ಕೊಲ್ಕತ್ತಾ: ಕೋಲ್ಕತ್ತಾ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಡೈಕ್ರಿಗಳು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.
ಘಟನೆಗೆ ಸಂಬಂಧಿಸಿ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಆರ್‌ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸಂಜೋಯ್ ರಾಯ್ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಇದೇ ವಿಚಾರವಾಗಿ ತರಾತುರಿಯಲ್ಲಿ ವೈದ್ಯೆಯ ದೇಹವನ್ನು ದಹನ ಮಾಡಲಾಗಿದೆ ಎಂದು ಸಿಬಿಐ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ.
ಆಗಸ್ಟ್ 9 ರಂದು ಬೆಳಿಗ್ಗೆ 10.03 ಗಂಟೆಗೆ ಆರ್‌ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಟ್ರೈನಿ ವೈದ್ಯೆಯ ಅರೆಬೆತ್ತಲೆ ಶವ ಪತ್ತೆಯಾಗಿರುವ ಕುರಿತು ಠಾಣಾಧಿಕಾರಿ ಮೊಂಡಲ್ ಘೋಷ್ ಮಾಹಿತಿ ಪಡೆದಿದ್ದರು ಆದರೂ ಪೊಲೀಸರು ತಕ್ಷಣಕ್ಕೆ ಘಟನಾ ಸ್ಥಳಕ್ಕೆ ತೆರಳದೆ ವಿಳಂಬವಾಗಿ ತೆರಳಿದ್ದಾರೆ, ಎಂದು ಸಿಬಿಐ ಅಧಿಕಾರಿಗಳು ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.
ಇಲ್ಲಿರುವ ಮತ್ತೊಂದು ಮುಖ್ಯ ವಿಷಯವೆಂದರೆ ಪೊಲೀಸ್ ಠಾಣೆಗೂ ಆಸ್ಪತ್ರೆಗೂ ಕೇವಲ ಹತ್ತು ನಿಮಿಷಗಳ ಅಂತರ ಅಷ್ಟೇ ಎರಡೂ ಒಂದೇ ಪ್ರದೇಶದಲ್ಲಿ ಇರುವುದು. ಇದರಿಂದಲೇ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷವಹಿಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ.
ಇದನ್ನೂ ಓದಿ: Shiv sena:ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ರೂ. ಬಹುಮಾನ: ಶಿವಸೇನಾ ಶಾಸಕ