Advertisement

ಕೆಕೆಆರ್‌ ನಾಯಕತ್ವ ರೇಸ್‌ನಲ್ಲಿ ಕ್ರಿಸ್‌ ಲಿನ್‌

06:25 AM Feb 17, 2018 | |

ಕೋಲ್ಕತಾ: ಆಸ್ಟ್ರೇಲಿಯದ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಲಿನ್‌ ಕೋಲ್ಕತಾ ನೈಟ್‌ರೈಡರ್ ನಾಯಕತ್ವದ ರೇಸ್‌ನಲ್ಲಿ ಮುಮಚೂಣಿಯಲ್ಲಿದ್ದಾರೆ. ಕೆಕೆಆರ್‌ ಕೋಚ್‌ ಜಾಕ್‌ ಕ್ಯಾಲಿಸ್‌ ಈ ವಿಷಯ ತಿಳಿಸಿದ್ದಾರೆ.

Advertisement

ತಂಡದ ನಾಯಕತ್ವದ ಬಗ್ಗೆ ಪ್ರತಿಕ್ರಿಯಿಸಿದ ಕ್ಯಾಲಿಸ್‌, “ನಾಯಕತ್ವ ಸ್ಥಾನಕ್ಕೆ ಲಿನ್‌ ಪ್ರಬಲ ಸ್ಪರ್ಧಿಯಾಗಿದ್ದಾರೆ. ಆದರೆ ನಾವು ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಬಹುಶಃ ಮುಂದಿನ ವಾರ ಖಚಿತವಾಗುತ್ತದೆ’ ಎಂದಿದ್ದಾರೆ.

ಕಳೆದ 7 ವರ್ಷಗಳ ಕಾಲ ಕೆಕೆಆರ್‌ ತಂಡವನ್ನು ಗೌತಮ್‌ ಗಂಭೀರ್‌ ಮುನ್ನಡೆಸಿದ್ದರು. ಆಗ ಕೆಕೆಆರ್‌ 2 ಬಾರಿ ಚಾಂಪಿಯನ್‌ ಕೂಡ ಆಗಿತ್ತು. ಆದರೆ ಈ ಬಾರಿ ಗಂಭೀರ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಹೀಗಾಗಿ ತಂಡಕ್ಕೆ ಹೊಸ ನಾಯಕರ ಆಯ್ಕೆ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next