Advertisement

ಅತಿಸಾರಭೇದಿ ನಿಯಂತ್ರಣಕ್ಕೆಜಾಗೃತಿ ಅಗತ್ಯ

06:26 PM Jul 22, 2021 | Team Udayavani |

ಕೋಲಾರ: ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನಮಳೆಯಾಗುತ್ತಿದ್ದು, 1 ರಿಂದ 5 ವರ್ಷದೊಳಗಿನಮಕ್ಕಳಲ್ಲಿ ಹೆಚ್ಚಾಗಿ ಅತಿಸಾರಭೇದಿ ಕಂಡು ಬರುತ್ತದೆ ಆದ್ದರಿಂದ ಅತಿಸಾರಭೇದಿ ನಿಯಂತ್ರಣ ಕುರಿತುಪೋಷಕರಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸೇವೆಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅತಿಸಾರಭೇದಿ ತೀವ್ರತರ ನಿಯಂತ್ರಣಪಾಕ್ಷಿಕ 2021 ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ. ಡೆಂಗ್ಯು, ಚಿಕನ್‌ಗುನ್ಯಾ,ಮಲೇರಿಯಾ ಹಾಗೂ ಅತಿಸಾರ ಭೇದಿಯ ಬಗ್ಗೆಹೆಚ್ಚಿನ ಜಾಗೃತಿ ವಹಿಸಬೇಕು ಎಂದರು.ಅಂಗನವಾಡಿ ಕಾರ್ಯಕರ್ತೆಯರು ಹಾಗೂಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿನೀಡಿ ಪರಿಶೀಲನೆ ಮಾಡಿ ಅತಿಸಾರಭೇದಿಪ್ರಕರಣಗಳು ಕಂಡು ಬಂದರೆ ತಕ್ಷಣ ತಾಲ್ಲೂಕುವೈದ್ಯಾಧಿಕಾರಿಗಳಿಗೆ ತಿಳಿಸಬೇಕು.

ಓ.ಆರ್‌.ಎಸ್‌ಮತ್ತು ಝಿಂಕ್‌ ಮಾತ್ರೆಗಳನ್ನು ಅಗತ್ಯ ಇರುವಷ್ಟುಸಂಗ್ರಹಣೆ ಮಾಡಿಕೊಳ್ಳಿ ಎಂದು ತಿಳಿಸಿದರು.ಶೌಚಾಲಯಗಳನ್ನು ಶೇ. 100ರಷ್ಟು ನಿರ್ಮಿಸಿದ್ದರೂ ಎಲ್ಲರೂ ಬಳಕೆ ಮಾಡುತ್ತಿಲ್ಲ, ಕೆಲವು ಕಡೆಬಯಲು ಮಲವಿಸರ್ಜನೆ ಮಾಡುತ್ತಿದ್ದಾರೆ.

ಅರಿವುಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯ  ಎಲ್ಲಾ ಶಾಲೆಗಳಲ್ಲಿ ಒಆರ್‌ಎಸ್‌ದಿನಾಚರಣೆ ಏರ್ಪಡಿಸಿ ಅತಿಸಾರಭೇದಿಯ ಬಗ್ಗೆಮಕ್ಕಳಲ್ಲಿಅರಿವುಮೂಡಿಸಿ ಎಂದು ಶಿಕ್ಷಣಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿಅವರಿಗೆ ಸೂಚಿಸಿದರು.

ಆರ್‌.ಸಿ.ಎಚ್‌ಅಧಿಕಾರಿಡಾ.ವಿಜಯಕುಮಾರಿಮಾತನಾಡಿ, ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ2021ಕಾರ್ಯಕ್ರಮವನ್ನು ಇದುವರೆಗೂಈ ಕಾರ್ಯಕ್ರಮದಿಂದ ಚಿಕಿತ್ಸೆ ಹಾಗೂ ಮಾಹಿತಿ ತಲುಪಲಾಗದಮಕ್ಕಳನ್ನು ಕೇಂದ್ರೀಕರಿಸುವ ಹಾಗೂ ಚಿಕಿತ್ಸೆ ನೀಡುವಮತ್ತು ಅರಿವು ಮೂಡಿಸುವ ಸಲುವಾಗಿ ಜುಲೆ„ 19ರಿಂದ ಆಗಸ್ಟ್‌ 2 ರವರಿಗೆ ಪಾಕ್ಷಿಕದ ಮೂಲಕ ಮಕ್ಕಳಿಗೆಒಆರ್‌ಎಸ್‌ ಮತ್ತು ಝಿಂಕ್‌ ಮಾತ್ರೆಗಳನ್ನು ನೀಡಿಅತಿಸಾರಭೇದಿಯಿಂದ ಮಕ್ಕಳ ಮರಣ ತಪ್ಪಿಸುವುದುಮುಖ್ಯ ಉದ್ದೇಶವಾಗಿದೆ ಎಂದುಅವರು ತಿಳಿಸಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಜಗದೀಶ್‌ ಮಾತನಾಡಿ, ಈ ಕಾರ್ಯಕ್ರಮದಲ್ಲಿಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 5ವರ್ಷದೊಳಗಿನಮಕ್ಕಳಸಮೀಕ್ಷೆನಡೆಸಿ,ಪ್ರತಿಯೊಂದುಮನೆಗೆ ಓ.ಆರ್‌.ಎಸ್‌ ಪಟ್ಟಣ ನೀಡಿ ಕೈ ತೊಳೆಯುವವಿಧಾನದ ಬಗ್ಗೆ, ಶೌಚಾಲಯ ಬಳಸುವ ಬಗ್ಗೆ,ತಾಯಿಯ ಹಾಲಿನ ಮಹತ್ವದ ಬಗ್ಗೆ ಹಾಗೂ ಪೌಷ್ಟಿಕಆಹಾರದ ಬಗ್ಗೆ ಅರಿವು ಮೂಡಿಸುವರು ಹಾಗೂಅವಶ್ಯಕತೆ ಇರುವ ಮಕ್ಕಳಿಗೆ ಝಿಂಕ್‌ ಮಾತ್ರೆಯನ್ನುನೀಡುವರು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಉಪ ನಿರ್ದೇಶಕಿ ಎಂ.ಜಿ.ಪಾಲಿ, ಸಾರ್ವಜನಿಕ ಶಿಕ್ಷಣಇಲಾಖೆಯ ಉಪ ನಿರ್ದೇಶಕ ಕೃಷ್ಣಮೂರ್ತಿ, ಜಿಲ್ಲಾಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದನ್‌, ತಾಲೂಕುವೈದ್ಯಾಧಿಕಾರಿಗಳಾದ ರಮ್ಯಾ ದೀಪಿಕ, ಪ್ರಭಾರ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿಪ್ರೇಮಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next