Advertisement
ನಿರ್ಮಾಣಮೀನುಗಾರರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಮುತುವರ್ಜಿಯಲ್ಲಿ ಕೋಡಿಯ ಭಾಗದಲ್ಲಿ ಮೀನುಗಾರಿಕಾ ಜೆಟ್ಟಿ ಬಹಳ ಸುಸಜ್ಜಿತವಾಗಿ ನಿರ್ಮಾಣಗೊಂಡಿತ್ತು. ಅನೇಕ ಮೀನುಗಾರರು ಇದನ್ನು ಇನ್ನು ಮುಂದೆ ನಮ್ಮ ಸಮಸ್ಯೆಗಳು ನೀಗಿದಂತೆ ಎಂದು ಸಂಭ್ರಮಿಸಿ ಸ್ವಾಗತಿಸಿದ್ದರು. ಆದರೆ ದಿನಗಳೆದಂತೆ ನಡೆದುದೇ ಬೇರೆ.
ಮೀನುಗಾರರಿಗೆ ಜೆಟ್ಟಿ ಆದಂದಿನಿಂದ ಇಲ್ಲಿಯ ತನಕ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಜತೆಗೆ ರಾತ್ರಿಯ ಸಮಯದಲ್ಲಿ ಬೆಳಕು ಇಲ್ಲ. ಕತ್ತಲೆಯಲ್ಲಿ ಮೀನುಗಾರಿಕೆಗೆ ತೆರಳುವ ಸಂಕಷ್ಟ ಹೇಳತೀರದು. ಕತ್ತಲೆಯಲ್ಲಿ, ಮುಂಜಾವಿನ ಮುಸುಕಿನಲ್ಲಿ ತಿಳಿಯದೆ ಯಾರಧ್ದೋ ಮೀನುಗಾರಿಕೆಯ ಬಲೆಯನ್ನು ಯಾರೋ ಬೋಟಿಗೆ ಅಳವಡಿಸಿಕೊಂಡು ಹೋದಂತಹ ಪ್ರಸಂಗ ಅನೇಕ ಬಾರಿ ನಡೆದಿತ್ತು. ಇದು ಸಣ್ಣಮಟ್ಟಿನ ಘರ್ಷಣೆಗೂ ಕಾರಣವಾಗಿತ್ತು. ಅಷ್ಟಲ್ಲದೇ ಇನ್ನೊಂದು ಬೋಟಿನವರು ಆ ದಿನ ಮೀನುಗಾರಿಕೆಗೆ ತೆರಳಲಾರದೇ ಚಡಪಡಿಸಿದ್ದೂ ನಡೆದಿದೆ. ಡೀಸೆಲ್ ಕಳವು
ಬೆಳಕಿಲ್ಲದ ಸಮಸ್ಯೆಯನ್ನು ದುಷ್ಕರ್ಮಿಗಳು ಸರಿಯಾಗಿ ದುರು ಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೋಟಿನಿಂದ ಕಳವು ಪ್ರಕರಣ ಹೆಚ್ಚುತ್ತಿದೆ. ಬಲೆ, ಸೀಸ, ಡೀಸೆಲ್ ಹೀಗೆ ಅನೇಕ ವಸ್ತುಗಳು ಕಳವುಗೊಳ್ಳುತ್ತಿವೆ. ನಿಲ್ಲಿಸಿದ್ದ ಬೋಟಿನಿಂದ ಯಾರು ಏನನ್ನು ಯಾವಾಗ ಕದ್ದರು ಎನ್ನುವುದು ನಿಗೂಢವಾಗಿಯೇ ಉಳಿಯುತ್ತದೆ. ಹೀಗೆ ಕಳವಾದಾಗ ಕೇಸು ಆಗುತ್ತದೆ, ದಿನ ಪತ್ರಿಕೆಯಲ್ಲಿಯೂ ಪ್ರಕಟವಾಗುತ್ತದೆ. ಆದರೆ ಅದಕ್ಕೊಂದು ಪರಿಹಾರ ದೊರೆಯು ವುದಿಲ್ಲ. ಕಳ್ಳತನ ನಿಲ್ಲುವುದೂ ಇಲ್ಲ.
Related Articles
Advertisement
ಮನವಿಈ ಭಾಗದ ಮೀನುಗಾರರು 1 ವರ್ಷದ ಹಿಂದೆ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ನೀಡಿ ವಿದ್ಯುತ್ ಕಂಬ, ಹೈಮಾಸ್ಟ್ ದೀಪ ಅಳವಡಿಸಬೇಕೆಂದು ಕೋರಿಕೆ ಇಟ್ಟಿದ್ದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅನೇಕ ಬಾರಿ ಪುರಸಭೆ ಮುಖ್ಯಾಧಿ ಕಾರಿಗಳಿಗೆ ಸಾರ್ವಜನಿಕರ ಎದುರೇ ದೂರವಾಣಿ ಮುಖಾಂತರ ಅತೀ ಶೀಘ್ರದಲ್ಲಿ ಹೈಮಾಸ್ಟ್ ದೀಪ ಅಳವಡಿಸಿ ಎಂದು ಸೂಚಿಸಿದ್ದರು. ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಕೂಡ ಜನರ ಬೇಡಿಕೆಗೆ ಪೂರಕವಾದ ಸ್ಪಂದನೆ ನೀಡಿದ್ದರು. ಹಾಗಿದ್ದರೂ ಈ ಸ್ಥಳಕ್ಕೆ ಮೀನುಗಾರರ ಅನುಕೂಲಕ್ಕಾಗಿ ಹೈಮಾಸ್ಟ್ ದೀಪ ಅಳವಡಿಸುವ ಕಾರ್ಯ ನಡೆಯಲಿಲ್ಲ. ಅಳವಡಿಸಲಿ
ಅನೇಕ ಸಮಯದಿಂದ ಬೇಡಿಕೆ ಇದ್ದರೂ ಈವರೆಗೂ ದೀಪ ಅಳವಡಿಸಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು.
–ಕೋಡಿ ಅಶೋಕ್ ಪೂಜಾರಿ,
ಸ್ಥಳೀಯರು ಟೆಂಡರ್ ಆಗಿದೆ
ಕೋಡಿ ಮೀನುಗಾರಿಕಾ ಜೆಟ್ಟಿಯಲ್ಲಿ ಹೈ ಮಾಸ್ಟ್ ದೀಪ ಅಳವಡಿಸಲು ಜನಪ್ರತಿನಿಧಿಗಳಿಂದ ಸೂಚನೆ ಬಂದಿದ್ದು ಅಳವಡಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. 1.5 ಲಕ್ಷ ರೂ. ವೆಚ್ಚದಲ್ಲಿ ದೀಪ ಅಳವಡಿಕೆಗೆ ಟೆಂಡರ್ ಆಗಿದೆ. ಶೀಘ್ರದಲ್ಲಿ ಅಳವಡಿಸಲಾಗುವುದು.
-ಗೋಪಾಲಕೃಷ್ಣ ಶೆಟ್ಟಿ
ಮುಖ್ಯಾಧಿಕಾರಿ, ಪುರಸಭೆ