Advertisement

ಬುಮ್ರಾ ಪ್ರಯತ್ನ ವ್ಯರ್ಥ; ಮುಂಬೈ ಇಂಡಿಯನ್ಸ್‌ಗೆ ಸೋಲು

07:37 AM May 10, 2022 | Team Udayavani |

ಮುಂಬಯಿ: ಜಸ್‌ಪ್ರೀತ್‌ ಬುಮ್ರಾ ಫೈವ್‌ಸ್ಟಾರ್‌ ಸಾಧನೆ ಮಾಡಿದರೂ ಮುಂಬೈ ಇಂಡಿಯನ್ಸ್‌ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲೇ ಇಲ್ಲ. ಎದುರಾಳಿ ಕೋಲ್ಕತಾ ನೈಟ್‌ರೈಡರ್ ದಾಳಿಗೆ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಮುಂಬೈ ಇಂಡಿಯನ್ಸ್‌ ತಂಡವು ಸೋಮವಾರದ ಐಪಿಎಲ್‌ ಪಂದ್ಯದಲ್ಲಿ 52 ರನ್ನುಗಳಿಂದ ಸೋಲನ್ನು ಕಂಡಿದೆ.

Advertisement

ಇಶಾನ್‌ ಕಿಶನ್‌ ಅವರ 51 ರನ್ನುಗಳ ಪ್ರಯತ್ನದ ಹೊರತಾಗಿಯೂ ಬ್ಯಾಟಿಂಗ್‌ ವೈಫ‌ಲ್ಯ ಕಂಡ ಮುಂಬೈ ಇಂಡಿಯನ್ಸ್‌ ತಂಡವು 17.3 ಓವರ್‌ಗಳಲ್ಲಿ ಕೇವಲ 113 ರನ್ನಿಗೆ ಆಲೌಔಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಮೊದಲು ಬುಮ್ರಾ ಮಾರಕ ದಾಳಿಗೆ ಕುಸಿದ ಕೆಕೆಆರ್‌ ತಂಡವು 9 ವಿಕೆಟಿಗೆ 165 ರನ್ನುಗಳ ಸಾಧಾರಣ ಮೊತ್ತ ಪೇರಿಸಿತ್ತು. ಈ ಸೋಲಿನಿಂದ ಮುಂಬೈ ಪ್ಲೇ ಆಫ್ನಿಂದ ಹೊರಬಿತ್ತು.

ರೋಹಿತ್‌ ಅವರನ್ನು ಬೇಗನೇ ಕಳೆದುಕೊಂಡ ಮುಂಬೈ ತಂಡವನ್ನು ಇಶಾನ್‌ ಕಿಶನ್‌ ಆಧರಿಸಿದರು. ಆದರೆ ಇತರ ಯಾವುದೇ ಆಟಗಾರ ಅವರಿಗೆ ಉತ್ತಮ ಜತೆಯಾಟ ನೀಡಲು ವಿಫ‌ಲರಾದರು. ತಿಲಕ್‌ ವರ್ಮ, ರಮಣದೀಪ್‌, ಟಿಮ್‌ ಡೇವಿಡ್‌, ಕೈರನ್‌ ಪೊಲಾರ್ಡ್‌ ಬ್ಯಾಟಿಂಗ್‌ನಲ್ಲಿ ವೈಫ‌ಲ್ಯ ಅನುಭವಿಸಿದ್ದರಿಂಧ ಮುಂಬೈ ಅಲ್ಪ ಮೊತ್ತಕ್ಕೆ ಕುಸಿಯಿತು.

ಬುಮ್ರಾ ಫೈವ್‌ಸ್ಟಾರ್‌ ಸಾಧನೆ

Koo App


ಈ ಮೊದಲು ಬಹಳ ವಿಳಂಬವಾಗಿ ಲಯ ಕಂಡುಕೊಂಡ ಮುಂಬೈ ಇಂಡಿಯನ್ಸ್‌ನ ಸ್ಟಾರ್‌ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಫೈವ್‌ಸ್ಟಾರ್‌ ಸಾಧನೆಯಿಂದ ಸುದ್ದಿಯಾಗಿದ್ದಾರೆ. ಈ ಪಂದ್ಯದಲ್ಲಿ ಅವರು ಕೇವಲ 10 ರನ್‌ ವೆಚ್ಚದಲ್ಲಿ 5 ವಿಕೆಟ್‌ ಉಡಾಯಿಸಿದ್ದರಿಂದ ಕೆಕೆಆರ್‌ 9 ವಿಕೆಟ್‌ ನಷ್ಟದಲ್ಲಿ 165 ರನ್‌ ಗಳಿಸಿತ್ತು.

ಶ್ರೇಯಸ್‌ ಅಯ್ಯರ್‌ ಬಳಗದ ಪಾಲಿಗೆ ಇದು ಅಳಿವು ಉಳಿವಿನ ಪಂದ್ಯವಾಗಿದೆ. ಈ ಪಂದ್ಯ ಸೋತರೆ ಅದು ಕೂಟದಿಂದ ಹೊರಬೀಳಲಿದೆ. ಹಾಗೆಯೇ ಮುಂಬೈ ಗೆದ್ದರೂ ಅದಕ್ಕೆ ಲಾಭವೇನೂ ಇಲ್ಲ. ರವಿವಾರ ಆರ್‌ಸಿಬಿ ಜಯ ಸಾಧಿಸಿದ್ದರಿಂದ ರೋಹಿತ್‌ ಪಡೆ ಮೊದಲ ತಂಡವಾಗಿ ಪಂದ್ಯಾವಳಿಯಿಂದ ನಿರ್ಗಮಿಸಿದೆ.

 

ಅಯ್ಯರ್‌ ಅಬ್ಬರ
ಹಾರ್ಡ್‌ ಹಿಟ್ಟರ್‌ ವೆಂಕಟೇಶ್‌ ಅಯ್ಯರ್‌ ತಮ್ಮ ಪುನರಾಗಮನವನ್ನು ಭರ್ಜರಿಯಾಗಿ ಸಾರಿದರು. ಪವರ್‌ ಪ್ಲೇ ಅವಧಿಯಲ್ಲಿ ಅಯ್ಯರ್‌ ಅವರ ಬ್ಯಾಟಿಂಗ್‌ ಅಬ್ಬರದಿಂದಾಗಿ ಕೆಕೆಆರ್‌ಗೆ ಉತ್ತಮ ಆರಂಭ ಲಭಿಸಿತು. ಮುಂಬೈ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಅಯ್ಯರ್‌ 24 ಎಸೆತಗಳಿಂದ 43 ರನ್‌ ಬಾರಿಸಿದರು. ಸಿಡಿಸಿದ್ದು 4 ಸಿಕ್ಸರ್‌ ಹಾಗೂ 3 ಫೋರ್‌. ಅಯ್ಯರ್‌ ನಿರ್ಗಮನದ ಬೆನ್ನಲ್ಲೇ ಕೆಕೆಆರ್‌ ರನ್‌ರೇಟ್‌ನಲ್ಲಿ ಸಹಜವಾಗಿಯೇ ಕುಸಿತ ಸಂಭವಿಸಿತು. ಅಜಿಂಕ್ಯ ರಹಾನೆ-ನಿತೀಶ್‌ ರಾಣಾ ಕ್ರೀಸಿನಲ್ಲಿದ್ದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 87ಕ್ಕೆ ಏರಿತು. ಇದೇ ಲಯದಲ್ಲಿ ಸಾಗಿದ್ದೇ ಆದಲ್ಲಿ ಕೆಕೆಆರ್‌ 175-180ರ ತನಕ ಸಾಗಬಹುದಿತ್ತು. ಆದರೆ ಬುಮ್ರಾ ಇದಕ್ಕೆ ಅಡ್ಡಗಾಲಿಕ್ಕಿದರು.

ಕೋಲ್ಕತಾ ನೈಟ್‌ರೈಡರ್
ವೆಂಕಟೇಶ್‌ ಅಯ್ಯರ್‌ ಸಿ ಸ್ಯಾಮ್ಸ್‌ ಬಿ ಕಾರ್ತಿಕೇಯ 43
ಅಜಿಂಕ್ಯ ರಹಾನೆ ಬಿ ಕಾರ್ತಿಕೇಯ 25
ನಿತೀಶ್‌ ರಾಣಾ ಸಿ ಇಶಾನ್‌ ಬಿ ಬುಮ್ರಾ 43
ಶ್ರೇಯಸ್‌ ಅಯ್ಯರ್‌ ಸಿ ಇಶಾನ್‌ ಬಿ ಅಶ್ವಿ‌ನ್‌ 6
ಆ್ಯಂಡ್ರೆ ರಸೆಲ್‌ ಸಿ ಪೊಲಾರ್ಡ್‌ ಬಿ ಬುಮ್ರಾ 9
ರಿಂಕು ಸಿಂಗ್‌ ಔಟಾಗದೆ 23
ಶೆಲ್ಡನ್‌ ಜಾಕ್ಸನ್‌ ಸಿ ಸ್ಯಾಮ್ಸ್‌ ಬಿ ಬುಮ್ರಾ 5
ಪ್ಯಾಟ್‌ ಕಮಿನ್ಸ್‌ ಸಿ ತಿಲಕ್‌ ಬಿ ಬುಮ್ರಾ 0
ಸುನೀಲ್‌ ನಾರಾಯಣ್‌ ಸಿ ಮತ್ತು ಬಿ ಬುಮ್ರಾ 0
ಟಿಮ್‌ ಸೌಥಿ ಸಿ ಪೊಲಾರ್ಡ್‌ ಬಿ ಸ್ಯಾಮ್ಸ್‌ 0
ವರುಣ್‌ ಚಕ್ರವರ್ತಿ ಔಟಾಗದೆ 0
ಇತರ 11
ಒಟ್ಟು (9 ವಿಕೆಟಿಗೆ) 165
ವಿಕೆಟ್‌ ಪತನ: 1-60, 2-87, 3-123, 4-136, 5-139, 6-156, 7-156, 8-156,
ಬೌಲಿಂಗ್‌: ಡೇನಿಯಲ್‌ ಸ್ಯಾಮ್ಸ್‌ 4-0-26-0
ಮುರುಗನ್‌ ಅಶ್ವಿ‌ನ್‌ 4-0-35-1
ಜಸ್‌ಪ್ರೀತ್‌ ಬುಮ್ರಾ 4-1-10-5
ರಿಲೀ ಮೆರಿಡಿತ್‌ 3-0-35-0
ಕುಮಾರ ಕಾರ್ತಿಕೇಯ 3-0-32-2
ಕೈರನ್‌ ಪೊಲಾರ್ಡ್‌ 2-0-26-0

ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಜಾಕ್ಸನ್‌ಬಿ ಸೌಥಿ 2
ಇಶಾನ್‌ ಕಿಶನ್‌ ಸಿ ಸಿಂಗ್‌ ಬಿ ಕಮಿನ್ಸ್‌ 51
ತಿಲಕ್‌ ವರ್ಮ ಸಿ ರಾಣಾ ಬಿ ರಸೆಲ್‌ 6
ರಮಣದೀಪ್‌ ಸಿಂಗ್‌ ಸಿ ರಾಣಾ ಬಿ ರಸೆಲ್‌ 12
ಟಿಮ್‌ ಡೇವಿಡ್‌ ಸಿ ರಹಾನೆ ಬಿ ವರುಣ್‌ 13
ಕೈರನ್‌ ಪೊಲಾರ್ಡ್‌ ರನೌಟ್‌ 15
ಡೇನಿಯಲ್‌ ಸ್ಯಾಮ್ಸ್‌ ಸಿ ಜಾಕ್ಸನ್‌ ಬಿ ಕಮಿನ್ಸ್‌ 1
ಮುರುಗನ್‌ ಅಶ್ವಿ‌ನ್‌ ಸಿ ವರುಣ್‌ ಬಿ ಕಮಿನ್ಸ್‌ 0
ಕುಮಾರ ಕಾರ್ತಿಕೇಯ ರನೌಟ್‌ 3
ಜಸ್‌ಪ್ರೀತ್‌ ಬುಮ್ರಾ ರನೌಟ್‌ 0
ರಿಲೆ ಮೆರೆಡಿತ್‌ ಔಟಾಗದೆ 0
ಇತರ: 10
ಒಟ್ಟು (17.3 ಓವರ್‌ಗಳಲ್ಲಿ ಆಲೌಟ್‌) 113
ವಿಕೆಟ್‌ ಪತನ: 1-2, 2-32, 3-69, 4-83, 5-100, 6-102, 7-102, 8-112, 9-113
ಬೌಲಿಂಗ್‌:
ಟಿಮ್‌ ಸೌಥಿ 3-0-10-1
ಪ್ಯಾಟ್‌ ಕಮಿನ್ಸ್‌ 4-0-22-3
ಆ್ಯಂಡ್ರೆ ರಸೆಲ್‌ 2.3-0-22-2
ಸುನೀಲ್‌ ನಾರಾಯಣ್‌ 4-0-21-0
ವರುಣ್‌ ಚಕ್ರವರ್ತಿ 3-0-22-1
ವೆಂಕಟೇಶ್‌ ಅಯ್ಯರ್‌ 1-0-8-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

Advertisement

Udayavani is now on Telegram. Click here to join our channel and stay updated with the latest news.

Next