ಬಂಗಾರಪೇಟೆ: ತಾಲೂಕಿನಲ್ಲಿ ಕಳೆದೊಂದುವಾರದಿಂದ ಸುರಿದ ಮಳೆಯಿಂದ ನಾಲ್ಕೈದುವರ್ಷಗಳಿಂದ ತುಂಬದಕೆರೆಗಳಿಗೆ ನೀರು ಬಂದಿದೆ.ನರೇಗಾದಡಿ ನಿರ್ಮಿಸಿದ್ದ ಹೊಂಡ,ಗೋಕುಂಟೆಗಳು ತುಂಬಿ ಹರಿಯುತ್ತಿವೆ.ಪ್ರಸಕ್ತ ವರ್ಷವೂ ಮಳೆ ಕೈಕೊಡುತ್ತದೆ ಎಂದುಜನ ಆತಂಕಕ್ಕೆ ಒಳಗಾಗಿದ್ದರು.
ಕಳೆದ ವರ್ಷಸಮರ್ಪಕ ಮಳೆ ಬಂದರೂ ಕೆರೆ ಕಟ್ಟೆಗಳುತುಂಬಿರಲಿಲ್ಲ. ಹದಮಳೆ ಆಗಿದ್ದರಿಂದ 50ವರ್ಷಗಳಲ್ಲಿ ಮೊದಲ ಬಾರಿಗೆ ರಾಗಿ ಬೆಳೆಯಲ್ಲಿಹೆಚ್ಚಿನ ಇಳುವರಿ ಬಂದಿತ್ತು. 50 ಕೋಟಿ ರೂ.ನಷ್ಟುರಾಗಿ ಬೆಂಬಲ ಬೆಲೆಗೆ ಮಾರಾಟವಾಗಿತ್ತು.
ರಾಗಿ ಬಿತ್ತನೆ ಪೂರ್ಣ: ಕಳೆದ ಒಂದು ವಾರದಿಂದತಾಲೂಕಿನಲ್ಲಿ ಪ್ರತಿ ದಿನ ಮಳೆಯಾಗುತ್ತಿತ್ತು. ರಾತ್ರಿಆಗುತ್ತಿದ್ದಂತೆಯೇಮಳೆಸುರಿಯಲಾರಂಭಿಸುತ್ತಿತ್ತು.ಇದರಿಂದ ಹಳ್ಳಕೊಳ್ಳಲು ತುಂಬಿ ಕುಂಟೆಗಳಿಗೆನೀರು ತುಂಬಿದೆ. ಕೆರೆಗಳು ಅರ್ಧದಷ್ಟು ತುಂಬಿವೆ.ಮಳೆಯಾಶ್ರಿತ ರಾಗಿ ಬಿತ್ತನೆ ಕಾರ್ಯ ಈ ವರ್ಷಬಹುತೇಕ ಮುಗಿದಿದೆ.
ಕೆರೆಗಳಲ್ಲಿ ನೀರು: ಒಂದು ವಾರದಿಂದ ರಾತ್ರಿವೇಳೆಯಲ್ಲಿ ಮಳೆ ಅಬ್ಬರ ಹೆಚ್ಚಾಗಿತ್ತು. ಬಿರುಸಿನಮಳೆ ಆಗಿದ್ದರಿಂದ ತಾಲೂಕಿನ ಬಹುತೇಕಕೆರೆಗಳಿಗೆನೀರು ಬಂದಿದೆ. ತಾಲೂಕಿನ ಬಹುತೇಕ ಕೃಷಿಹೊಂಡಾಗಳು ತುಂಬಿ ಹರಿಯುತ್ತಿವೆ. ತಾಲೂಕಿನಕಾಮಸಮುದ್ರ, ಬೇತಮಂಗಲ ಹಾಗೂಬೂದಿಕೋಟೆ ಕಡೆಗಳಲ್ಲಿ ಕೆರೆಗಳಿಗೆ ಸಾಕಷ್ಟು ನೀರುಬಂದಿದೆ.
ರೈತರಲ್ಲಿ ಸಂತಸ: ರಾತ್ರಿ ವೇಳೆ ಮಳೆ ಹೆಚ್ಚಾಗಿಬಿದ್ದಾಗ ಬೆಳಗ್ಗೆ ಎದ್ದು ರೈತರು ಕೆರೆಗಳತ್ತಮುಖಮಾಡುತ್ತಿದ್ದರು. ಕೆರೆಗಳಲ್ಲಿ ನಿಂತಿರುವನೀರನ್ನು ನೋಡಿ ಖುಷಿ ಪಡುತ್ತಿದ್ದರು.ಬತ್ತಿಹೋಗಿದ್ದ ಕೆಲವು ಕೊಳವೆ ಬಾವಿಗಳಲ್ಲಿ ನೀರುಬರುತ್ತಿದೆ. ಮುಂದಿನ ದಿನಗಳಲ್ಲಿ ಅಂತರ್ಜಲಮತ್ತಷ್ಟು ವೃದ್ಧಿ ಆಗಲಿದೆ ಎಂಬ ಆಶಾಭಾವನೆ ರೈತರಹಾಗೂ ಸಾರ್ವಜನಿಕರಲ್ಲಿ ಇದೆ.ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದತಾಲೂಕಿನ ಪ್ರತಿಯೊಂದು ಗ್ರಾಪಂನಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ದೊಡ್ಡಕೆರೆಗಳಲ್ಲಿ ಗೋಕುಂಟೆ ನಿರ್ಮಾಣ ಹಾಗೂ ಹೂಳುತೆಗೆಯುವ ಕೆಲಸ ನಡೆಯುತ್ತಿದೆ. ಇದರಿಂದಬಹುತೇಕಕೆರೆಗಳಲ್ಲಿ ನೀರು ಬಂದಿದೆ.
ಎಂ.ಸಿ.ಮಂಜುನಾಥ್