Advertisement

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

02:01 AM Apr 25, 2024 | Team Udayavani |
ಮಡಿಕೇರಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ 1600 ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ರಾಮರಾಜನ್‌ ತಿಳಿಸಿದ್ದಾರೆ.
 ನಗರದ ಪೊಲೀಸ್‌ ಕವಾಯತು ಮೈದಾನದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯುಕ್ತರಾದ ಪೊಲೀಸ್‌ ಸಿಬಂದಿಗೆ, ಚುನಾವಣಾ ಸಂದರ್ಭ ಕರ್ತವ್ಯ ನಿರ್ವಹಿಸುವ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಈ ಬಾರಿ ಒಬ್ಬರು ಎಸ್‌ಪಿ, ಆರು ಡಿವೈಎಸ್‌ಪಿ, 14, ವೃತ್ತ ನಿರೀಕ್ಷಕರು, 45 ಎಸ್‌ಐ, 59 ಎಎಸ್‌ಐ, 678 ಸಿಬಂದಿ, 280 ಗೃಹರಕ್ಷಕ ದಳದ ಸಿಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಈ ಬಾರಿ ಗುಜರಾತ್‌ನ 2 ಕಂಪೆನಿ (180 ಮಂದಿ) ಪೊಲೀಸ್‌ ಸಿಬಂದಿ, 8 ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪೊಲೀಸ್‌ ದಳವನ್ನು ಬಂದೋಬಸ್ತ್ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
44 ಸೆಕ್ಟರ್‌ ಮೊಬೈಲ್‌ ಘಟಕ- ಚುನಾವಣಾ ಹಂತದಲ್ಲಿ ಜಿಲ್ಲೆಯ ಯಾವುದೇ ಮತಗಟ್ಟೆ ಬಳಿಯಲ್ಲಿ ನಡೆಯಬಹುದಾದ ಅಹಿತಕರ ಘಟನೆಗಳನು ನಿಗ್ರಹಿಸುವುದಕ್ಕೆ ಪೂರಕವಾಗಿ 44 ಸೆಕ್ಟರ್‌ ಮೊಬೈಲ್‌ ಘಟಕಗಳನ್ನು ಜಿಲ್ಲೆಯಾದ್ಯಂತ ನಿಯೋಜಿಸಲಾಗಿದೆ. ಯಾವುದೇ ವಿಭಾಗದಲ್ಲಿ ಅಹಿತಕರ ಘಟನೆಯ ಸುಳಿವು ದೊರೆತೊಡನೆ ಕ್ಷಿಪ್ರಗತಿಯಲ್ಲಿ ಸ್ಥಳಕ್ಕೆ ತೆರಳಿ ಅದನ್ನು ನಿಗ್ರಹಿಸುವಲ್ಲಿ ಈ ಘಟಕಗಳು ಕಾರ್ಯನಿರ್ವಹಿಸಲಿವೆ. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತದ ಫ್ಲೆçಯಿಂಗ್‌ ಸ್ಕ್ವಾಡ್‌ಗಳು ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಅತೀ ಸೂಕ್ಷ್ಮ-ಸೂಕ್ಷ್ಮ ಮತಗಟ್ಟೆಗಳಿಗೆ ಭದ್ರತೆ- ಜಿಲ್ಲೆಯಾದ್ಯಂತ ಈಗಾಗಲೆ ಗುರುತಿಸಲಾಗಿರುವ ಅತೀ ಸೂಕ್ಷ್ಮ ಮತ್ತು ಸೂಕ್ಷ್ಮ ಮತಗಟ್ಟೆಗಳಿಗೆ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗುತ್ತದೆ ಎಂದು ಎಸ್‌ಪಿ ಕೆ.ರಾಮರಾಜನ್‌ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next