Advertisement

ಕೊಡ್ಲಿಪೇಟೆ: ಕಾಲೇಜಿನಲ್ಲಿ ಯೋಗ ದಿನಾಚರಣೆ

11:53 PM Jun 23, 2019 | sudhir |

ಶನಿವಾರಸಂತೆ: ಸಮಿಪದ ಕೊಡ್ಲಿಪೇಟೆ ಕಿರಿಕೊಡ್ಲಿ ಪೀಠದ ಶ್ರಿ ಸದಾಶಿವಸ್ವಾಮೀಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

Advertisement

ಕಿರಿಕೊಡ್ಲಿ ಮಠಾದೀಶ ಸದಾಶಿವ ಸ್ವಾಮೀಜಿ ಅವರು ವಿದ್ಯಾಸಂಸ್ಥೆ ಸಭಾಂಗಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೊಂದಿಗೆ ಸ್ವತ: ಯೋಗ ಮತ್ತು ಧ್ಯಾನದ ಮೂಲಕ ಯೋಗ, ಧ್ಯಾನ ಮತ್ತು ಪ್ರಾಣಾಪಾಯ ಅಭ್ಯಾಸ ನಡೆಸಿದರು.

ಭಾರತದ ಮೂಲ ಪರಂರೆಯಾದ ಯೋಗ ಮತ್ತು ಧ್ಯಾನವನ್ನು ಇಂದಿನ ಆಧುನಿಕ ಕಾಲಮಾನದಲ್ಲಿ ವಿಶ್ವದ್ಯಾದಂತ ಜನರು ಅಳವಡಿಸಿಕೊಳ್ಳುತ್ತಿರುವುದು ಹೆಮ್ಮೆಯಾಗಿದೆ ಎಂದರು. ಆದ್ಯಾತ್ಮಿಕ ಚಿಂತನೆ, ಧ್ಯಾನ ಯೋಗ ಇವುಗಳ ಅಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಿಸುತ್ತದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸೇರಿದಂತೆ ವಿದ್ಯಾರ್ಥಿಗಳು ಸಹ ಪ್ರತಿದಿನ ವ್ಯಾಯಾಮದ ಜೊತೆಯಲ್ಲಿ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಇವುಗಳ ಅಭ್ಯಾಸವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆ ಪ್ರಾಂಶುಪಾಲೆ ವಿಶ್ವ ಯೋಗ ದಿನ ಹಾಗೂ ಯೋಗದ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಕಾರ್ಯದರ್ಶಿ ನಂಜುಂಡಯ್ಯ, ದೈಹಿಕ ಶಿಕ್ಷಣ ಶಿಕ್ಷಕರಾದ ಗಿರೀಶ್‌, ಸಂಪತ್‌ಕುಮಾರ್‌, ರೇಣುಕ, ಸಿರಾಜ್‌ ದೌಲ, ಭಾಗ್ಯಜೋತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next