Advertisement

ಜ್ಞಾನವೇ ನಿಜವಾದ ಸಂಪತ್ತು

10:36 AM Feb 25, 2019 | |

ದೇವದುರ್ಗ: ಜ್ಞಾನವೇ ನಿಜವಾದ ಸಂಪತ್ತು. ನಮ್ಮ ಸಾಮರ್ಥ್ಯವೇ ನಮಗೆ ಶಕ್ತಿ ಎಂಬುದನ್ನು ಸಾಬೀತುಪಡಿಸಲು ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆ ಅಗತ್ಯ ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

Advertisement

ಪಟ್ಟಣದ ಪರಿಶಿಷ್ಟ ಪಂಗಡ ಬಾಲಕರ ವಸತಿ ನಿಲಯದಲ್ಲಿ ನಡೆದ ದ್ವಿತೀಯ ಪಿಯುಸಿ, ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಾಧಕನಿದ್ದಾನೆ. ಅವನನ್ನು ಎಚ್ಚರಗೊಳಿಸಿ ಜೀವನದಲ್ಲಿ ಏನಾದರೂ
ಸಾಧಿಸಬೇಕು. ತೀವ್ರವಾದ ಜ್ಞಾನಶಕ್ತಿ ದೃಢನಿಷ್ಠೆ, ಏಕಾಗ್ರತೆ, ಛಲ, ಸತತ ಪ್ರಯತ್ನ, ಸಮಯ ಪ್ರಜ್ಞೆ, ನಿರಂತರ ಅಧ್ಯಯನ ನಮ್ಮದಾದರೆ ಸಾಕು ಯಶಸ್ಸು ನಮ್ಮದಾಗುತ್ತದೆ ಎಂದರು.

ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ಅಳವಡಿಸಿಕೊಂಡು ನಮ್ಮನ್ನು ಬೆಳೆಸಿದ ಹೆತ್ತವರಿಗೆ, ಕಲಿಸಿದ ಶಿಕ್ಷಕರಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು. ಪಠ್ಯಪುಸ್ತಕದ ಜ್ಞಾನದ ಜತೆಗೆ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಹಾಗೂ ಪ್ರಚಲಿತ ವಿದ್ಯಮಾನಗಳ ಬಗ್ಗೆ
ಅರಿವು ಅಗತ್ಯವಾಗಿರಬೇಕು. ನಮ್ಮ ಏಳ್ಗೆಗೆ ನಾವೇ ಶಿಲ್ಪಿಗಳಾಗಬೇಕು. ವಿದ್ಯಾರ್ಥಿ ಜೀವನ ವಿಶ್ರಾಂತಿಯ ಸಮಯವಲ್ಲ. ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಪರಿಶ್ರಮದ ಮೇಲೆ ನಮ್ಮ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಸಾಧನೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ ಎಂಬುದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದರು.

ಜೀವನದಲ್ಲಿ ಏನಾದರೂ ಸಾಧಿಸಬಲ್ಲೇ, ಹೆದರದೆ ಪರೀಕ್ಷೆ ಎದುರಿಸಬಲ್ಲೇ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿ ಒಡಮೂಡಿದರೆ ಖಂಡಿತವಾಗಿ ಜೀವನದಲ್ಲಿ ಯಶಸ್ಸು ಸಾದಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಆಸಕ್ತಿ ಇರಲಿ ಎಂದರು.

ಸನ್ಮಾನ: ನಿವೃತ್ತ ಯೋಧರಾದ ಭೀಮನಗೌಡ ಪಾಟೀಲ, ಸುಭಾಷ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.
ಮೌನಾಚರಣೆ: ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನವೀನ್‌ ಶಿಂಥ್ರೆ ಕಾರ್ಯಕ್ರಮ ಉದ್ಘಾಟಿಸಿದರು. ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಗರುಡವಾಹನ, ಸುಭಾಶ್ಚಂದ್ರ ಪಾಟೀಲ, ವೆಂಕಟೇಶ ದೊರೆ, ವಸತಿ ನಿಲಯದ ಮೇಲ್ವಿಚಾರಕ ರಾಘವೇಂದ್ರರಾವ್‌ ಕಲಾಲ, ಆದೇಶ ಗೂಡೂರು, ಕಾಶಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಂಗಪ್ಪ ಗೋಸಲ, ರಾಮಣ್ಣ ಕರಡಿಗುಡ್ಡ, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮೈನುದ್ದೀನ್‌ ಕಾಟಮಳ್ಳಿ, ಹೈಕ ವಿಮೋಚನ ವೇದಿಕೆ ತಾಲೂಕು ಅಧ್ಯಕ್ಷ ರಾಮಣ್ಣ ಗಣೇಕಲ್‌, ಭೋಜರಾಜ ಮಿಣಜಗಿ, ಚಂದ್ರಶೇಖರ ಸೇರಿದಂತೆ ದ್ವಿತೀಯ ಪಿಯುಸಿ ಮತ್ತು ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next