Advertisement

ಕೋಲಾರದಲ್ಲಿ ಸಂಕ್ರಾಂತಿ ಸಂಭ್ರಮ; ಕಾರ್ಗಿಲ್‌ ವೀರರಿಗೆ ಸನ್ಮಾನ

03:00 PM Jan 21, 2017 | Team Udayavani |

ಕೋಲಾರ: ನಗರದ ಕ್ರೀಡಾ ಅಭಿವೃದ್ಧಿ ಅಕಾಡೆಮಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಾಂತಿ ಅಂಗವಾಗಿ ನಡೆಸಿದ ನಗೆಹಬ್ಬದ ವೇಳೆ ಕಾರ್ಗಿಲ್‌ ಯೋಧರು, ಜಿಲ್ಲೆಯ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಕ್ರೀಡಾ ಸಾಧಕರನ್ನು ಶಾಸಕ ಆರ್‌.ವರ್ತೂರು ಪ್ರಕಾಶ್‌ ಸನ್ಮಾನಿಸಿದರು.

Advertisement

ಕೋಲಾರ ಜಿಲ್ಲಾ ಕ್ರೀಡಾ ಅಭಿವೃದ್ಧಿ ಅಕಾಡೆಮಿ ವತಿಯಿಂದ ನಗರದ ಮಿನಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾರ್ಗಿಲ್‌ ವಿಜಯಕ್ಕೆ ಕಾರಣರಾದ ಹವಾಲ್ದಾರ್‌ ಟಿ.ಯು.ಜನಾದ‌ìನ್‌, ಹವಾಲ್ದಾರ್‌ ಸಿ.ಎಂ.ನಾರಾಯಣಸ್ವಾಮಿ, ಎಲ್‌.ನಾಯಕ್‌ ಆಂಜನೇಯಬಾಬು ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್‌, ಕೋಲಾರದ ಜನತೆಗೆ ಸಂಕ್ರಾಂತಿಯ ಶುಭಾಶಯಗಳನ್ನು ಕೋರಿ, ಜಿಲ್ಲೆಗೆ ಒಳ್ಳೆಯ ಮಳೆ- ಬೆಳೆಯಾಗಲಿ ಎಂದು ಹಾರೈಸಿದರು. ಕನ್ನಡಸೇನೆ ರಾಜಾಧ್ಯಕ್ಷ ಕುಮಾರ್‌, ಜಿಲ್ಲೆಯಲ್ಲಿ ನಡೆಯುತ್ತಿರುವ ನೀರಾವರಿ ಹೋರಾಟ ಮತ್ತಷ್ಟು ತೀವ್ರಗೊಳ್ಳಬೇಕು ಎಂದರು. ಫೆ.18ರಂದು ರಾಜ್ಯದ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವಂತೆ ಜನತೆಯನ್ನು ಕೋರಿದರು.

ಹಾಸ್ಯ ಕಲಾವಿದ ಪ್ರಾಣೇಶ್‌ ಮಾತನಾಡಿ, ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿರುವ ನಗು ನೋವನ್ನು ಮರೆಸಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಇಂದಿನ ಒತ್ತಡದ ಜೀವನದಿಂದಾಗಿ ಪರಸ್ಪರ ಬಾಂಧವ್ಯ ದೂರವಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಗೆಹಬ್ಬಗಳು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ ಎಂದು ಆಶಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ ಭಾಜನರಾದ ಯೋಗೇಶ್‌, ಭರತನಾಟ್ಯ ಕಲಾವಿದ ಮಾಲೂರಿನ ಜೆಎಸ್‌ಎಸ್‌ ಶಾಲೆಯ ಕನ್ನಡ ಪೂರ್ಣಶ್ರೀ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್‌.ಅಮೃತಾ, ಸಾಯಿ ನಾಗೇಂದ್ರ, ಜೆ.ವರ್ಷಿತಾ, ಸ್ವಾತಿ, ನಿತಿನ್‌ ಯಾದವ್‌ ಅವರನ್ನು ಸನ್ಮಾನಿಸಲಾಯಿತು.

Advertisement

ಹಾಸ್ಯ ಕಲಾವಿದರಾದ ನರಸಿಂಹಜೋಷಿ, ಬಸವರಾಜ್‌ ಮಹಾಮನಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ತಮ್ಮ ಸಾಹಿತ್ಯ ಹಾಗೂ ಹಾಸ್ಯದ ಮಿಶ್ರಣದೊಂದಿಗೆ ನೆರೆದಿದ್ದ ಪ್ರೇಕ್ಷಕರಿಗೆ ಉಣಬಡಿಸಿದರು. ಪ್ರಾಣೇಶ್‌, ನರಸಿಂಹಜೋಷಿ, ಮಹಾಮನಿ ಅವರ ನವಿರಾದ ಹಾಸ್ಯ ಚಟಾಕಿಗಳು ಜನತೆಯನ್ನು ಸಂತಸದಲ್ಲಿ ತೇಲಿಸಿದವು.

ಕೋಚಿಮುಲ್‌ ನಿರ್ದೇಶಕ ಕೆ.ವೈ.ನಂಜೇಗೌಡ,  ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್‌.ಗಣೇಶ್‌, ನಗರಸಭೆ ಸದಸ್ಯರಾದ ಪ್ರಸಾದ್‌ ಬಾಬು, ಮುರಳೀಗೌಡ, ಸೋಮಶೇಖರ್‌, ಬಂಗಾರಪೇಟೆ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಬಿಜೆಪಿ ರಾಜ್ಯ ಯುವ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಎಪಿಎಂಸಿ ನಿರ್ದೇಶಕ ದೇವರಾಜ್‌ ಇದ್ದರು. ಕುರುಬರಪೇಟೆ ವೆಂಕಟೇಶ್‌ ಸ್ವಾಗತಿಸಿದರೆ, ಶಿವಕುಮಾರ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next