Advertisement
ಪ್ರಥಮ ದಿನದ ಉಪನ್ಯಾಸದಲ್ಲಿ ದೇಶೀ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ವಿಷಯದ ಮೇಲೆ ಮುಂಬಯಿ ಐಐಟಿಬಿಯ ಮೊನಾಷ್ ರೀಸರ್ಚ್ ಸಿ.ಇ.ಒ. ಡಾ| ಮುರಳಿ ಶಾಸ್ತ್ರಿ ಅವರು ಉಪನ್ಯಾಸ ನೀಡಿ ದೇಶೀಯ ತಂತ್ರಜ್ಞಾನಗಳ ಆವಿಷ್ಕಾರಗಳ ಸಂಖ್ಯೆ ಹೆಚ್ಚಾಗಬೇಕು ಮತ್ತು ನಮ್ಮ ಯುವ ತಂತ್ರಜ್ಞರು ಈ ನಿಟ್ಟಿನಲ್ಲಿ ಯೋಚಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇದರ ರಿಜಿಸ್ಟಾರ್ ಡಾ| ನಾರಾಯಣ ಸಭಾತ್ ಅವರು ವಹಿಸಿದ್ದರು.
ಎರಡನೇ ದಿನದ ಉಪನ್ಯಾಸವನ್ನು ನೀಡಿದ ನ್ಯಾಯವಾದಿ ಎ.ಎಸ್.ಎನ್. ಹೆಬ್ಟಾರ್ ಅವರು ಕರಾವಳಿ ಕರ್ನಾಟಕದಲ್ಲಿ ಪ್ರಕಟನಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ತೇಜಕ ಎಂಬ ವಿಷಯದ ಕುರಿತಾಗಿ ಮಾತನಾಡಿ ಕಳೆದ ಹಲವಾರು ದಶಕಗಳಿಂದ ಕರಾವಳಿಯಲ್ಲಿ ಆಗಿರುವ ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಅದರಲ್ಲಿ ಆಗಿರುವ ಪಲ್ಲಟಗಳ ಕುರಿತಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಆಫ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅವರು ವಹಿಸಿದ್ದರು. ಮೂರನೇ ಮತ್ತು ಅಂತಿಮ ದಿನದ ದತ್ತಿನಿಧಿ ಉಪನ್ಯಾಸವನ್ನು ಸಮುದಾಯ ಸೇವೆಗಳಿಗೆ ಆರೋಗ್ಯ ಸೇವೆಗಳು ಎಂಬ ವಿಷಯದ ಮೇಲೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇದರ ಉಪ ಕುಲಪತಿ ಡಾ| ಎಚ್. ವಿನೋದ್ ಭಟ್ ನೀಡಿದರು. ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಇದರ ಪ್ರೊ| ಚಾನ್ಸ್‌ಲರ್ ಡಾ| ಹೆಚ್.ಎಸ್. ಬಲ್ಲಾಳ್ ಅವರು ವಹಿಸಿದ್ದರು.
Related Articles
Advertisement