Advertisement

ಬಿತ್ತನೆ ಬೀಜ ಸಮರ್ಪಕವಾಗಿ ಪೂರೈಸಿ

05:39 PM May 22, 2021 | Team Udayavani |

ಕೋಲಾರ: ಮುಂಗಾರು ಬಿತ್ತನೆಗೆ ಅವಶ್ಯಕತೆಯಿರುವ ಬಿತ್ತನೆ ಬೀಜ ಗೊಬ್ಬರ ಸಮರ್ಪಕವಾಗಿ ಪೂರೈಕೆ ಮಾಡಿ ಕೊರೊನಾ ಸಂಕಷ್ಟದಲ್ಲಿರುವ ರೈತರ ನೆರವಿಗೆಧಾವಿಸಬೇಕೆಂದು ರೈತ ಸಂಘದಿಂದ ಕೃಷಿಅಧಿಕಾರಿ ರವಿಕುಮಾರ್‌ ಅವರ ಮೂಲಕ ಸಚಿವರಿಗೆ ಮನವಿ ನೀಡಲಾಯಿತು.

Advertisement

ಮನವಿ ನೀಡಿ ಮಾತನಾಡಿದ ರಾಜ್ಯಉಪಾದ್ಯಕ್ಷ ಕೆ.ನಾರಾಯಣಗೌಡ, ಕೊರೊನಾಎರಡನೇ ಅಲೆಯ ಆರ್ಭಟಕ್ಕೆ ಇಡೀ ದೇಶವೇಅಲ್ಲೋಲ ಕಲ್ಲೋಲವಾಗುತ್ತಿದೆ. ಇದರ ಮದ್ಯದಲ್ಲೂ ಮುಂಗಾರು ಮಳೆ ಈಗಾಗಲೇ ರಾಜ್ಯಕ್ಕೆ ಪ್ರವೇಶ ಮಾಡಿದ್ದು,ರೈತ ಸಮುದಾಯ ಕೃಷಿ ಚಟುವಟಿಕೆಗಳನ್ನು ಆರಂಭಿಸಲುಅಣೆಯಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಆಗಿದ್ದು, ರೈತರು ಭೂಮಿ ಹದಗೊಳಿಸುವ ಕಾರ್ಯ ಶುರುಮಾಡಿದ್ದಾರೆ. ಕೊರೊನಾ ಸೋಂಕು ಗ್ರಾಮೀಣ ಪ್ರದೇಶಕ್ಕೂಪ್ರವೇಶ ಮಾಡಿರುವ ಕಾರಣ, ಜನ ದಟ್ಟಣೆ ಕಡಿಮೆಮಾಡಲು ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿಕೊಳ್ಳಲು ಮುಂದಾಗಿದ್ದಾರೆ.

ಸರ್ಕಾರ ಅವಶ್ಯಕವಾದ ಬಿತ್ತನೆ ಬೀಜ,ರಸಗೊಬ್ಬರ, ಕೀಟನಾಶಕ, ಇತರೆ ಸೌಲಭ್ಯಗಳನ್ನುಪೂರೈಸಬೇಕಿದೆ. ಸಂಕಷ್ಟದಲ್ಲಿರುವ ರೈತರ ಸಹಾಯಕ್ಕೆನಿಲ್ಲಬೇಕೆಂದು ಒತ್ತಾಯಿಸಿದರು.ಕೃಷಿ ಇಲಾಖೆ ಈಗಿಂದಲೇ ಚುರುಕುಗೊಂಡು, ರೈತ ಸಂಪರ್ಕ ಕೇಂದ್ರಗಳಲ್ಲಿ ಬೇಡಿಕೆಯಂತೆ ಬೀಜ, ರಸಗೊಬ್ಬರು ದಾಸ್ತಾನುಮಾಡಬೇಕುಕೊರೊನಾ ನೆಪದಲ್ಲಿಕೃಷಿಯನ್ನೇನಂಬಿರುವ ರೈತರನ್ನು ನಿರ್ಲಕ್ಷ್ಯ ಮಾಡಬಾರದು.

ಕಳೆದ ವರ್ಷ ಬಿತ್ತನೆ ಸಮಯದಲ್ಲಿಅವಶ್ಯಕತೆಗೆ ತಕ್ಕ ಬಿತ್ತನೆ ಬೀಜ, ರಸಗೊಬ್ಬರ ಆಭಾವದಿಂದರೈತರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದರು. ಮತ್ತೆ ಮರುಕಳಿಸದಂತೆ ಜಾಗ್ರತೆ ವಹಿಸಬೇಕೆಂದು ಒತ್ತಾಯಿಸಿದರು.

Advertisement

ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಅಧಿಕಾರಿ ರವಿಕುಮಾರ್‌,ಈಗಾಗಲೇ ಬಿತ್ತನೆಬೀಜಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆಕಳುಹಿಸಲಾಗಿದೆ. ನಿಮ್ಮಮನವಿಯನ್ನು ಸರ್ಕಾರಕ್ಕೆಕಳುಹಿಸುವ ಭರವಸೆ ನೀಡಿದರು.

ಮನವಿ ನೀಡುವಾಗ ಸಂಘದ ಮಹಿಳಾಅಧ್ಯಕ್ಷೆ ಎ.ನಳಿನಿಗೌಡ, ರಾಜ್ಯ ಸಂಚಾಲಕ ಬಂಗವಾದಿನಾಗರಾಜಗೌಡ, ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್‌,ಪೊಮ್ಮರಹಳ್ಳಿ ನವೀನ್‌, ವೇಣು, ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next