ನವದೆಹಲಿ: ಕೋಲಾರದ ನರಸಾಪುರದಲ್ಲಿರುವ ಐಫೋನ್ ತಯಾರಿಕಾ ಘಟಕವು ಸದ್ಯದಲ್ಲೇ ಟಾಟಾ ಗ್ರೂಪ್‌ನ ಪಾಲಾಗಲಿದೆಯೇ?
ವಿಸ್ಟ್ರಾನ್ ಕಂಪನಿ ಜತೆಗಿನ ಮಾತುಕತೆ ಯಶಸ್ವಿಯಾದರೆ, ಸುಮಾರು 4,000-5,000 ಕೋಟಿ ರೂ.ಗಳಿಗೆ ವಿಸ್ಟ್ರಾನ್‌ನ ಆ್ಯಂಪಲ್ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈ.ಲಿ.(ಟಿಇಪಿಎಲ್) ಖರೀದಿಸುವ ಸಾಧ್ಯತೆಯಿದೆ.
ನರಸಾಪುರದಲ್ಲಿ ಆ್ಯಪಲ್ ಡಿವೈಸ್‌ಗಳು ಮತ್ತು ಬಿಡಿಭಾಗಗಳನ್ನು ತಯಾರಿಸುತ್ತಿರುವ ಘಟಕವು ಭಾರತದಲ್ಲಿ ವಿಸ್ಟ್ರಾನ್ ಹೊಂದಿರುವ ಏಕೈಕ ಘಟಕವಾಗಿದೆ.
ಟಾಟಾ ಸನ್ಸ್‌ನ ಅಂಗಸಂಸ್ಥೆಯಾಗಿರುವ ಟಿಇಪಿಎಲ್ ಪ್ರಸ್ತುತ ತನ್ನ ಹೊಸೂರಿನಲ್ಲಿರುವ ವಿಭಾಗದಿಂದ ಆ್ಯಪಲ್‌ಗೆ ಬಿಡಿಭಾಗಗಳನ್ನು ಸರಬರಾಜು ಮಾಡುತ್ತಿದೆ. ಈಗ ಮೇಕ್ ಇನ್ ಇಂಡಿಯಾದಡಿ ಕೋಲಾರದಲ್ಲಿರುವ ವಿಸ್ಟ್ರಾನ್ ಘಟಕವನ್ನೇ ಖರೀದಿಸಲು ಟಿಇಪಿಎಲ್ ಮುಂದಾಗಿದೆ.
Related Articles
ಈ ಒಪ್ಪಂದ ಯಶಸ್ವಿಯಾಗದೇ ಇದ್ದರೆ, ವಿಸ್ಟ್ರಾನ್ ಜತೆ ಕೈಜೋಡಿಸಿಕೊಂಡು ಜಾಯಿಂಟ್ ವೆಂಚರ್ ಮಾಡುವತ್ತಲೂ ಟಾಟಾ ಚಿಂತನೆ ನಡೆಸಿದೆ.