Advertisement
ಅವರು ರವಿವಾರ ಕುಂದಾಪುರ ಕೋಡಿಯ ನಿರ್ಮಾಣ ಹಂತದ ಮೀನು ಗಾರಿಕಾ ಜೆಟ್ಟಿ ಪ್ರದೇಶಕ್ಕೆ ರಾಜ್ಯ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯದರ್ಶಿ ವಿ. ರಶ್ಮಿ ಮಹೇಶ್ ಅವರೊಂದಿಗೆ ಭೇಟಿ ನೀಡಿ ಮಾತನಾಡಿದರು.
ಈ ವೇಳೆ ಕೋಡಿಯ ಜೆಟ್ಟಿಯನ್ನು ಡ್ರೆಜ್ಜಿಂಗ್ ಮಾಡಿ ಈಗಿರುವ 60 ಮೀ. ಜೆಟ್ಟಿಯನ್ನು ಇನ್ನೂ 100 ಮೀಟರ್ ವಿಸ್ತರಿಸಿದರೆ ಹೆಚ್ಚಿನ ಬೋಟ್‌ಗಳಿಗೆ ಅನುಕೂಲವಾಗಲಿದೆ ಎಂದು ಇಲ್ಲಿನ ಮೀನುಗಾರರು ಸಚಿವರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಮಾತನಾಡಿದ ಸಚಿವರು, ಇಲ್ಲಿ ಡ್ರೆಜ್ಜಿಂಗ್ ಮಾಡಿ ಇನ್ನೂ 100 ಮೀ. ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮೀನುಗಾರಿಕಾ ಕಾರ್ಯದರ್ಶಿ ರಶ್ಮಿ ಅವರಿಗೆ ಸೂಚಿಸಿದರು. ಸಮ್ಮಾನ
ಈ ಸಂದರ್ಭದಲ್ಲಿ ಸಚಿವರು ಹಾಗೂ ಕಾರ್ಯದರ್ಶಿ ರಶ್ಮಿ ಅವರನ್ನು ಮೀನುಗಾರರ ಪರವಾಗಿ ಸಮ್ಮಾನಿಸಲಾಯಿತು. ಮೀನುಗಾರಿಕಾ ಇಲಾಖೆಯ ನಿರ್ದೇಶಕ ರಾಮಕೃಷ್ಣ, ಜಿಲ್ಲಾ ನಿರ್ದೇಶಕ ಪಾರ್ಶ್ವನಾಥ್, ಬಿಜೆಪಿ ಮುಖಂಡರಾದ ಮಂಜು ಬಿಲ್ಲವ, ಮಹೇಶ್ ಪೂಜಾರಿ, ಅಶೋಕ್ ಪೂಜಾರಿ, ಗುಣರತ್ನಾ, ನಾಗರಾಜ್ ಕಾಂಚನ್, ಪುಂಡಲೀಕ ಬಂಗೇರ, ಜಯ ಪೂಜಾರಿ, ಭಾಸ್ಕರ ಪುತ್ರನ್, ವಿಜಯ ಖಾರ್ವಿ, ರವೀಂದ್ರ ಖಾರ್ವಿ, ಸಂಜೀವ ಪೂಜಾರಿ, ತಿಮ್ಮಪ್ಪ ಖಾರ್ವಿ, ಶಂಕರ ಪೂಜಾರಿ, ನಾಗೇಶ್ ಪುತ್ರನ್, ರಾಮ ಪೂಜಾರಿ, ರಘು ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
Related Articles
ಎಲ್ಲ ಬಂದರುಗಳಲ್ಲಿ ಹೂಳು ತುಂಬಿದ್ದು, ಮೀನುಗಾರಿಕೆಗೆ ತೊಡಕಾಗಿದ್ದು, ಇದಲ್ಲದೆ ಗಂಗೊಳ್ಳಿ – ಕೋಡಿ ಅಳಿವೆ ಭಾಗದಲ್ಲಿಯೂ ಹೂಳು ತುಂಬಿರುವುದರಿಂದ ಸಮಸ್ಯೆಯಾಗುತ್ತಿದೆ ಎನ್ನುವುದಾಗಿ ಮೀನುಗಾರರು ಸಚಿವರ ಗಮನಕ್ಕೆ ತಂದಾಗ, ಬಂದರು ಮತ್ತು ಮೀನುಗಾರಿಕಾ ಇಲಾಖೆಯಿಂದಲೇ ಹೊಸದಾಗಿ ಅಂದಾಜು 10 ಕೋ.ರೂ. ವೆಚ್ಚದ ಡ್ರೆಜ್ಜಿಂಗ್ ಯಂತ್ರ ಖರೀದಿ ಮಾಡಲಾಗುವುದು ಎಂದವರು ಭರವಸೆ ನೀಡಿದರು.
Advertisement