Advertisement
ಭಾಷೆ ಎಂಬುದು ಕೇವಲ ಸಂಭಾಷಣೆಯ, ವಿಷಯ ಸಂವಹನದ ಮಾಧ್ಯಮವಷ್ಟೇ ಅಲ್ಲ. ಜ್ಞಾನಾಭಿವೃದ್ಧಿ ಮಾಡುವ ಮಾಧ್ಯಮವೂ ಹೌದು. ನಮ್ಮ ಸುತ್ತಲಿನ ನೈಜ ಪ್ರಪಂಚವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯವಸ್ಥೆ. ನಮಗೆ ತಿಳಿದಿರುವ ಭಾಷೆಯೊಂದಿಗೆ ಇತರ ರೊಡನೆ ಸಂವಹಿಸಲು ಅಗತ್ಯವಿರುವ ಇನ್ನಿತರ ಭಾಷೆ ಗಳನ್ನು ಕಲಿಯುವ ಉತ್ಸಾಹ ಪ್ರತಿಯೊಬ್ಬರಲ್ಲೂ ಇರಬೇಕು.
Related Articles
ಮಾತೃಭಾಷೆ ತುಳು, ಕನ್ನಡ, ಕೊಂಕಣಿ ಅಥವಾ ಇನ್ಯಾವುದೇ ಭಾಷೆಯಾಗಿರಬಹುದು. ಆದರೆ ಸಮಾಜದ ವಿವಿಧ ಸ್ತರಗಳಲ್ಲಿ ಬದುಕಬೇಕಾಗಿರುವುದರಿಂದ ಸಾಮಾನ್ಯ ಭಾಷೆಗಳನ್ನು ಬಳಸಬೇಕಾಗಿದೆ. ಪ್ರಸ್ತುತ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕಾಗುತ್ತದೆ. ಪ್ರಾಥಮಿಕ ಶಾಲಾ ಹಂತದಿಂದ ಉದ್ಯೋಗಾವಕಾಶ ಲಭಿಸುವವರೆಗೂ ವಿವಿಧ ಹಂತಗಳಲ್ಲಿ ಆಂಗ್ಲಭಾಷೆ ಹಾಗೂ ಇತರ ಭಾಷೆಗಳ ಬಳಕೆ ಕಡ್ಡಾಯವಾಗಿರುವುದರಿಂದ ಅದನ್ನು ಕಲಿಯುವುದು ಎಲ್ಲರ ಕರ್ತವ್ಯ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡಿ ಆವಶ್ಯಕ ತೆಗಳಿಗಾಗಿ ಇತರ ಭಾಷೆಗಳನ್ನು ಕಲಿಯು ವುದು ಉತ್ತಮ ನಡೆ. ತಾಂತ್ರಿಕತೆ, ಉದ್ಯೋಗ ಗಳಲ್ಲಿ ಸ್ಪರ್ಧೆ ಇವೆಲ್ಲದರ ನಡುವೆ ಅದಕ್ಕೆ ಆವಶ್ಯಕತೆ ಇರುವ ಭಾಷೆಗಳನ್ನು ಕಲಿಯ ಬೇಕಾಗುತ್ತದೆ. ಆಂಗ್ಲ ಭಾಷೆಯಲ್ಲಿ ನೈಪುಣ್ಯತೆ ಯನ್ನು ಪಡೆದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಸ್ವಾವಲಂಬಿಗಳಾಗಿ ಬದುಕ ಬಹುದು ಎಂಬ ಚಿತ್ರಣ ಈಗಾಗಲೇ ಎಲ್ಲರಲ್ಲೂ ಮೂಡಿದೆ. ಅದಕ್ಕೆ ತಕ್ಕುದಾಗಿ ಶೈಕ್ಷಣಿಕ ಸಂಸ್ಥೆಗಳು ಇಂಗ್ಲಿಷ್ ಮಾತ್ರ ವಲ್ಲದೆ ಫ್ರೆಂಚ್, ಸ್ಪೇನಿಶ್ ಸೇರಿದಂತೆ ಇನ್ನಿತರ ಭಾಷೆಗಳ ತರಗತಿಗಳನ್ನು ನಡೆಸುತ್ತಿವೆ. ನಮ್ಮ ದೇಶದ ಭಾಷೆ ಕಲಿಯುವುದಕ್ಕಿಂತಲೂ ವಿದೇಶಗಳಲ್ಲಿ ಪ್ರಚಲಿತದಲ್ಲಿರುವ ಅನೇಕ ಭಾಷೆಗಳನ್ನು ಕಲಿಯುವ ಉತ್ಸಾಹದಲ್ಲಿ ಇಂದಿನ ಯುವ ಜನತೆ ಇದೆ.
Advertisement
ಇತರ ಭಾಷೆಗಳ ಕಲಿಕೆಗೆ ಪ್ರೋತ್ಸಾಹಮಾತೃಭಾಷೆ, ರಾಷ್ಟ್ರಭಾಷೆ ಹಾಗೂ ಆಂಗ್ಲಭಾಷೆಗಳು ಇಂದಿನ ಆವಶ್ಯಕತೆಗಳಲ್ಲಿ ಪ್ರಮುಖ ಸ್ಥಾನ ಪಡೆದು ಕೊಂಡಿರುತ್ತವೆ. ಆ ಕಾರಣಕ್ಕೆ ಪೋಷಕರು, ಶಿಕ್ಷಕರು ವಿದ್ಯಾರ್ಥಿಗೆ ಭಾಷಾ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡು ತ್ತಾರೆ. ಶಾಲಾ ಹಂತದಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯನ್ನು ಕಲಿಸಲಾಗುತ್ತದೆ. ಪದವಿಯ ಬಳಿಕ ತಮ್ಮ ಐಚ್ಛಿಕ ಭಾಷೆಯನ್ನು ಕಲಿಯುವ ಆವಶ್ಯಕತೆ ಇರುತ್ತದೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋಚಿಂಗ್ ಕ್ಲಾಸ್‌ಗಳು, ನಗರದ ವಿವಿಧ ಭಾಗಗಳಲ್ಲಿ ಹಲವು ಕೋಚಿಂಗ್ ಕ್ಲಾಸ್‌ಗಳು ಇದ್ದು, ಅಲ್ಲಿ ತಮಗೆ ಬೇಕಾದ ಭಾಷೆಗಳನ್ನು ಕಲಿಯುವ ಅವಕಾಶ ಇದೆ. ಮಾತೃಭಾಷೆಗೆ ಪ್ರಥಮ ಆದ್ಯತೆ
ಮಗು ಜನನದ ಬಳಿಕ ತನ್ನ ಸುತ್ತಮುತ್ತ ಇರುವ ಜನರು ಮಾತನಾಡುವ ಭಾಷೆಯ ಬಗೆಗೆ ಹೆಚ್ಚು ಗಮನ ನೀಡುತ್ತದೆ. ಅದ ರಲ್ಲೂ ಹೆತ್ತವರು ಮಗುವಿನಲ್ಲಿ ಯಾವ ಭಾಷೆಯಲ್ಲಿ ಸಂವಹನ ನಡೆಸುತ್ತಾರೆಯೋ ಅದನ್ನೇ ಮಗು ತನ್ನ ಮೊದಲ ಭಾಷೆಯಾಗಿ ಸ್ವೀಕರಿಸುತ್ತದೆ. ನಮ್ಮ ಆವಶ್ಯಕತೆಗಳಿಗಾಗಿ ಹಲವು ಭಾಷೆಗಳನ್ನು ಕಲಿತುಕೊಂಡರೂ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಆ ಬಳಿಕ ಕಲಿತ ಅನೇಕ ಭಾಷೆಗಳು ಮಾತೃಭಾಷೆಯ ಬಳಿಕ ಸ್ಥಾನ ಪಡೆದುಕೊಳ್ಳಬೇಕು. ತಮ್ಮ ವ್ಯವಹಾರ, ಸ್ವ – ಅಭಿವೃದ್ಧಿಯ ದೃಷ್ಟಿಯಲ್ಲಿ ಕಲಿತ ಭಾಷೆಗಳು ನಮ್ಮ ಔದ್ಯೋಗಿಕ ಉನ್ನತಿಯಲ್ಲಿ ಸಹಕರಿಸಿದರೆ, ಮಾತೃಭಾಷೆಗಳು ನಮ್ಮ ನಾಡಿನ ಮೇಲಿನ ಪ್ರೀತಿಯನ್ನು ಬಿಂಬಿಸುತ್ತವೆ.