Advertisement

Malpe; ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌: ಮುಳುಗುತ್ತಿದ್ದ ಇಬ್ಬರ ರಕ್ಷಣೆ

10:25 PM Feb 17, 2024 | Team Udayavani |

ಮಲ್ಪೆ: ಈಜಲು ಹೋಗಿ ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಸ್ಥಳೀಯ ಸೀಬರ್ಡ್‌ ಮತ್ತು ಡೆಲ್ಟಾ ಬೋಟಿನ ಸಿಬಂದಿ ರಕ್ಷಿಸಿದ ಘಟನೆ ಶನಿವಾರ ಕೋಡಿ ಬೆಂಗ್ರೆ ಡೆಲ್ಟಾ ಬೀಚ್‌ನಲ್ಲಿ ನಡೆದಿದೆ.

Advertisement

ಬೆಂಗಳೂರು ಮೂಲದವರೆನ್ನಲಾದ ಇಬ್ಬರು ಯುವಕರು, ಮೂರು ಮಂದಿ ಯುವತಿಯರು ಸೇರಿದಂತೆ ಒಟ್ಟು 5 ಮಂದಿ ಶನಿವಾರ ಮಧ್ಯಾಹ್ನ ಬೀಚ್‌ಗೆ ಬಂದಿದ್ದರು. ಇವರಲ್ಲಿ ಇಬ್ಬರು ಯುವಕರು ನೀರಿಗಿಳಿದು ಈಜಲು ಮುಂದಾಗಿದ್ದರು. ಈಜುತ್ತ ಮುಂದೆ ಹೋದ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು. ಇವರ ಗಲಾಟೆ ಕೇಳಿ ಸಮೀಪದ ವಾಟರ್‌ ಸ್ಪೋರ್ಟ್ಸ್ ಬೋಟಿನ ವಿವೇಕ್‌ ಪುತ್ರನ್‌, ರಮೇಶ್‌ ಬಂಗೇರ, ಕೃಷ್ಣ ಅವರು ತತ್‌ಕ್ಷಣ ಧಾವಿಸಿ ಬಂದರು ಬೋಟಿನ ಸಹಾಯದಿಂದ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next