ಕೋಲ್ಕತ್ತಾ: ಹೆತ್ತ ಮಗಳೇ ತನ್ನ ಅಪಹರಣ ಮಾಡಲಾಗಿದೆ ಎಂದು ನಾಟಕವಾಡಿ ಪೋಷಕರ ಬಳಿ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಘಟನೆ ಕೋಲ್ಕತ್ತಾದ ಬಾನ್ಸ್‌ದ್ರೋನಿ ಪ್ರದೇಶದಲ್ಲಿ ನಡೆದಿದೆ.
ಘಟನೆ ವಿವರ: ಪಶ್ಚಿಮ ಬಂಗಾಳದ ಹೈಯರ್ ಸೆಕೆಂಡರಿ ಶಿಕ್ಷಣ ಮಂಡಳಿಯು ತನ್ನ 10 ನೇ ತರಗತಿಯ ಮಾಧ್ಯಮಿಕ ಪರೀಕ್ಷೆಯ ಫಲಿತಾಂಶಗಳನ್ನು ಶುಕ್ರವಾರ ಪ್ರಕಟಿಸಿದೆ ಅದರಂತೆ ದಕ್ಷಿಣ ಕೋಲ್ಕತ್ತಾದ ಬಾನ್ಸ್‌ದ್ರೋನಿ ಪ್ರದೇಶದ ಬಾಲಕಿ ಕೂಡ ಪರೀಕ್ಷೆಗೆ ಬರೆದಿದ್ದಳು ಶುಕ್ರವಾರ ಫಲಿತಾಂಶ ಪ್ರಕಟವಾಗಿದೆ ಮೊದಲೇ ಫಲಿತಾಂಶದ ಬಗ್ಗೆ ಅನುಮಾನ ಹೊಂದಿದ್ದ ಬಾಲಕಿ ತನ್ನ ಆರು ವರ್ಷದ ಸಹೋದರಿ ಜೊತೆ ಸೈಬರ್ ಗೆ ತೆರಳಿ ಫಲಿತಾಂಶ ಪರಿಶೀಲಿಸಿದ್ದಾಳೆ ಫಲಿತಾಂಶದಲ್ಲಿ ಆಕೆಗೆ ಕಡಿಮೆ ಅಂಕ ಬಂದಿರುವುದು ಗೊತ್ತಾಗಿದೆ ಇದರಿಂದ ಗಾಬರಿಗೊಂಡ ಬಾಲಕಿ ತನ್ನ ಜೊತೆ ಇದ್ದ ಆರು ವರ್ಷದ ಸಹೋದರಿ ಜೊತೆ ಮನೆ ಬಿಟ್ಟು ಹೋಗಿದ್ದಾಳೆ ಆದರೆ ಸಂಜೆಯಾದರೂ ಮಕ್ಕಳು ಮನೆಗೆ ಬರದಿದ್ದದನ್ನು ಮನಗಂಡ ಪೋಷಕರು ಮಗಳ ಮೊಬೈಲ್ ಫೋನ್ ಗೆ ಕರೆ ಮಾಡಿದ್ದಾರೆ ಆದರೆ ಸಂಪರ್ಕಕ್ಕೆ ಸಿಗಲಿಲ್ಲ ಬಳಿಕ ತಮ್ಮ ಪರಿಚಯಸ್ಥರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಆದರೆ ಎಲ್ಲಿಯೂ ಮಕ್ಕಳ ಇರುವಿಕೆ ಬಗ್ಗೆ ಮಾಹಿತಿ ಸಿಗಲಿಲ್ಲ. ಇದರಿಂದ ಗಾಬರಿಗೊಂಡ ಪೋಷಕರು ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮಕ್ಕಳು ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ಮಕ್ಕಳ ಪತ್ತೆಗಾಗಿ ನಗರದ ಕೆಲ ಸ್ಥಳಗಳ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿದ್ದಾರೆ ಈ ವೇಳೆ ಮಕ್ಕಳು ತೆಗೆದುಕೊಂಡು ಹೋಗಿರುವ ಸ್ಕೂಟಿ ಹತ್ತಿರದ ಮೆಟ್ರೋ ನಿಲ್ದಾಣದ ಬಳಿ ಪತ್ತೆಯಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಹತ್ತಿರದ ಎಲ್ಲ ಪೊಲೀಸ್ ಠಾಣೆಗಳಿಗೆ ಮಕ್ಕಳ ಫೋಟೋ ಕಳಿಸಿ ಮಕ್ಕಳನ್ನು ಪತ್ತೆ ಹಚ್ಚುವಂತೆ ಮಾಹಿತಿ ನೀಡಿದ್ದಾರೆ.
ಇಷ್ಟೆಲ್ಲಾ ಘಟನೆ ನಡೆಯುತ್ತಿದ್ದ ವೇಳೆ ಪೋಷಕರ ಮೊಬೈಲ್ ಗೆ ಸಂದೇಶವೊಂದು ಬಂದಿದೆ ಮಗಳ ಅಪಹರಣವಾಗಿದೆ ಬಿಡುಗಡೆಗಾಗಿ ಒಂದು ಕೋಟಿ ರೂಪಾಯಿ ನೀಡುವಂತೆ ಸಂದೇಶ ಕಳುಹಿಸಿದ್ದಾರೆ ಅಲ್ಲದೆ 1 ಕೋಟಿ ರೂ. ಹಣದೊಂದಿಗೆ ನೇಪಾಳಗಂಜ್ ಪ್ರದೇಶಕ್ಕೆ ಬರುವಂತೆಯೂ ಸಂದೇಶದಲ್ಲಿ ಹೇಳಲಾಗಿತ್ತು.
Related Articles
ಇತ್ತ ಮೆಟ್ರೋ ನಿಲ್ದಾಣದ ಬಳಿ ಸ್ಕೂಟಿ ಪತ್ತೆಯಾದ ಹಿನ್ನೆಲೆಯಲ್ಲಿ ಮಕ್ಕಳು ಕೃಷ್ಣಾನಗರ ಲೋಕಲ್ ರೈಲಿನಲ್ಲಿ ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದು ಮಕ್ಕಳ ಫೋಟೋ ಕೃಷ್ಣಾನಗರ ಪೊಲೀಸ್ ಠಾಣೆ ಹಾಗೂ ಇತರ ಠಾಣೆಗಳಿಗೆ ರವಾನೆ ಮಾಡಲಾಗಿತ್ತು ಫೋಟೋ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಮಕ್ಕಳು ಕೃಷ್ಣನಗರ ಜಿಲ್ಲಾ ಪೊಲೀಸರು ನಾಡಿಯಾ ಜಿಲ್ಲೆಯ ಡಿವೈನ್ ನರ್ಸಿಂಗ್ ಹೋಮ್ ಬಳಿ ಇರುವ ಮಾಹಿತಿ ಸಿಕ್ಕಿದೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ನರ್ಸಿಂಗ್ ಹೋಮ್ ಬಳಿ ತೆರಳಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ ಬಳಿಕ ಪೊಲೀಸರು ಅಪಹರಣ ಕುರಿತು ತನಿಖೆ ನಡೆಸಿದಾಗ ತಾನು ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ ಹಿನ್ನೆಲೆಯಲ್ಲಿ ಗಾಬರಿಗೊಂಡು ಮನೆ ಬಿಟ್ಟು ಹೋಗಿದ್ದೆ ಅಲ್ಲದೆ ನಾನು ಪೋಷಕರಲ್ಲಿ ಈ ಭಾರಿ ಉತ್ತಮ ಅಂಕ ಗಳಿಸುವ ಭರವಸೆ ನೀಡಿದ್ದೆ ಆದರೆ ಅದು ಸಾಧ್ಯವಾಗಲಿಲ್ಲ ಹಾಗಾಗಿ ನಾನು ನನ್ನನ್ನು ಅಪಹರಣ ಮಾಡಿರುವ ಕುರಿತು ನಾಟಕವಾಡಿ ನಾನೆ ಪೋಷಕರಿಗೆ ಅಪಹರಣ ಮಾಡಿರುವ ಕುರಿತು ಸಂದೇಶ ಕಳುಹಿಸಿ ಒಂದು ಕೋಟಿ ರೂ ನೀಡುವಂತೆ ಸಂದೇಶ ಕಳುಹಿಸಿದ್ದೆ ಎಂದು ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ದಾಂಡೇಲಿ: ಫಣಸೋಲಿ ಅರಣ್ಯ ಪ್ರದೇಶದಲ್ಲಿ ಜಂಗಲ್ ಸಫಾರಿಗೆ ಹೋದ ವಾಹನ ಪಲ್ಟಿ