Advertisement

ಕೊಡೇರಿ ಬಂದರು ಅವೈಜಾನಿಕ ಕಾಮಗಾರಿಯಿಂದ ಸಮಸ್ಯೆ: ಗ್ರಾಮಸ್ಥರ ಪ್ರತಿಭಟನೆ

06:16 PM Nov 06, 2020 | sudhir |

ಉಪ್ಪುಂದ : ಕೊಡೇರಿ ಕಿರು ಬಂದರು ಕಾಮಗಾರಿಯಲ್ಲಿ ಬಂದರು ಮತ್ತು ಮೀನುಗಾರಿ ಇಲಾಖೆಯ ಅವೈಜಾನಿಕ ಕಾಮಗಾರಿಯಿಂದ ಕಿರಿಮಂಜೇಶ್ವರ ಗ್ರಾಮದ ಜನತೆಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಮೀನುಗಾರರು ನ.6ರಂದು ಕೊಡೇರಿ ಬಂದರಿನಲ್ಲಿ ಪ್ರತಿಭಟನೆ ನಡೆಸಿದರು.

Advertisement

ಕಿರಿಮಂಜೇಶ್ವರ ಶ್ರೀ ರಾಮ ಸೇವಾ ಸಮಿತಿ ಮತ್ತು ಮಹಾಗಣಪತಿ ಸೇವಾ ಸಮಿತಿ ಹಾಗೂ ಕಿರಿಮಂಜೇಶ್ವರ ಗ್ರಾಮಸ್ಥರು ಪ್ರತಿಭಟನೆಯ ನೇತೃತವವನ್ನು ವಹಿಸಿದರು.

ಮೀನುಗಾರಿಕೆ ಇಲಾಖೆ ಯಾವುದೇ ಮೂಲಭೂತ ವ್ಯವಸ್ಥೆಗಳನ್ನು ಮಾಡದೆ ತಾತ್ಕಲಿಕವಾಗಿ ಪಶ್ಚಿಮ ಭಾಗದ ಮೀನು ಹರಾಜು ಪ್ರಕ್ರಿಯೆಗೆ ಅನುಮತಿ ನೀಡಿರುವುದು, ಸೈಡ್‌ ರಿಮಿಟ್ಟ್ಮೆಂಟ್‌ ಮಾಡದೆ ಡ್ರಜ್ಜಿಂಗ್‌ ಕಾಮಗಾರಿ ಮಾಡುವ ನಿಧಾರವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ:ಗೋಹತ್ಯೆ ನಿಷೇಧ ಕುರಿತು ಇನ್ನಷ್ಟು ಚರ್ಚೆ ಅಗತ್ಯ: ಸಚಿವ ಡಾ.ಕೆ.ಸುಧಾಕರ್

ಬಂದರು ಕಾಮಗಾರಿ ಅನುಷ್ಠಾನಗೊಂಡು ಕೆಲಸ ಪ್ರಾರಂಭಗೊಂಡಾಗ ಈ ಭಾಗದ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಾಗ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳುವ ಭರವಸೆ ನೀಡಿರುವ ಮೀನುಗಾರಿಕಾ ಇಲಾಖೆ ಇದುವರೆಗೆ ಸಮಸ್ಯೆಗೆ ಸೂಕ್ತ ಕ್ರಮಕೈಗೊಳ್ಳದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಮೀನು ಹರಾಜು ಪ್ರಾಂಗಣ ಪಶ್ಚಿಮ ಭಾಗದ ಅಗಲ ಕಿರಿದಾದ ಸಮುದ್ರ ದಂಡೆಯ ಮೇಲೆ ನಿರ್ಮಿಸಿರುವುದು, ಹರಾಜು ಪ್ರಾಂಗಣ ತಲುಪಲು ಸಂಪರ್ಕ ಸೇತುವೆ ನಿರ್ಮಸದೆ ಇರುವುದು, ಸೈಡ್‌ ರಿವಿಟಮೆಂಟ್‌ ಇಲ್ಲದೆ ನೇರವಾಗಿ 2.5ಮೀಟರ್‌ ಡ್ರಜ್ಜಿಂಗ್‌ ಕಾಮಗಾರಿ ನಡೆಸಲು ತೆಗೆದುಕೊಂಡ ತೀರ್ಮಾನ. ಈ ರೀತಿ ಡ್ರಜ್ಜಿಂಗ್‌ ಮಾಡುವುದರಿಂದ ಪೂರ್ವ ಭಾಗದಲ್ಲಿ ವಾಸಿಸುವ ಕೊಡೇ ಭಾಗದ ಜನರ ಆಸ್ತಿಗಳ ನಷ್ಟ, ಕುಡಿಯವ ನೀರಿನ ಬಾವಿಗೆ ಉಪ್ಪು ನೀರು ಬರುವ ಸಾಧ್ಯತೆ, ಪಶ್ಚಿಮ ಭಾಗದ ಸಮುದ್ರ ದಂಡೆಯು ಕುಸಿತಗೊಂಡಿದ್ದು ಇನ್ನಷ್ಟು ಹಾನಿ ಸಂಭವಿಸುವ ಬಗ್ಗೆ ಪ್ರತಿಭಟನಾಕಾರರು ಕ್ರಮಕೈಗೊಳ್ಳ ದಿರುವ ಇಲಾಖೆಯ ವಿರುದ್ಧ ಪ್ರತಿಭಟಿಸಿದರು.

ಈ ಸಂದರ್ಭ ಆನಂದ ಪೂಜಾರಿ, ಶೇಖರ, ಸುಬ್ರಹ್ಮಣ್ಯ, ಅಂಬರಿಷ, ಕುಮಾರ, ಪ್ರಕಾಶ, ದೇವರಾಜ್‌, ಲಕ್ಷ್ಮಣ, ಟಿ.ಸುಕ್ರ, ನಾಗರಾಜ ಹಾಗೂ ಕಿರಿಮಂಜೇಶ್ವರ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next