Advertisement
1868ರಲ್ಲಿ ಆರಂಭಗೊಂಡ ಮಂಗಳೂರಿನ ಸರಕಾರಿ ಪ್ರಾಂತೀಯ ಶಾಲೆಯಲ್ಲಿ (ಪ್ರಾವಿನ್ಶಿಯಲ್ ಸ್ಕೂಲ್) 1895ರ ಜುಲೈಯಲ್ಲಿ ಕನ್ನಡ ಪಂಡಿತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಗುಜರಾಯಿಸಿದವರು ಶಿಶು ಸಾಹಿತಿ ಪಂಜೆ ಮಂಗೇಶರಾವ್ (1874 -1937) ಮತ್ತು ಕವಿ ನಂದಳಿಕೆ ಲಕ್ಷ್ಮೀನಾರಾಯಣಪ್ಪ (ಮುದ್ದಣ) (187 0 - 1901) ಮಾತ್ರ. 1889ರಿಂದ ಮೂರು ವರ್ಷ ಉಡುಪಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾಗ ಮುದ್ದಣರಿಗೆ ಸಿಗುತ್ತಿದ್ದುದು ತಿಂಗಳಿಗೆ 10 ರೂ. ಹೊಸ ಹುದ್ದೆಗೆ ಇದ್ದದ್ದು 20 ರೂ. ಆಗ ಬಹುತೇಕ ವಿದ್ಯಾಲಯಗಳ ಮುಖ್ಯಸ್ಥರಾಗಿ ಇಂಗ್ಲೆಂಡಿನಿಂದ ಬರುತ್ತಿದ್ದರು. ಈ ಅವಧಿಯ ಮುಖ್ಯೋಪಾಧ್ಯಾಯರು ಜೆ.ಜಿ. ಗೋಡ್ಲೆ. ಇಂಗ್ಲಿಷ್‌ನಲ್ಲಿ ಚೆನ್ನಾಗಿ ಸಂವಹನ ಮಾಡುವವರು ಆಯ್ಕೆಯಾಗುತ್ತಿದ್ದರು. ಈಗಲೂ ಅಷ್ಟೆ… ಪಂಜೆಯವರ ಇಂಗ್ಲಿಷ್ ಜ್ಞಾನ ಹುದ್ದೆಗೆ ಆಯ್ಕೆ ಮಾಡಿಸಿತು.
Related Articles
Advertisement
ಸಂದರ್ಶನ ಮಾಡಿದವರು 1. “ನೀವು ಕಾಲೇಜಿನಲ್ಲಿ ಕೆಲಸ ಮಾಡಿದವರು, ಸ್ನಾತಕೋತ್ತರ ಪದವಿಗೆ ಪಾಠ ಮಾಡಲು ಹೇಗೆ ಸಹಾಯಕ?’, 2. “ನೀವು ಪಾಠ ಮಾಡಿದವರು. ಸಂಶೋಧನೆ ಅನುಭವ ಬೇಕಲ್ಲ?’, 3. “ವಿ.ವಿ.ಯಲ್ಲಿ ಪ್ರಾಜೆಕ್ಟ್ ಕೆಲಸಗಳಿರುತ್ತವೆ. ನಿಮಗೆ ಇರುವುದು ಎರಡೇ ವರ್ಷ (ವಿ.ವಿ.ಯಲ್ಲಿ 2 ವರ್ಷ ವಿಸ್ತರಣೆಯಾಗುವುದಾದರೂ). ಇದಕ್ಕೆ ಐದು ವರ್ಷ ಬೇಕಾಗುತ್ತದೆ’ ಎಂದು ಕೇಳಿದರು. “ನನ್ನದೇ ಅನೇಕ ಸಂಶೋಧನ ಕಾರ್ಯಗಳಿವೆ’, “ನಾನು ಈಗಾಗಲೇ ಕೈಗೊಂಡ ಪ್ರಾಜೆಕ್ಟ್ಗಳಿದ್ದು ಅದನ್ನು ನಿಗದಿತ ಸಮಯದಲ್ಲಿ ಮುಗಿಸಬಹುದು’ ಎಂದು ಭಟ್ ಉತ್ತರಿಸಿದರು. ಭಟ್ಟರಿಗಿಂತ ಕಿರಿಯರಾದ, ಕಾಲೇಜಿನಲ್ಲೇ ಕೆಲಸ ಮಾಡಿದ ಪ್ರಾಧ್ಯಾಪಕರೊಬ್ಬರನ್ನು ಆಯ್ಕೆ ಮಾಡಿದರು ಎಂಬುದು ಮೊದಲ ಪ್ರಶ್ನೆಗೆ ಮರುಪ್ರಶ್ನೆ ಆಗಬಹುದು.
ಮುದ್ದಣರು ಆಗ ಸಂದರ್ಶನಕ್ಕೆ ಹೋದ ಸಂಸ್ಥೆ 1948ರಲ್ಲಿ ಪ್ರಥಮ ದರ್ಜೆ ಕಾಲೇಜು, ಈಗ ಮಂಗಳೂರು ವಿ.ವಿ. ಕಾಲೇಜು ಎನಿಸಿದೆ. ಭಟ್ ಸಂದರ್ಶನಕ್ಕೆ ಹೋದದ್ದು ಮಂಗಳೂರು ವಿ.ವಿ.ಗೆ ಮತ್ತು ಮುದ್ದಣ ಕುರಿತು ಭಟ್ ಒಂದು ಸ್ವತಂತ್ರ ಕೃತಿ, ಒಂದು ಸಂಪಾದಿತ ಕೃತಿ ಸಹಿತ 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು ಎಂಬುದರ ಹಿಂದೆ ಕಣ್ಣಿಗೆ ಕಾಣದ ಲಿಂಕ್ ಕಾಣುತ್ತದೆ. ಯೂರೋಪಿನ ಜೆ.ಜಿ. ಗೋಡ್ಲೆ 15-01-1895ರಿಂದ 11-11-1895ರ ವರೆಗೆ, ಕನ್ನಡಿಗ
ಯು. ಕೃಷ್ಣಯ್ಯ 12.11.1895ರಿಂದ 10-02-1896ರ ವರೆಗೆ ಮುಖ್ಯ ಶಿಕ್ಷಕರಾಗಿದ್ದರಿಂದ ಆರೇಳು ತಿಂಗಳ ಬಳಿಕ ಸಂದರ್ಶನ ನಡೆದಿದ್ದರೆ ಮುದ್ದಣ ಆಯ್ಕೆಯಾಗುತ್ತಿದ್ದರೋ ಏನೋ!
ಕಾಲಪ್ರಭಾವ- ಕಾಲಪ್ರವಾಹದಿಂದಲೋ, ಸಮಾಜದಲ್ಲಿ ಕಾಣುವ ವಿದ್ಯಮಾನಗಳ ಅನುಭವದಿಂದಲೋ ಪಂಜೆಯವರಂತಹ ಸಹೃದಯಿ ಗಳು, ಮುದ್ದಣರಂತಹ ಮುಗ್ಧರು ಈಗ ಸಿಗರು. ಆದರೆ ಆ ಗುಣ ಹೊಂದಿದ್ದರೆ, ಎಣಿಸಿದ್ದು ಕೈಗೆ ಸಿಗದಿದ್ದರೂ ಎಣಿಸದೆ ಇದ್ದ ಸ್ಥಾನದಲ್ಲಿ ಹತ್ತು, ನೂರು, ಸಾವಿರ ಪಟ್ಟು ಎತ್ತರಕ್ಕೇರುವುದು ಶತಃಸಿದ್ಧ. ಇವೆಲ್ಲ ಸಾಧ್ಯವಾಗುವುದು ಕೌಶಲ, ಪ್ರತಿಭೆ, ಪರಿಶ್ರಮದ ಆಧಾರದಲ್ಲಿ. ಪದನಿಮಿತ್ತಕ್ಕಿಂತ ಜ್ಞಾನಭಂಡಾರ ದೊಡ್ಡದು, ಪರಿಶ್ರಮ ಪಡುತ್ತ ಹೋದಲ್ಲಿ ವ್ಯಕ್ತಿತ್ವ, ಜ್ಞಾನ ಸಹಜವಾಗಿ ಎತ್ತರಕ್ಕೇರುತ್ತದೆ ಎಂಬ ಸಂದೇಶ ಇಲ್ಲಿದೆ.
-ಮಟಪಾಡಿ ಕುಮಾರಸ್ವಾಮಿ