ಮುಂಬೈ: ಮುಂಬೈ ಸೆಲೆಬ್ರಿಟಿಗಳ ಐಷಾರಾಮಿ ಜೀವನಕ್ಕೆ ಹೆಸರುವಾಸಿ. ದುಬಾರಿ ಬಂಗಲೆಗಳು, ಫ್ಲ್ಯಾಟ್‌ಗಳು, ನಗರೀಕರಣದಿಂದಲೇ ಸಾಕಷ್ಟು ಉದ್ಯಮಿಗಳು ಮುಂಬೈಗೆ ಮಾರುಹೋಗಿದ್ದಾರೆ. ಈಗ ಅಂಥದ್ದೇ ಮತ್ತೊಬ್ಬ ಉದ್ಯಮಿಯೊಬ್ಬರು ಮುಂಬೈನಲ್ಲಿರುವ ಭಾರತದ ಅತ್ಯಂತ ದುಬಾರಿ ಫ್ಲ್ಯಾಟ್ ಒಂದನ್ನು ಬರೋಬ್ಬರಿ 369 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ!
ಹೌದು, ವಾಣಿಜ್ಯೋದ್ಯಮಿ ಜೆ.ಪಿ.ತಪಾರಿಯಾ ಅವರ ಕುಟುಂಬ ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿರುವ ಲ್ಯಾವಿಷ್ ಅಪಾರ್ಟ್‌ಮೆಂಟ್‌ವೊಂದರ 26, 27, 28ನೇ ಮಹಡಿಗಳಷ್ಟನ್ನೂ ಸೇರಿಸಿ ನಿರ್ಮಿಸಲಾಗುತ್ತಿರುವ ಟ್ರಿಪ್ಲೆಕ್ಸ್ ಫ್ಲ್ಯಾಟ್ ಖರೀದಿಸಿದ್ದಾರೆ.
ಗವರ್ನರ್ ಎಸ್ಟೇಟ್ ಮುಂಭಾಗದಲ್ಲಿರುವ ವಾಕೇಶ್ವರ ರಸ್ತೆಯಲ್ಲಿರುವ ಈ ಅಪಾರ್ಟ್‌ಮೆಂಟ್ ಅರಬ್ಬಿಸಮುದ್ರದ ವ್ಯೂ ಹೊಂದಿದ್ದು, ಲೋಧಾ ಗ್ರೂಪ್ ಇದನ್ನು ನಿರ್ಮಿಸುತ್ತಿದೆ.
ಇನ್ನೂ ನಿರ್ಮಾಣ ಹಂತದಲ್ಲಿರುವಾಗಲೇ ತಪಾರಿಯಾ ಮೂರಂತಸ್ತಿನ ಫ್ಲ್ಯಾಟ್ ಖರೀದಿಸಿದ್ದಾರೆ. ವರದಿಗಳ ಪ್ರಕಾರ, ಭಾರತದ ಅತ್ಯಂತ ದುಬಾರಿ ಫ್ಲ್ಯಾಟ್ ಇದಾಗಿದ್ದು, ಪ್ರತಿ ಚದರ ಅಡಿಗೆ 1.36 ಲಕ್ಷ ರೂ. ಬೆಲೆ ಹೊಂದಿದೆ. ಫ್ಲ್ಯಾಟ್‌ನ ಒಟ್ಟು ವಿಸ್ತೀರ್ಣ 27,160 ಚದರ ಅಡಿ.ಇದಕ್ಕೂ ಮುನ್ನ ಟಫೊಸ್ ಮುಖ್ಯಸ್ಥರಾದ ಮಹದೇವ್ ಗೋಯೆಲ್ ಇದೇ ಮಲಬಾರ್ ಹಿಲ್‌ನ ಸಮುದ್ರಾಭಿಮಖವಾಗಿರುವ 9,546 ಚದರ ಅಡಿ ವ್ಯಾಪ್ತಿಯ ಫ್ಲ್ಯಾಟ್ ಅನ್ನು 121 ಕೋಟಿ ರೂ.ಗಳಿಗೆ ಖರೀದಿಸಿದ್ದರು. ಬಜಾಟ್ ಆಟೋ ಮುಖ್ಯಸ್ಥ ನೀರಜ್ ಬಜಾಜ್ ಅವರು ಮುಂಬೈನಲ್ಲಿ 252.5 ಕೋಟಿ ರೂ.ಗಳ ಟ್ರಿಪ್ಲೆಕ್ಸ್ ಪೆಂಟ್‌ಹೌಸ್ ಖರೀದಿಸಿದ್ದರು.