ಕೋಲ್ಕತಾ: ಬಂಗಾಳಿ ನಟಿ ಪಲ್ಲವಿ ಡೇ ಇತ್ತೀಚೆಗಷ್ಟೇ ದಕ್ಷಿಣ ಕೋಲ್ಕತಾ ನಿವಾಸದಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದ ಬೆನ್ನಲ್ಲೇ ಮತ್ತೊಬ್ಬ ಬಂಗಾಳಿ ನಟಿ, ರೂಪದರ್ಶಿ ಬಿದಿಶಾ ಡೇ ಮುಜುಂದಾರ್ (21) ಕೋಲ್ಕತಾದ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಕಳೆದ ಹತ್ತು ದಿನಗಳಲ್ಲಿ ನಡೆದ ಎರಡನೇ ಪ್ರಕರಣವಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:8 ವರ್ಷಗಳನ್ನು ಹಿಂದಿನ 3 ದಶಕಗಳೊಂದಿಗೆ ಹೋಲಿಕೆ ಮಾಡಿ: ಪ್ರಧಾನಿ ಮೋದಿ
ಕೋಲ್ಕತಾದ ನಾಗರ್ ಬಜಾರ್ ನಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಬಿದಿಶಾ ಡೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ತನಗೆ ಸಿನಿಮಾ ರಂಗದಲ್ಲಿ ಅವಕಾಶ ಕೊರತೆಯಿಂದಾಗಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟಿರುವುದು ಪತ್ತೆಯಾಗಿದೆ. ನಟಿ ಬಿದಿಶಾ ಹ್ಯಾಂಡ್ ರೈಟಿಂಗ್ ನ ಪತ್ರವನ್ನು ಪರಿಶೀಲಿಸಲು ತಜ್ಞರಿಗೆ ರವಾನಿಸಲಾಗಿದೆ ಎಂದು ವರದಿ ವಿವರಿಸಿದೆ.
ಇದೊಂದು ಆತ್ಮಹತ್ಯೆಯೋ ಅಥವಾ ಸಾವಿನ ಘಟನೆಯ ಹಿಂದೆ ಬೇರೆ ಯಾವುದಾದರು ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಎಬಿಪಿ ಆನಂದ್ ವರದಿ ಮಾಡಿದೆ.
Related Articles
ಬಿದಿಶಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆರ್ ಜಿ ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ನಟಿ ಬಿದಿಶಾ ಕಳೆದ ನಾಲ್ಕು ವರ್ಷಗಳಿಂದ ಡುಮ್ಡಮ್ ನ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ನಟಿಯ ಮನೆ ಕೋಲ್ಕತಾದ ನೈಹಾಟಿಯಲ್ಲಿರುವುದಾಗಿ ವರದಿ ತಿಳಿಸಿದೆ.