Advertisement

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

10:57 AM Oct 25, 2021 | Team Udayavani |

ಆಳಂದ: ಪ್ರತಿಯೊಂದು ತಮ್ಮ ವ್ಯವಹಾರ ಮತ್ತು ಆಸ್ತಿ ಹಂಚಿಕೆ ವೇಳೆ ಕಾನೂನು ಅರಿಯದಿದ್ದರೇ ಸಂಕಷ್ಟ ಅನುಭವಿಸುವುದು ನಿಶ್ಚಿತ ಎಂದು ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ನಾಗೇಶ ಎಸ್‌. ರೆಡ್ಡಿ ಹೇಳಿದರು.

Advertisement

ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಅಮೃತ ಮಹೋತ್ಸವ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 25ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಪ್ರತಿಯೊಬ್ಬರಿಗೂ ಒಂದೇ ಕಾನೂನು, ಒಂದೇ ನ್ಯಾಯವಿದೆ. ಬಡವರು, ಶೋಷಿತ ಮಹಿಳೆಯರಿಗಾಗಿ ನ್ಯಾಯ ಒದಗಿಸಲು ಕಾನೂನು ಸೇವಾ ಪ್ರಾಧಿಕಾರ ಮನೆಬಾಗಿಲಿಗೆ ಬರುತ್ತಿದೆ. ಇದರ ಲಾಭ ಪಡೆಯಿರಿ ಎಂದರು.

ಹಿರಿಯ ಶ್ರೇಣಿ ನ್ಯಾಯಾಧೀಶ ಎಸ್‌.ಸಿ. ನಾಡಗೌಡ ಉದ್ಘಾಟಿಸಿ ಮಾತನಾಡಿ, ಯಾರೂ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಕಾನೂನು ಅರಿವು ಮೂಡಿಸಲು ಸೇವಾ ಪ್ರಾಧಿಕಾರವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಕೋರ್ಟ್‌ನಲ್ಲಿ ಉಚಿತ ಕಾನೂನು ಸೇವಾ ಕೇಂದ್ರವಿದೆ ಎಂದು ಹೇಳಿದರು.

ಇದನ್ನೂ ಓದಿ: ಬಸವಣ್ಣನ ಚಿಂತನೆ ದಿವ್ಯೌಷಧ

Advertisement

ಪ್ರಧಾನ ಕಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಕಾಂತ, ಸರ್ಕಾರಿ ವಕೀಲ ಜ್ಯೋತಿ ಬಂಡಿ, ಸುಭಾಶ್ರೀ ಬಡಿಗೇರ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ನಾಗಮ್ಮ ನಾಗಣ್ಣ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಶಾಂತಪ್ಪ ಶಹಾಪುರೆ, ತಾಪಂ ಮಾಜಿ ಸದಸ್ಯ ಸಿದ್ಧರಾಮ ವಾಘ್ಮೋರೆ, ಮುಖಂಡ ಸುಭಾಷ ಚವ್ಹಾಣ, ರಾಜು ಪಾಟೀಲ, ಶಿವಾನಂದ ಪಾಟೀಲ, ಬಸವಂತರಾವ್‌ ಧೂಳೆ, ಮಲ್ಲಪ್ಪ ಕೋರೆ, ಶಿವಾನಂದ ಹತ್ತೆ, ಬಸವರಾಜ ಮೂಲಗೆ, ಶಾಂತಪ್ಪ ಬಾವಿ, ಸಿದ್ಧರಾಮ ಶಹಾಪುರೆ, ಮಹಾದೇವ ಹೌಶಟ್ಟೆ, ಸೂರ್ಯಕಾಂತ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.

ಆಸ್ತಿ ನೋಂದಣಿ, ಪಹಣಿ ಪತ್ರಿಕೆ ಕುರಿತು ಎಂ.ವಿ. ಏಕಬೋಟೆ, ಕೆ.ಯು. ಇನಾಮದಾರ ಉಪನ್ಯಾಸ ನೀಡಿದರು. ನ್ಯಾಯವಾದಿ ಸಂಘದ ಕಾರ್ಯದರ್ಶಿ ಕಮಲ ರಾಠೊಡ, ನ್ಯಾಯವಾದಿ ಬಿ.ಎ. ದೇಶಪಾಂಡೆ, ಎ.ಸಿ. ತೋಳೆ, ಬಿ.ವೈ. ಶಿರೋಳೆ, ದೇವಾನಂದ ಹೋದಲೂರಕರ್‌, ಎಸ್‌.ಡಿ. ಬೋಸಗೆ, ಯು.ಕೆ. ಇನಾಮದಾರ ಆಗಮಿಸಿದ್ದರು. ಶಿವಶಂಕರ ಮುನೋಳಿ ನಿರೂಪಿಸಿದರು, ದೀಪಾರಾಣಿ ಕುಲಕರ್ಣಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next