Advertisement

ಪುಸ್ತಕ ವಾಚನದಿಂದ ಜ್ಞಾನ ವೃದ್ಧಿ: ಆಸ್ರಣ್ಣ

12:55 PM Dec 08, 2017 | Team Udayavani |

ಮಂಗಳೂರು : ಮನುಷ್ಯನಿಗೆ ಜ್ಞಾನ ಅತ್ಯಗತ್ಯ. ಅದು ಪುಸ್ತಕದ ರೂಪದಲ್ಲಿ ಅಡಕವಾಗಿದೆ. ಪುಸ್ತಕಗಳನ್ನು ಓದುವುದರಿಂದ ಜ್ಞಾನ ಸಂಪಾದನೆ ಸಾಧ್ಯ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ವೆಂಕಟರಮಣ ಆಸ್ರಣ್ಣ ಅಭಿಪ್ರಾಯಪಟ್ಟರು.

Advertisement

ಎಸ್‌ಎಲ್‌ವಿ ಬುಕ್‌ ಹೌಸ್‌ ಮಂಗಳೂರು ನಗರದ ರಥಬೀದಿ ಬಿಇಎಂ ಪ್ರೌಢಶಾಲೆಯ ಮುಂಭಾಗದಲ್ಲಿ ತೆರೆದಿರುವ ದ್ವಿತೀಯ ಮಳಿಗೆಯನ್ನು ಅವರು ಗುರುವಾರ ಉದ್ಘಾಟಿಸಿದರು. ಮನುಷ್ಯ ಜ್ಞಾನಿಯಾಗುವುದಕ್ಕೆ ಪುಸ್ತಕ ರೂಪದಲ್ಲಿ ಮಾರ್ಗ ಲಭಿಸುತ್ತದೆ. ಪುಸ್ತಕಗಳನ್ನು ಓದಿದಷ್ಟು ಜ್ಞಾನವೂ ವೃದ್ಧಿಸುತ್ತದೆ. ಇದರಿಂದ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಅವರು ಹೇಳಿದರು.

ಕಾಣಿಯೂರು ಪ್ರಗತಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಜಯಸೂರ್ಯ ರೈ ಮಾಡೋಡಿ ಮಾತನಾಡಿ, ನಾನಾ
ಶಾಲೆಗಳಿಗೆ ಈ ಸಂಸ್ಥೆಯಿಂದ ಪುಸ್ತಕಗಳನ್ನು ಕಳುಹಿಸಲಾಗುತ್ತಿದೆ. ಸಂಸ್ಥೆಯ ಮಾಲಕ ದಿವಾಕರ ದಾಸ್‌ ಅವರ ಸ್ನೇಹಮಯಿ ವ್ಯಕ್ತಿತ್ವದಿಂದ ಇದು ಸಾಧ್ಯವಾಗಿದೆ ಎಂದು ಶ್ಲಾಘಿಸಿದರು. 

ಸುದಾನ ವಸತಿ ಶಿಕ್ಷಣ ಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್‌, ಮೈಸೂರು ಗೋರೆ ಅಸೋಸಿಯೇಟ್ಸ್‌ನ
ರವೀಂದ್ರ ಗೋರೆ, ಉದ್ಯಮಿಗಳಾದ ಪದ್ಮನಾಭ ಶೆಟ್ಟಿ ಪುತ್ತೂರು, ಚಂದ್ರನಾಥ್‌ ಬೆಂಗಳೂರು, ಕನ್ನಡ ರತ್ನ
ಪ್ರಶಸ್ತಿ ಪುರಸ್ಕೃತೆ ಡಾ| ವನಿತಾ ಭಟ್‌ ಮುಖ್ಯ ಅತಿಥಿಗಳಾಗಿದ್ದರು. 

ಎಸ್‌ಎಲ್‌ವಿ ಗ್ರೂಪ್‌ ಮಾಲಕ ದಿವಾಕರ ದಾಸ್‌, ಪತ್ನಿ ಹೇಮಾವತಿ ದಾಸ್‌, ಸಹೋದರ ಸುರೇಶ್‌, ಸಂಸ್ಥೆಯ ಶಾಖಾ ವ್ಯವಸ್ಥಾಪಕ ರಾಜಾ ಅಂಚನ್‌ ಮೊದಲಾದವರು ಉಪಸ್ಥಿತರಿದ್ದರು. ವಿಟ್ಲ ಪಟ್ಟಣ ಪಂಚಾಯತ್‌ ಸದಸ್ಯ ರವಿಪ್ರಕಾಶ್‌, ಯುವ ಜಯ ಕರ್ನಾಟಕ ಅಧ್ಯಕ್ಷ ಸಹಜ್‌ ರೈ, ರಾಜಾರಾಂ ಶೆಟ್ಟಿ, ದೇವಿಪ್ರಕಾಶ್‌ ಶೆಟ್ಟಿ ವಿಟ್ಲ ಶುಭ ಹಾರೈಸಿದರು.

Advertisement

ವಿಟ್ಲ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪ್ರಸ್ತಾವನೆಗೈದು, ರಾಮ್‌ದಾಸ್‌ ಶೆಟ್ಟಿ ವಿಟ್ಲ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next