Advertisement

ನೆಟ್‌ನಲ್ಲಿ ಕೊಹ್ಲಿ ಬೌಲಿಂಗ್‌ ತಾಲೀಮ್‌

01:37 AM May 31, 2019 | Team Udayavani |

ಲಂಡನ್‌: ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಖ್ಯಾತಿಯ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಅವರೊಬ್ಬ ಕಠಿನ ಆಟಗಾರ ಎಂದೆನಿಸಿಕೊಂಡಿದ್ದಾರೆ. ಹಾಗಾಗಿ ಕೊಹ್ಲಿ ಯಾವುದೇ ವಿಷಯವನ್ನು ಹಗುರವಾಗಿ ಕಾಣುತ್ತಿಲ್ಲ.

Advertisement

ಭಾರತವು ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಜೂನ್‌ 5ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಇದಕ್ಕಾಗಿ ಭಾರತೀಯ ಆಟಗಾರರೆಲ್ಲರೂ ಪ್ರತಿದಿನ ನೆಟ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ಕೊಹ್ಲಿ ಅವರ ಸಿದ್ಧತೆ ಬ್ಯಾಟಿಂಗಿಗೆ ಮಾತ್ರ ಸೀಮಿತವಾಗಿಲ್ಲ. ನಂ. ವನ್‌ ಬ್ಯಾಟ್ಸ್‌ಮನ್‌ ಖ್ಯಾತಿಯ ಅವರು ಗುರುವಾರದ ನೆಟ್ ವೇಳೆ ಬೌಲಿಂಗ್‌ ಅಭ್ಯಾಸ ನಡೆಸಿ ಗಮನ ಸೆಳೆದರು. ಭಾರತದ ಆರನೇ ಬೌಲಿಂಗ್‌ ಆಯ್ಕೆಗೆ ಕೊಹ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ನಾಲ್ಕು ವಿಕೆಟ್: ಬ್ಯಾಟಿಂಗ್‌ನಲ್ಲಿ ಹಲವು ದಾಖಲೆ ಮಾಡುತ್ತಿರುವ ಕೊಹ್ಲಿ ಬೌಲಿಂಗ್‌ನಲ್ಲಿ ಮಿಂಚು ಹರಿಸಿಲ್ಲ. ಆಡಿದ 228 ಪಂದ್ಯಗಳಲ್ಲಿ ಅವರು ಕೇವಲ 48 ಓವರ್‌ ಎಸೆದಿದ್ದರು ಮತ್ತು ನಾಲ್ಕು ವಿಕೆಟ್ ಹಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next