ಜ್ಞಾನ ದೇಗುಲವಾಗಿ ಬೆಳೆಯಲಿ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಎಚ್.ಎಂ. ಮಹೇಶ್ವರಯ್ಯ ಆಶಯ ವ್ಯಕ್ತಪಡಿಸಿದರು.
Advertisement
ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ವಸತಿ ಶಾಲೆ (ಎಸ್‌ಬಿಆರ್) ಸುವರ್ಣ ಮಹೋತ್ಸವ ಹಾಗೂ ಶಾಲೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಉತ್ಸವದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎಸ್‌ಬಿಆರ್ ಸಂಸ್ಥೆ ಶ್ರೇಷ್ಠ ಮಟ್ಟಕ್ಕೆ ಬೆಳೆದಿದೆ. ನೂರರ ಸಂಭ್ರಮವನ್ನು ಆಚರಿಸಲಿ ಎಂದ ಅವರು, ಡಾ| ಶರಣಬಸವಪ್ಪ ಅಪ್ಪ ಅವರು
ಈಗ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ.
Related Articles
Advertisement
ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ಅನಿಲಕುಮಾರ ಬಿಡವೆ ಮಾತನಾಡಿ, ಎಸ್‌ಬಿಆರ್ ಶಾಲೆ ಗುಟ್ಟಮಟ್ಟದ ಶಿಕ್ಷಣದ ಮೂಲಕ ಪ್ರಸಿದ್ಧಿ ಪಡೆದಿದೆ. ವಿದ್ಯಾರ್ಥಿಗಳಿಗೆ ಯಾವ ರೀತಿಯ ಗುಣ ಮಟ್ಟದ ಶಿಕ್ಷಣ ನೀಡಬೇಕು ಎಂಬುದನ್ನು ಎಸ್‌ಬಿಆರ್ ಶಾಲೆ ಮೂಲಕ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಶರಣಬಸವಪ್ಪ ಅಪ್ಪ ಮತ್ತು ಶಾಲೆ ಪ್ರಾಂಶುಪಾಲರಾದ ಎನ್.ಎಸ್.ದೇವರಕಲ್ ಅವರು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ತೀರ ಕಡಿಮೆ ಇದೆ. ತಮಿಳುನಾಡಿನಲ್ಲಿ ಶೇ.50ರಷ್ಟು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಕೇವಲ ಶೇ.18ರಷ್ಟು ವಿದ್ಯಾರ್ಥಿಗಳು ಮಾತ್ರವೇ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ಎಸ್‌ಬಿಆರ್ ಸಂಸ್ಥೆಯಲ್ಲಿ ಕಲಿತ ಶೇ.85ರಷ್ಟು ವಿದ್ಯಾರ್ಥಿಗಳು ಸ್ನಾತಕೋತರ ಮಟ್ಟದಲ್ಲಿ ಓದುತ್ತಿದ್ದಾರೆ. ಇದಕ್ಕೆ ಎಸ್‌ಬಿಆರ್ ನಲ್ಲಿ ಸಿಗುತ್ತಿರುವ ಗುಣ ಮಟ್ಟದ ಶಿಕ್ಷಣವೇ ಕಾರಣ ಎಂದು ಹೇಳಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿವಿ ಕುಲಪತಿ ಡಾ| ನಿರಂಜನ ನಿಷ್ಠಿ, ಶರಣಬಸವ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ| ಶಿವದತ್ತ ಹೊನ್ನಳ್ಳಿ, ಎಸ್ ಬಿಆರ್ ಪ್ರಾಚಾರ್ಯ ಎನ್.ಎಸ್. ದೇವರಕಲ್, ಎಸ್‌ಬಿಆರ್ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ| ಭರತ ಕೋಣಿನ್, ಪ್ರಧಾನ ಕಾರ್ಯದರ್ಶಿ ದಿನೇಶ ಪಾಟೀಲ, ಸಂಘದ ಪೋಷಕ ಸದಸ್ಯ ದೊಡ್ಡಪ್ಪ ನಿಷ್ಠಿ, ಸಂತೋಷ ಬಿಲಗುಂದಿ ಇದ್ದರು. ಶಿಕ್ಷಣಕ್ಕೆ ಮಠಗಳ ಕೊಡುಗೆ ಹೆಚ್ಚು ರಾಜ್ಯದಲ್ಲಿ 50 ವರ್ಷಗಳ ಹಿಂದೆ ಕಡಿಮೆ ಶಿಕ್ಷಣ ಸಂಸ್ಥೆಗಳು ಇದ್ದವು. ಇಂತಹ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನ, ತುಮಕೂರು ಮಠ, ಸುತ್ತೂರು ಮಠ ಹಾಗೂ ಧಾರವಾಡದ ಮುರುಘಾ ಮಠಗಳು ಅನ್ನ ದಾಸೋಹದೊಂದಿಗೆ ಜ್ಞಾನ ದಾಸೋಹ ಆರಂಭಿಸಿದವು. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಕ್ಕಿಂತ ಮಠಗಳು ಶೈಕ್ಷಣಿಕ ಮಟ್ಟ ಹೆಚ್ಚಿಸಲು ದೊಡ್ಡ ಕೊಡುಗೆ ನೀಡಿದವು.
ಪ್ರೊ| ಎಚ್.ಎಂ. ಮಹೇಶ್ವರಯ್ಯ ಕುಲಪತಿ, ಕೇಂದ್ರೀಯ ವಿಶ್ವವಿದಾ