Advertisement

ಕೊಡ್ಲಿಪೇಟೆ: ಎಸ್‌.ಕೆ.ಎಸ್‌.ಎಸ್‌.ಎಫ್ನಿಂದ ಸ್ವಚ್ಛತೆ

11:43 PM Jul 02, 2019 | Team Udayavani |

ಶನಿವಾರಸಂತೆ: ಕೊಡ್ಲಿಪೇಟೆ ಎಸ್‌.ಕೆ.ಎಸ್‌.ಎಸ್‌.ಎಫ್ ಘಟಕ ವಿಖಾಯ ವತಿಯಿಂದ ಕೊಡ್ಲಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಜಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

Advertisement

ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ತುಂಗಾ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಕೇಂದ್ರದ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಯಾಗಿದೆ ಎಂದರು.

ಖಾಸಗಿ ಸಂಘ-ಸಂಸ್ಥೆಗಳು ಪರಿಸರ ಜಾಗೃತಿ ಮತ್ತು ಸ್ವಚ್ಛತ್ತೆ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳುವುದ್ದರಿಂದ ಗ್ರಾಮ, ಪಟ್ಟಣ ಸ್ವಚ್ಛಗೊಳ್ಳುತ್ತದೆ ಈ ನಿಟ್ಟಿನಲ್ಲಿ ಎಸ್‌ಕೆಎಸ್‌ಎಸ್‌ಎಫ್ ಸಂಸ್ಥೆ ವತಿಯಿಂದ ಸ್ವಚ್ಛತ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನಿಯ ಎಂದರು.

ಎಸ್‌.ಕೆ.ಎಸ್‌.ಎಸ್‌.ಎಫ್ ಜಿಲ್ಲಾ ಸಂಯೋಜಕ ನೆಫ‌ಲ್ ಮಾತನಾಡಿ, ಮಳೆಗಾಲ ಪ್ರಾರಂಭವಾಗಿರುವುದ್ದರಿಂದ ನಾನಾ ತರಹದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ, ರೋಗ ಹರಡುವ ಮೊದಲು ಸ್ವಚ್ಛತೆೆಯನ್ನು ಕಾಪಾಡಿಕೊಂಡರೆ ರೋಗವನ್ನು ತಡೆಗಟ್ಟಬಹುದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವಚ್ಛತೆೆ ಮತ್ತು ಪರಿಸರದ ಬಗ್ಗೆ ಕಾಳಜಿ ಹೊಂದುವಂತೆ ಮನವಿ ಮ,ಆಡಿದರು.

ಈ ಸಂದರ್ಭದಲ್ಲಿ ಕೊಡ್ಲಿಪೇಟೆ ಶಾಖೆಯ 20 ಕ್ಕಿಂತ ಹೆಚ್ಚಿನ ಕಾರ್ಯ ಕರ್ತರು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಜಾಗದಲ್ಲಿ ಬೆಳೆದ ಗಿಡಪೊದೆಗಳನ್ನು ಕಡಿದು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

Advertisement

ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಆರೋಗ್ಯ ಕೇಂದ್ರದ ಸಿಬಂದಿ ನವಿನ್‌, ಕವಿತಾ, ಎಸ್‌ವೈಎಸ್‌ ಜಿಲ್ಲಾ ಖಜಾಂಚಿ ಸಿದ್ದಿಕ್‌ಹಾಜಿ, ಪ್ರಮುಖರಾದ ಅಬ್ದುಲ್ ರಹೆಮಾನ್‌, ಇಬ್ರಾಹಿಂ, ಬಾನಿತ್‌ಹಾಜಿ, ಶರೀಫ್, ಇಬ್ರಾಹಿಂ ಬ್ಯಾಡಗೊಟ್ಟ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next