Advertisement

ಆಯುರ್ವೇದದ ಉಪಯೋಗ ಅರಿಯಿರಿ; ಡಾ|ರಾಜೇಶ್‌

06:29 PM Nov 23, 2022 | Team Udayavani |

ಬಳ್ಳಾರಿ: ರಾವ್‌ ಬಹದ್ದೂರ್‌ ವೈ. ಮಹಾಬಲೇಶ್ವರಪ್ಪ ತಾಂತ್ರಿಕ ಕಾಲೇಜಿನಲ್ಲಿ ಐಇಇಇ-ಎಲ್‌ಎಫ್‌ಎಫ್‌ ಎಫ್‌ ಸ್ಟೂಡೆಂಟ್‌ ಚಾಪ್ಟರ್‌ನ ವಿದ್ಯಾರ್ಥಿ ಘಟಕದ ವತಿಯಿಂದ ಆಧುನಿಕಯುಗದಲ್ಲಿ ಆಯುರ್ವೇದದ ಅನ್ವಯಗಳು ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

Advertisement

ಸಂಪನ್ಮೂಲ ವ್ಯಕ್ತಿ ಡಾ| ರಾಜೇಶ್‌ ಸುಗೂರ್‌ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ದಿನನಿತ್ಯ ಮಾಡುವ ಕೆಲಸ ಕಾರ್ಯಗಳಲ್ಲಿ ಆಯುರ್ವೇದದ ಉಪಯೋಗಗಳನ್ನು ತಿಳಿಯಬೇಕು. ಸಾಕಷ್ಟು ನೀರು ಕುಡಿಯುವ ಸಂಸ್ಕಾರ, ಆರೋಗ್ಯಕರವಾದ ಆಹಾರ ಸೇವನೆ, ದಿನಚರಿಯಲ್ಲಿ ಸಾಕಾಷ್ಟು ದೈಹಿಕ ಕೃಷಿ, ಆರೋಗ್ಯಕರವಾದ ನಿದ್ರೆ, ಮುಂತಾದುವುಗಳನ್ನು ಪಾಲಿಸಿದಲ್ಲಿ ನಮ್ಮ ಆರೋಗ್ಯದಲ್ಲಿ ನಿರಂತರ ಚೈತನ್ಯವಿರುತ್ತದೆ
ಎಂದ ಅವರು, ಇದರಿಂದ ಹಲವಾರು ದೈಹಿಕ ಅಸ್ವಸ್ಥೆಗಳನ್ನು ತಡೆಯಬಹುದು ಎಂದರು.

ಆಯುರ್ವೇದ ಇಂಜಿನಿಯರ್‌ಗಳ ದೃಷ್ಟಿಕೋನ, ಇತ್ತೀಚಿನ ಇಂಟರ್‌ನೆಟ್‌-ಆಫ್‌-ಥಿಂಗ್ಸ್‌ ಮುಖಾಂತರ ಎಲ್ಲ ಜನರು, ಅವರ ಚಲನೆಗಳು, ಉಸಿರಾಟದ ಮಾದರಿಗಳು, ಅವರು ನಿವಾಸಿಸುವ ನಗರಗಳ ಯೋಜನೆಗಳು ಹಾಗೂ ಪ್ರಕೃತಿಯಲ್ಲಿನ ಸಸ್ಯಗಳು, ನದಿಗಳು, ಮುಂತಾದವುಗಳಿಂದ ಸಂಪೂರ್ಣ ಡೇಟಾಸೆಟ್‌ಗಳು, ಟ್ರೆಂಡ್‌ಗಳು ಸಂಗ್ರಹಿಸಿ ಸಮತೋಲನವನ್ನು ಕಾಪಾಡಿಕೊಳ್ಳುವ ಕಡೆಗೆ ತನ್ನ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವಿವರಿಸಿದರು.

ಉಪಪ್ರಾಚಾರ್ಯೆ ಡಾ| ಸವಿತಾ ಸೊನೋಳಿ, ಆಯುರ್ವೇದವು (ಆಯುಃ- ಆಯುಸ್ಸು, ವೇದ-ಜ್ಞಾನ) ಭಾರತದಲ್ಲಿ 5000 ವರ್ಷಗಳಿಗೂ ಹಿಂದಿನ ಇತಿಹಾಸವನ್ನು ಹೋಂದಿರುವ, ವಿಶ್ವದ ಅತ್ಯಂತ ಪುರಾತನವಾದ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯಾಗಿದೆ. ಆಯುರ್ವೇದ ಚಿಕೆತ್ಸೆಯು ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಳಿಕೆಗಳಿಂದ ರೂಪಿಸಲಾಗಿದ್ದು, ಆಧುನಿಕ ರಾಸಾಯನಿಕಗಳಿಂದ ತಯಾರಿಸಲ್ಪಟ್ಟ ಔಷಧಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮ್ಯಾನೇಜ್ಮೆಂಟ್‌ ವಿಭಾಗದ ಮುಖ್ಯಸ್ಥ ಡಾ| ಎ. ತಿಮ್ಮನಗೌಡ, ಡೀನ್‌ ಅಕಾಡೆಮಿಕ್‌ ಡಾ| ಎಚ್‌. ಗಿರೀಶ್‌, ಡಾ| ಬಿ. ಶ್ರೀಪತಿ, ವಿದ್ಯುತ್‌ ವಿಭಾಗದ ಮುಖ್ಯಸ್ಥ ಡಾ| ಕೊಟ್ರೇಶ್‌, ಸ್ಟೂಡೆಂಟ್‌ ಚಾಪ್ಟರ್‌ನ ಡಾ| ಅನುರಾಧ, ರಘುಕುಮಾರ್‌, ಅಪರ್ಣ ವಸ್ತ್ರದ, ಎಲ್‌ಎಫ್‌ಎಫ್‌ಎಫ್‌ ಘಟಕದ ಸದಸ್ಯರು, ಕಾಲೇಜಿನ ಇತರೆ ಸಿಬ್ಬಂದಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next