ಪಂಜಾಬ್ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಮಳೆಯ ಕಾರಣ ಸೋಲನ್ನು ಕಂಡಿದ್ದ ಕೆಕೆಆರ್ ತಂಡವು ಆಬಳಿಕ ಇಬ್ಬರು ಆಟಗಾರರ ಅಸಾಮಾನ್ಯ ಬ್ಯಾಟಿಂಗ್ ವೈಭವದಿಂದ ಗೆಲುವಿಗೆ ಟ್ರ್ಯಾಕ್‌ಗೆ ಮರಳಿದೆ. ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವ ಕೆಕೆಆರ್ ತನ್ನ ಗೆಲುವಿನ ಅಭಿಯಾನವನ್ನು ಇನ್ನಷ್ಟು ಹೆಚ್ಚಿಸುವ ಉತ್ಸಾಹದಲ್ಲಿದೆ.
Advertisement
ಶಾದೂìಲ್ ಠಾಕುರ್ ಕೂರ್‌ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ತಂಡವು ಬೆಂಗಳೂರು ತಂಡವನ್ನು ಸೋಲಿಸಿ ಅಚ್ಚರಿಗೊಳಿಸಿತು. ಕೇವಲ 29 ಎಸೆತಗಳಲ್ಲಿ 68 ರನ್ ಸಿಡಿಸಿದ ಅವರು ತಂಡಕ್ಕೆ 81 ರನ್ನುಗಳ ಭರ್ಜರಿ ಗೆಲುವು ಒದಗಿಸಿದ್ದರು. ಈ ಹಿಂದಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿ ಕೆಕೆಆರ್ ಅಸಾಮಾನ್ಯ ಗೆಲುವು ದಾಖಲಿಸಿತ್ತು. ಅಂತಿಮ ಓವರಿನಲ್ಲಿ ಸತತ 5 ಸಿಕ್ಸರ್ ಸಹಿತ ಒಟ್ಟು 31 ರನ್ ಪೇರಿಸಿ ಜಯ ತಂದುಕೊಟ್ಟರು.
Related Articles
ಐಡೆನ್ ಮಾರ್ಕ್‌ರಮ್ ಅವರ ನಾಯಕತ್ವದ ಸನ್‌ರೈಸರ್ ಹೈದರಾ ಬಾದ್ ತಂಡವು ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಹ್ಯಾರಿ ಬ್ರೂಕ್, ಮಾಯಾಂಕ್ ಅಗರ್ವಾಲ್ ಮತ್ತು ಹೆನ್ರಿಚ್ ಕ್ಲಾಸನ್ ತಂಡದ ಖ್ಯಾತ ಆಟಗಾರರಾಗಿದ್ದಾರೆ. ನುರಿತ ಆಟ ಗಾರರಿದ್ದರೂ ಮೊದಲೆರಡು ಪಂದ್ಯ ಗಳಲ್ಲಿ ತಂಡ ಉತ್ತಮ ಆಟ ಪ್ರದರ್ಶಿ ಸಲು ವಿಫಲವಾಗಿತ್ತು. ಆದರೆ ರಾಹುಲ್ ತ್ರಿಪಾಠಿ ಅವರ ಅಜೇಯ 74 ರನ್ ನೆರವಿನಿಂದ ತಂಡವು ಈ ಹಿಂದಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿತ್ತು.
Advertisement
ಈ ಗೆಲುವಿನಿಂದ ಉತ್ತೇಜಿತವಾಗಿ ರುವ ಲಾರಾ ಅವರಿಂದ ಮಾರ್ಗದರ್ಶನ ಪಡೆದ ಹೈದರಾಬಾದ್ ತಂಡವು ಕೆಕೆಆರ್ ತಂಡವನ್ನು ಸೋಲಿಸಿ ಗೆಲುವಿನ ಟ್ರ್ಯಾಕ್‌ನಲ್ಲಿ ಮುಂದುವರಿಯಲು ಹಾತೊರೆಯುತ್ತಿದೆ. ಬ್ರೂಕ್, ಕ್ಲಾಸೆನ್ ಸಹಿತ ತ್ರಿಪಾಠಿ ಅವರ ಬ್ಯಾಟಿಂಗ್ ಬಲದಿಂದ ಹೈದರಾಬಾದ್ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದೆ. ಮಧ್ಯಮ ಕ್ರಮಾಂಕದಲ್ಲಿ ತ್ರಿಪಾಠಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಲಿದ್ದಾರೆ. 13.25 ಕೋಟಿ ರೂ. ನೀಡಿ ಖರೀದಿಸಿದ್ದ ಬ್ರೂಕ್ ಈವರೆಗಿನ ಪಂದ್ಯಗಳಲ್ಲಿ ಕೇವಲ 13, 3 ಮತ್ತು 13 ರನ್ ಹೊಡೆದಿದ್ದಾರೆ. ಅವರಿಂದ ಭರ್ಜರಿ ಆಟದ ನಿರೀಕ್ಷೆಯಲ್ಲಿ ಹೈದರಾಬಾದ್ ಇದೆ.ತಂಡದ ಬೌಲಿಂಗ್ ಪಡೆ ಉತ್ತಮ ವಾಗಿದೆ. ವಾಷಿಂಗ್ಟನ್ ಸುಂದರ್, ಮಾಯಾಂಕ್ ಮಾರ್ಕೆಂಡೆ ಉತ್ತಮ ಫಾರ್ಮ್ನಲ್ಲಿದ್ದಾರೆ. ಮಾರ್ಕೆಂಡೆ ಈ ಹಿಂದಿನ ಪಂದ್ಯದಲ್ಲಿ 15 ರನ್ನಿಗೆ 4 ವಿಕೆಟ್ ಹಾರಿಸಿದ ಸಾಧನೆ ಮಾಡಿದ್ದರು. ಭುವನೇಶ್ವರ್ ಕುಮಾರ್ ಮತ್ತು ಮಾರ್ಕೊ ಜಾನ್ಸೆನ್ ವೇಗದ ದಾಳಿಯ ನೇತೃತ್ವ ವಹಿಸಲಿದ್ದಾರೆ.