Advertisement
ಪ್ರಸ್ತುತ, ಪಿಪಿಎಫ್ 7.1% ಬಡ್ಡಿಯನ್ನು ನೀಡುತ್ತಿದೆ. ಸರ್ಕಾರ ಇತ್ತೀಚೆಗೆ ಬಡ್ಡಿದರಗಳನ್ನು ಕೆಳಕ್ಕೆ ಪರಿಷ್ಕರಿಸಿತು, ಆದಾಗ್ಯೂ, ನಂತರ ಆ ನಿರ್ಧಾರವನ್ನು ವಾಪಸ್ ಪಡೆಯಲಾಯಿತು.
Related Articles
Advertisement
ವರ್ಷದ ಆರಂಭದಲ್ಲಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ಯಾವಾಗಲೂ ಸೂಕ್ತ. ಈ ರೀತಿಯಾಗಿ ನೀವು ಇಡೀ ವರ್ಷ ಠೇವಣಿಗಳ ಮೇಲೆ ಬಡ್ಡಿಯನ್ನು ಗಳಿಸುತ್ತೀರಿ. ಒಂದು ವರ್ಷದಲ್ಲಿ ಪಿಪಿಎಫ್ ಖಾತೆಯಲ್ಲಿ ಮಾಡಿದ ಹೂಡಿಕೆಗಳ ಮೇಲೆ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಆದರೆ ನೀವು ವರ್ಷದ ಕೊನೆಯಲ್ಲಿ ಹೂಡಿಕೆ ಮಾಡಿದರೆ, ನೀವು ವರ್ಷದ ಇಂಟ್ರೆಸ್ಟ್ ನ್ನು ಕಳೆದುಕೊಳ್ಳುತ್ತೀರಿ.
ಇದಲ್ಲದೆ ಪಿಪಿಎಫ್ ಮೇಲಿನ ಇಂಟ್ರೆಸ್ಟ್ ನ್ನು ತಿಂಗಳ ಐದನೇ ಮತ್ತು ಕೊನೆಯ ದಿನದ ನಡುವಿನ ಕನಿಷ್ಠ ಮಾಸಿಕ ಸಮತೋಲನದ ಮೇಲೆ ಲೆಕ್ಕಹಾಕಲಾಗುತ್ತದೆ. ಉದಾಹರಣೆಗೆ, ಪಿಪಿಎಫ್ ನಲ್ಲಿ ನಿಮ್ಮ ಬಾಕಿ ಏಪ್ರಿಲ್ 1 ರಂತೆ ₹ 50,000 ಆಗಿದ್ದರೆ ಮತ್ತು ಏಪ್ರಿಲ್ 6 ರಂದು ನೀವು 20,000 ಠೇವಣಿ ಇಟ್ಟರೆ, ಏಪ್ರಿಲ್ ತಿಂಗಳ ಬಡ್ಡಿಯನ್ನು 70,000 ಬದಲಿಗೆ 50,000 ಕ್ಕೆ ಲೆಕ್ಕಹಾಕಲಾಗುತ್ತದೆ.
ನೀವು ವರ್ಷದ ಆರಂಭದಲ್ಲಿ ಮೊತ್ತವನ್ನು ಠೇವಣಿ ಮಾಡಿದರೆ ಮಾತ್ರ ಗರಿಷ್ಠ ಬಡ್ಡಿಯನ್ನು ಗಳಿಸಬಹುದಾಗಿದೆ.
ಓದಿ : ಶಿವಮೊಗ್ಗದವರ ಜಗಳ ಒಂದು ಹೆಜ್ಜೆ ಮುಂದೆ ಹೋಗಿದೆ: ಸಚಿವ ಸೋಮಣ್ಣ