Advertisement

ಟಿ.ಚನ್ನಯ್ಯ ಕಂಚಿನ ಪುತ್ಥಳಿ ಸ್ಥಾಪಿಸಲು ಆಗ್ರಹ

07:06 PM Jul 24, 2021 | Team Udayavani |

ಕೋಲಾರ: ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ನಗರನಿರ್ಮಾಣಕ್ಕೆ ಕೊಡುಗೆ ನೀಡಿದಂತಹದಿ.ಟಿ.ಚನ್ನಯ್ಯ ಅವರ ನೆನಪಿಗಾಗಿ ಮೆಕ್ಕೆವೃತ್ತದಲ್ಲಿಕಂಚಿನ ಪುತ್ಥಳಿ ಸ್ಥಾಪಿಸಬೇಕು ಎಂದು ಭಾರತೀಯ ದಲಿತ ಸೇನೆ ಸಂಸ್ಥಾಪಕ ಅಧ್ಯಕ್ಷಮಹಾನ್‌ ನಾರಾಯಣಸ್ವಾಮಿ ಆಗ್ರಹಿಸಿದರು.

Advertisement

ನಗರದಪತ್ರಕರ್ತರಭವನದಲ್ಲಿ ಶುಕ್ರವಾರಹಲವು ಸಂಘಟನೆಗಳ ಮುಖಂಡರೊಂದಿಗೆಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 13ವರ್ಷಗಳ ಹಿಂದೆ ಕೆ.ಶ್ರೀನಿವಾಸಗೌಡ ಮಂತ್ರಿಆಗಿದ್ದಂತಹ ಸಂದರ್ಭದಲ್ಲಿ ಚನ್ನಯ್ಯ ಜಿಲ್ಲೆಗೆನೀಡಿದಂತಹ ಕೊಡುಗೆ ಸ್ಮರಿಸಿ, ನಚಿಕೇತನಿಲಯದ ಆವರಣದಲ್ಲಿ ಚನ್ನಯ್ಯ ಅವರಕಂಚಿನ ಪ್ರತಿಮೆ ಸ್ಥಾಪನೆ ಮಾಡುವ ಆಶ್ವಾಸನೆ ನೀಡಿದ್ದರು.

ಅದರಂತೆಚೆನ್ನಯ್ಯಅವರ ಪುತ್ಥಳಿಸ್ಥಾಪನೆಗೆ ಮುಂದಾಗಬೇಕೆಂದುಒತ್ತಾಯಿಸಿದರು. ಸ್ವಾತಂತ್ರÂ ಹೋರಾಟದಲ್ಲಿಭಾಗವಹಿಸಿ, ಬ್ರಿಟಿಷರ ವಿರುದ್ಧ ಕಾರ್ಮಿಕರಪರ ಹೋರಾಟ ಮಾಡಿದಂತ, ಕೆಂಗಲ್‌ಹನುಮಂತಯ್ಯಅವರಮಂತ್ರಿಮಂಡಲದಲ್ಲಿಮಂತ್ರಿಗಳಾಗಿ ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು‌ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ, ನಾಮ ನಿರ್ದೇಶನ ಲೋಕಸಭಾ ಸದಸ್ಯರಾಗಿ, ಮೈಸೂರುವಿದ್ಯುತ್‌ ಶಕ್ತಿ ಮಂಡಳಿಯ ಅಧ್ಯಕ್ಷರಾಗಿ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷರಾಗಿ ಅವರ ಸೇವೆ ಅಪಾರವಾಗಿದೆ ಎಂದು ಹೇಳಿದರು.

ಕಮಲ ನೆಹರುಸ್ಯಾನಿಟೋರಿಯಂ ಕ್ಷಯರೋಗ ಆಸ್ಪತ್ರೆ,ನಚಿಕೇತ ನಿಲಯ ನಿರ್ಮಾಣ, ನಗರದಲ್ಲಿಪ್ರಥಮ ಬಾರಿಗೆ ಯು.ಜಿ.ಡಿ. ಅಳವಡಿಕೆ,ಜಿಲ್ಲೆಗೆ ವಿದ್ಯುತ್‌ ಶಕ್ತಿ ತಂದಂತಹÖರಿಕ ಾರರಾಗಿದ್ದೂ ಅಲ್ಲದೆ, ಹಲವು ಆಸತ್ರೆ, ³ಶಾಲೆ, ಬೆಂಗಳೂರಿನಲ್ಲಿ ಅನೇಕ ಬಡಾವಣೆಗಳನಿÊÞì‌ ಣ, ಅಮಾನಿಕರೆ ಅಚ್ಚುಕಟ್ಟುಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಮಾಡಿರೈತರಿಗೆ ನೆರವಾಗಿದ್ದು, ಅವರ ಸಾಧನೆಗಳಲ್ಲಿಪ್ರಮುಖವಾಗಿದೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಸಂಘಟನೆಗಳಮುಖಂಡರಾದ ಮಂಜು, ರವಿ, ಎಚ್‌.ಎನ್‌.ಮೂರ್ತಿ, ರಘು, ಜಯರಾಂ, ನರಸಿಂಹಪ್ಪ,ಕಲಾವಿದ ಮತ್ತಿಕುಂಟೆ ಕೃಷ್ಣ ಮತ್ತಿತರರುಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next