Advertisement

Gambhir; ಕೊಹ್ಲಿಗೆ ರನ್ ಗಳಿಸುವ ಹಸಿವಿದೆ, ಪ್ರತಿ ಪಂದ್ಯದ ಬಳಿಕ ತೀರ್ಪು ಅಗತ್ಯವಿಲ್ಲ

07:30 PM Oct 14, 2024 | Team Udayavani |

ಬೆಂಗಳೂರು: ”ವಿರಾಟ್ ಕೊಹ್ಲಿ ಚೊಚ್ಚಲ ಪಂದ್ಯವಾಡಿದಾಗ ಹೇಗಿದ್ದರೋ ಹಾಗೆಯೇ ರನ್ ಗಳಿಸಲು ಹಸಿದವರಾಗಿಯೇ ಉಳಿದಿದ್ದಾರೆ, ಪ್ರತಿ ಪಂದ್ಯದ ನಂತರ ಅವರ ಕುರಿತು ತೀರ್ಪು ನೀಡಬಾರದು” ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಸೋಮವಾರ  ಸುದ್ದಿಗಾರರೊಂದಿಗೆ ಮಾತನಾಡಿದ ಗಂಭೀರ್ “ನೋಡಿ, ವಿರಾಟ್ ವಿಶ್ವ ದರ್ಜೆಯ ಕ್ರಿಕೆಟಿಗ ಎಂಬ ನನ್ನ ಆಲೋಚನೆಗಳು ಯಾವಾಗಲೂ ಸ್ಪಷ್ಟವಾಗಿವೆ. ಇಷ್ಟು ಸುದೀರ್ಘ ಅವಧಿಗೆ ಅವರು ಪ್ರದರ್ಶನ ನೀಡಿದ್ದಾರೆ. ರನ್ ಗಳಿಸಬೇಕೆಂಬ ಅವರ ಹಸಿವು ಯಾವಾಗಲೂ ಅವರಲ್ಲಿ ಇರುತ್ತದೆ, ಆ ಹಸಿವೆಯೇ ಅವರನ್ನು ವಿಶ್ವ ದರ್ಜೆಯ ಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಶೀಘ್ರದಲ್ಲೇ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಈ ಮೂರು ಟೆಸ್ಟ್ ಪಂದ್ಯಗಳನ್ನು ಸರಣಿಯಲ್ಲಿ ಮತ್ತು ನಂತರ ಆಸ್ಟ್ರೇಲಿಯದಲ್ಲಿ ಉತ್ತಮ ಆಟವಾಡುತ್ತಾರೆ ಎಂದು ನನಗೆ ಖಾತ್ರಿಯಿದೆ.ಒಂದು ಕಳಪೆ ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ನಿರ್ಣಯಿಸಬಾರದು” ಎಂದು ಗಂಭೀರ್ ಹೇಳಿದರು.

“ಪ್ರತಿಯೊಬ್ಬರಿಗೂ ಪ್ರತಿದಿನವೂ ಉತ್ತಮವಾಗಿರುವುದಿಲ್ಲ. ನಮ್ಮಲ್ಲಿರುವ ಉತ್ಸಾಹದ ರೀತಿಯೆಂದರೆ ನಾವು ನಮ್ಮ ಆಟಗಾರರನ್ನು ಬೆಂಬಲಿಸುತ್ತೇವೆ ಎಂದು ನಾನು ಭಾವಿಸುತ್ತೇನೆ. ಆಟಗಾರರಿಗೆ ಬೆಂಬಲ ನೀಡುವುದು ನನ್ನ ಕೆಲಸ. ನನ್ನ ಕೆಲಸ ಯಾರನ್ನೂ ಕೈಬಿಡದೆ, ಅತ್ಯುತ್ತಮವಾದ 11 ಆಟಗಾರರನ್ನು ಆಯ್ಕೆಮಾಡುವುದು” ಎಂದರು.

Advertisement

ಪ್ರತಿಯೊಬ್ಬರೂ ಹಸಿದಿದ್ದಾರೆ ಎಂದು ನನಗೆ ಖಾತ್ರಿಯಿದೆ ಮತ್ತು ತಂಡಕ್ಕೆ ಸತತವಾಗಿ ಎಂಟು ಟೆಸ್ಟ್ ಪಂದ್ಯಗಳಿವೆ. ಹೀಗಾಗಿ, ಉತ್ತಮ ಪ್ರದರ್ಶನ ನೀಡಲು ಇದು ಆರಂಭವಾಗಿದೆ, ”ಎಂದು ಗಂಭೀರ್ ಹೇಳಿದರು.

ನ್ಯೂಜಿಲ್ಯಾಂಡ್ ವಿರುದ್ಧ ಬುಧವಾರ(ಅ16) ಪ್ರಾರಂಭವಾಗುವ ಮೂರು ಟೆಸ್ಟ್ ಪಂದ್ಯಗಳಲ್ಲಿ, ಮುಂದಿನ ತಿಂಗಳು ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್ ವೈಭವ ಮರಳಿ ಪಡೆಯುವುದು ಭಾರತಕ್ಕೆ ನಿರ್ಣಾಯಕವಾಗಿದೆ. ಕೊಹ್ಲಿ ಕೊನೆಯ ಎಂಟು ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಕೇವಲ ಒಂದು ಅರ್ಧಶತಕ ಗಳಿಸಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ ಗರಿಷ್ಟ ಸ್ಕೋರ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next