿಶಿಷ್ಟ ಪರಂಪರೆಯನ್ನು ತಾಂತ್ರಿಕ ಸಲಕರಣೆಗಳ ಮೂಲಕ ಪ್ರದರ್ಶಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಯಾವೆಲ್ಲ ಭಾಷೆಗಳಿಗೆ ಆದ್ಯತೆ?
ಕನ್ನಡ, ಕೊಂಕಣಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಹಿಂದಿ, ಕಾಶ್ಮೀರಿ, ಮಲಯಾಳ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂಥಾಲಿ, ಮೈಥಿಲಿ ಮತ್ತು ಡೋಗ್ರಿ… ಹೀಗೆ 22 ಶಾಸ್ತ್ರೀಯ ಭಾಷೆಗಳ ವಿಕಸನವನ್ನು ಅರಿಯುವ ಹಾಗೂ ಭಾಷೆಗಳಿಗೆ ಸಂಬಂಧಿಸಿದ ಪ್ರಮುಖ ಟ್ರೆಂಡ್‌ಗಳನ್ನು ತಿಳಿಯುವ ಉದ್ದೇಶದಿಂದ “ವರ್ಡ್‌ ಮ್ಯೂಸಿಯಂ’ ಅಥವಾ “ಶಬ್ದಲೋಕ್‌’ ಅನ್ನು ರೂಪಿಸಲಾಗುತ್ತಿದೆ.

ಏನೇನಿರಲಿದೆ?
ಭಾಷೆಗಳ ಇತಿಹಾಸದ ಜತೆಗೆ ಮುದ್ರಣ ಯಂತ್ರದ ಇತಿಹಾಸ, ಸಾರ್ವಜನಿಕ ಗ್ರಂಥಾಲಯಗಳು ಬೆಳೆದುಬಂದ ಹಾದಿ, ಬೆಲ್ವೆಡೆರ್‌ ಎಸ್ಟೇಟ್‌ನ ಚರಿತ್ರೆಯನ್ನೂ ಈ ಮ್ಯೂಸಿಯಂ ಒಳಗೊಂಡಿ ರಲಿದೆ. ಅಲ್ಲದೇ ಇಲ್ಲಿ ಎಲ್‌ಇಡಿ ಪ್ರಾಜೆಕ್ಟರ್‌ಗಳು, ವರ್ಚುವಲ್‌ ರಿಯಾಲಿಟಿ ಸಲಕರಣೆಗಳು, ಗ್ರಾಫಿಕ್‌ ಗೋಡೆಗಳು, ಇಂಟರ್ಯಾಕ್ಟಿವ್‌ ಗೇಮ್ಸ್‌, ಹಸ್ತಪ್ರತಿಗಳು, ಹರಪ್ಪನ್‌ ಮುದ್ರೆಯ ಪ್ರತಿಕೃತಿಗಳು, ನಾಣ್ಯಗಳು ಇಲ್ಲಿರಲಿವೆ. 2010ರಲ್ಲೇ ಈ ಮ್ಯೂಸಿಯಂ ಸ್ಥಾಪನೆ ಪ್ರಸ್ತಾವವನ್ನು ಸರಕಾರದ ಮುಂದಿಟ್ಟಿದ್ದು, ಅದಕ್ಕೆ ಸರಕಾರ ಒಪ್ಪಿಗೆಯನ್ನೂ ನೀಡಿತ್ತು. ಅದರಂತೆ ನಿರ್ಮಾಣ ಕಾರ್ಯ ಆರಂಭ ವಾಗಿದ್ದು, ಕೆಲವೇ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next