Advertisement

ಕಾಳಿಂಗ ನರ್ತನ!

12:05 PM Jun 30, 2017 | |

ವೇದಿಕೆಯ ಮಧ್ಯದಲ್ಲಿ ವರಾಹಸ್ವಾಮಿಯ ದೊಡ್ಡ ಮೂರ್ತಿ. ಎದುರಿಗೆ ದೇವರಿಗೆ ಪೂಜಾ ಸಾಮಗ್ರಿಗಳು. ವೇದಿಕೆಯ ಕೆಳಗೆ ಹೋಮಕುಂಡಗಳು, ಮಂಡಲಗಳು, ಮನುಷ್ಯರ ಗೊಂಬೆಗಳು … ಸ್ವಲ್ಪವೂ ಕಂಟಿನ್ಯುಟಿ ತಪ್ಪದಂತೆ ಎಲ್ಲವನ್ನೂ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಸ್ವಲ್ಪ ಕಂಟಿನ್ಯುಟಿ ತಪ್ಪಿದರೂ, ಅಭಾಸವಾಗಬಹುದೆಂದು ಮತ್ತೆಮತ್ತೆ ಅಸಿಸ್ಟೆಂಟ್‌ ಡೈರೆಕ್ಟರ್‌ಗಳು ಎಲ್ಲವೂ ಸರಿಯಾಗಿದೆಯಾ ಎಂದು ನೋಡುತ್ತಿದ್ದರು.

Advertisement

ಚಿತ್ರೀಕರಣ ಶುರುವಾಗುವುದಕ್ಕೆ, ಕತ್ತಲಾಗುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಅಷ್ಟರಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಚಿತ್ರತಂಡದವರೆಲ್ಲಾ ಓಡಾಡುತ್ತಿರುವಾಗಲೇ, ಚಂದ್ರಶೇಖರ ಬಂಡಿಯಪ್ಪ ತಮ್ಮ ಚಿತ್ರತಂಡದೊಂದಿಗೆ ಬಂದು ಮಾತಿಗೆ ಕುಳಿತರು. “ತಾರಕಾಸುರ’ ಚಿತ್ರದ ಮುಹೂರ್ತದ ಸಂದರ್ಭದಲ್ಲಿ, ಆ ಚಿತ್ರದ ಬಗ್ಗೆ ಮಾತನಾಡಿದ್ದರು ಅವರು. ಮುಹೂರ್ತವಾಗಿ 15 ದಿನಗಳ ಚಿತ್ರೀಕರಣವೂ ಆಗಿದೆ. ಅಂದು ಸುಬ್ರಹ್ಮಣ್ಯಪುರ ಪೊಲೀಸ್‌ ಸ್ಟೇಷನ್‌ ಪಕ್ಕದ ಮೈದಾನದಲ್ಲಿ ಚಿತ್ರೀಕರಣ ನಡೆಯುತಿತ್ತು.

ಕಳೆದ ಮೂರ್‍ನಾಲ್ಕು ರಾತ್ರಿಗಳ ಕಾಲ ಅಲ್ಲೇ ಚಿತ್ರೀಕರಣ ನಡೆದಿತ್ತು. ಅಂದು ಆ ದೃಶ್ಯದ ಕೊನೆಯ ರಾತ್ರಿಯ ಚಿತ್ರೀಕರಣವಂತೆ. ಹಾಗಾಗಿ ಆ ಕಡೆ ತಯಾರಿ ನಡೆಯುವಾಗಲೇ ಚಿತ್ರತಂಡದವರು ಮಾತಿಗೆ ಕುಳಿತರು.”ಪುಟ್ಟ ಪ್ರಯತ್ನ ಅಂತ ಶುರುವಾಗಿದ್ದು, ಈಗ ದೊಡ್ಡದೊಡ್ಡದಾಗುತ್ತಿದೆ. ಅದಕ್ಕೆ ಕಾರಣ ವಿಶ್ವಾಸ. ಚಿತ್ರ ಮೂಡಿಬರುತ್ತಿರುವ ರೀತಿಗೆ ನಿರ್ಮಾಪಕ ನರಸಿಂಹಲು ಖುಷಿಯಾಗಿ, ಇನ್ನಷ್ಟು ಸ್ವಾತಂತ್ರ್ಯ ಕೊಡುತ್ತಿದ್ದಾರೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯ ಕುರಿತು ಈ ಚಿತ್ರ ಮಾಡುತ್ತಿದ್ದೇವೆ.

ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ರೀಸರ್ಚ್‌ ಮಾಡಿ ಕಥೆ ಮಾಡಿದ್ದೇವೆ. ನಿರ್ಮಾಪಕರಿಗೆ ಕಥೆ ಇಷ್ಟವಾಗಿದೆ. ಈ ಚಿತ್ರದಲ್ಲಿ ಬ್ರಿಟಿಷ್‌ ನಟ ಡ್ಯಾನಿ ಸಪಾನಿ ನಟಿಸುತ್ತಿದ್ದಾರೆ. ರಾಕ್ಷಸನಂತಹ ಪಾತ್ರವದು. ಪಾತ್ರದ ಹೆಸರು ಕಾಳಿಂಗ. ಅವರು ಬರುವಾಗ ಹೇಗೋ, ಏನೋ ಎಂಬ ಭಯವಿತ್ತು. ಆದರೆ, ಅವರು ಒಂದು ದಿನಕ್ಕೂ ಇರುಸು-ಮುರುಸು ಮಾಡಿಕೊಂಡಿಲ್ಲ. ತಲಕಾಡಿನಲ್ಲಿ, ಬಿಸಿಲಿನಲ್ಲಿ ನಾಲ್ಕು ದಿನಗಳ ಶೂಟಿಂಗ್‌ ಮಾಡಿದ್ದೇವೆ. ಒಂದು ದಿನಕ್ಕೂ ಇರಿಟೇಷನ್‌ ಮಾಡಿಕೊಂಡಿಲ್ಲ’ ಎಂದರು ಚಂದ್ರಶೇಖರ ಬಂಡಿಯಪ್ಪ.

ಇನ್ನು ಚಿತ್ರೀಕರಣದ ಬಗ್ಗೆ ಮಾತನಾಡಿದ ಅವರು, 15 ದಿನಗಳ ಕಾಲ ಚಿತ್ರೀಕರಣವಾಗಿದ್ದನ್ನು ಹೇಳಿಕೊಂಡರು. “ಡ್ಯಾನಿ ಅವರ ಭಾಗದ ಚಿತ್ರೀಕರಣ ಇನ್ನೂ 15 ದಿನ ಇದೆ. ಆ ನಂತರ 50 ದಿನ ಚಿತ್ರೀಕರಣವಾಗುತ್ತದೆ. ಇಲ್ಲಿ ವರಾಹಸ್ವಾಮಿ ಉತ್ಸವದ ಚಿತ್ರೀಕರಣ ನಡೆಯುತ್ತಿದೆ. ಇಲ್ಲಿ ಬಿಟ್‌ ಹಾಡು, ಫೈಟು ಮತ್ತು ಒಂದಿಷ್ಟು ಮಾತಿನ ಭಾಗದ ಚಿತ್ರೀಕರಣ ಸಹ ನಡೆಯಲಿದೆ’ ಎಂದರು. ಡ್ಯಾನಿ ಈ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದರು. ಸಾಧ್ಯವಾದರೆ ಡಬ್ಬಿಂಗ್‌ ಮಾಡುವುದಾಗಿಯೂ ಹೇಳಿದರು.

Advertisement

ನಿರ್ಮಾಪಕ ನರಸಿಂಹಲು ಈ ಚಿತ್ರಕ್ಕೆ ಕೈ ಹಾಕಿದಾಗ, ಅವರಿಗೆ ಸನ್‌ ಸ್ಟ್ರೋಕ್‌ (son stroke) ಆಗಿರಬಹುದು ಎಂದು ಗಾಂಧಿನಗರದವರು ಮಾತಾಡಿಕೊಂಡರು. ಆದರೆ, ಆ ಪಾತ್ರಕ್ಕೆ ನಿರ್ದೇಶಕರು ಸೂಟ್‌ ಆಗುತ್ತಾನೆ ಎಂದು ಭರವಸೆ ನೀಡಿದ ಮೇಲೆಯೇ ಚಿತ್ರಕ್ಕೆ ಕೈ ಹಾಕಿದ್ದಾರಂತೆ. ಇನ್ನು ನಾಯಕ ವೈಭವ್‌, ಈ ಕಥೆಯಲ್ಲಿ ಎಲ್ಲಾ ಅಂಶಗಳೂ ಇವೆ ಎಂದು ಹೇಳಿಕೊಂಡರು. ಅಂದು ವೈಭವ್‌ ಮತ್ತು ಡ್ಯಾನಿ ಜೊತೆಗೆ ಕರಿಸುಬ್ಬು ಮತ್ತು ಎಂ.ಕೆ. ಮಠ ಸಹ ಕಾಸ್ಟೂéಮ್‌ ತೊಟ್ಟು, ಅಭಿನಯ ಮಾಡುವುದಕ್ಕೆ ಸಜ್ಜಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next