Advertisement

ಜ್ಞಾನದಿಂದ ವಿನಯ ಅಮೃತಕ್ಕೆ ಸಮಾನ: ಬಸವರಾಜ ಜಿಳ್ಳೆ

04:10 PM Sep 06, 2021 | Team Udayavani |

ಕಲಬುರಗಿ: ಮನುಷ್ಯನಿಗೆ ಜ್ಞಾನದಿಂದ ಅಹಂಕಾರ ಬಂದರೆ ಅದು ವಿಷಕ್ಕೆ ಸಮಾನ. ಜ್ಞಾನದಿಂದ ವಿನಯ ಬಂದರೆ ಅದು ಅಮೃತಕ್ಕೆ ಸಮನಾಗಿರುತ್ತದೆ ಎಂದು ಕೆಎಸ್‌ಆರ್‌ಪಿ ಕಮಾಂಡೆಂಟ್‌ ಬಸವರಾಜ ಜಿಳ್ಳೆ ಹೇಳಿದರು. ತಾಲೂಕಿನ ಹರಸೂರ ಗ್ರಾಮದ ಕರಿಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕರಿಬಸವೇಶ್ವರ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಗೆಳೆಯರ ಬಳಗ ಹರಸೂರ ಹಾಗೂ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ “ಮೋಡದ ಮರೆಯಲ್ಲಿ ಮಿನುಗುವ ನಕ್ಷತ್ರ’ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ನಾನು ಎನ್ನುವ ಅಹಂಕಾರ ಮನಸ್ಸನ್ನು ಸುಟ್ಟರೆ ನಾನೆ ಹೆಚ್ಚು ಎನ್ನುವ ದುರಹಂಕಾರ ಜೀವನವನ್ನೇ ಸುಡುತ್ತದೆ. ನಿಸ್ವಾರ್ಥ ಸೇವೆ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಕೊಡುತ್ತಿರುವುದು ಹೆಮ್ಮೆಯ ವಿಷಯವೆಂದು ಹೇಳಿದರು. ಕಲಬುರಗಿ ತಹಶೀಲ್ದಾರ್‌ ಪ್ರಕಾಶ ಕುದುರಿ ಪ್ರಶಸ್ತಿ ಪ್ರದಾನಗೈದು, ನಮ್ಮ ನೋವು ನಮಗೆ ಗೊತ್ತಾದರೆ ಬದುಕಿದ್ದೇವೆ ಎಂದರ್ಥ.

ಇನ್ನೊಬ್ಬರ ನೋವು ನಮಗೆ ಗೊತ್ತಾದರೆ ಮನುಷ್ಯರಾಗಿದ್ದೇವೆ ಎಂದರ್ಥ ಎಂದು ವಿವರಣೆ ನೀಡಿದರು. ಹರಸೂರ ಕಲ್ಮಠದ ಕರಬಸವೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಮುಖ್ಯ ಗುರುಗಳಾದ ಡಾ| ರಾಜಕುಮಾರ ಪಾಟೀಲ, ನ್ಯಾಯವಾದಿ ಹಣಮಂತರಾಯ ಎಸ್‌. ಅಟ್ಟೂರ, ಉದ್ಯಮಿ ಶಿವರಾಜ ಪಾಟೀಲ, ಬಸವರಾಜ ಸಮಾಳ ವೇದಿಕೆಯ ಮೇಲಿದ್ದರು.ರೇವಣಸಿದ್ದಪ್ಪ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ರೈತ ವಿಜ್ಞಾನಿ ಶರಣಬಸಪ್ಪ ಪಾಟೀಲ, ಶಿಕ್ಷಕರಾದ ಶಿವಕಾಂತ ಚಿಮ್ಮಾ, ಗಂಗೂಬಾಯಿ ನಂದ್ಯಾಳ, ಸುಧಾರಾಣಿ ಕಂತಿ, ಜನಪದ ಕಲಾವಿದ ರಾಜು ಹೆಬ್ಟಾಳ, ಸಮಾಜ ಸೇವಕ ನಾಗಣ್ಣ ವಿಶ್ವಕರ್ಮ ಆವರಿಗೆ ಮೋಡದ ಮರೆಯಲ್ಲಿ ಮಿನುಗುವ ನಕ್ಷತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೊರೊನಾ ವಾರಿಯರ್ಸ್‌ರಾದ ಕಮಲಾಪುರ ಪೋಲಿಸ ಠಾಣೆಯ ಪಿಎಸ್‌ಐ ಶಿವಕಾಂತ ಕಮಲಾಪುರ,ಹರಸೂರ ವೈದ್ಯರಾದ ಎಂ ಎಂ ಬೇಗ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ, ರಾಜ ಕುಮಾರ ಉಪ್ಪಿನ, ಸೋಮಶೇಖರ ಡಿಗ್ಗಿ, ವಿಶ್ವನಾಥ ಭೂಸಾರೆ,ದೇವಿಂದ್ರ ವಿಶ್ವಕರ್ಮ, ನೀರಜ ಸಮಾಳ, ಶಿವಕುಮಾರ ಸಮಾಳ,ಮಹೇಶ ತೆಲೆಕುಣಿ,ನಾಗಣ್ಣ ಸೀರಿ, ಸಿದ್ದಯ್ಯಸ್ವಾಮಿ ಸಮಾಳ, ಶಿವಶರಣಪ್ಪ ಮುದ್ದಾ, ರೇವಣಸಿದ್ದಪ್ಪ ಮಂಗಲಗಿ, ಮಾಹಾ0ತಾಬಾಯಿ ಸಮಾಳ, ಶರಣಮ್ಮ ಪುರಾಣಿಕ, ಮಹಾನಂದ ಸಮಾಳ, ಶರಣಪ್ಪ ಹಳ್ಳ, ದೇವಾನಂದ ದುರ್ಗದ, ಪಂಚಾಕ್ಷರಿ ಕಂತಿ, ಚನ್ನಬಸಯ್ಯ ಸಮಾಳ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next