Advertisement

Kolkata; ಮಗುವಿನ ಚಿಕಿತ್ಸೆಗೆ ಬಂದ ತಾಯಿಗೆ ಆಸ್ಪತ್ರೆಯಲ್ಲಿ ಕಿರುಕುಳ: ವ್ಯಕ್ತಿ ಬಂಧನ

01:45 AM Sep 16, 2024 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ತಾರಕಕ್ಕೆ ಏರಿರುವ ಬೆನ್ನಲ್ಲೇ ಕೋಲ್ಕತಾದ ಸರಕಾರಿ ಆಸ್ಪತ್ರೆಯೊಂದರಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮಗುವಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ದಾಖಲಿಲಾಗಿತ್ತು. ಈ ಹಿನ್ನೆಲೆ ಯಲ್ಲಿ ಮಗುವಿನ ತಾಯಿ ಮಕ್ಕಳ ವಾರ್ಡ್‌  ನಲ್ಲಿಯೇ ಮಲಗಿದ್ದರು. ಈ ವೇಳೆ ಅಕ್ರಮವಾಗಿ ವಾರ್ಡ್‌ ಪ್ರವೇಶಿಸಿದ ಸಿಬಂದಿ ಮಹಿಳೆಯು ಧರಿಸಿದ್ದ ಸೀರೆ ಕಳಚಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

Advertisement

ಈ ಘಟನೆಯನ್ನು ಆತ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಲು ಕೂಡ ಮುಂದಾಗಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಾಚರಣೆ ನಡೆಸಿದ ಅವರು ಸಿಬಂದಿಯನ್ನು ಬಂಧಿಸಿದ್ದಾರೆ. ಪಶ್ಚಿಮ ಬಂಗಾಲದ ಬಿರ್‌ಭುಮ್‌ ಜಿಲ್ಲೆಯಲ್ಲೂ ಇದೇ ಮಾದರಿ ಘಟನೆ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next