Advertisement

ದಿನಗೂಲಿ ನೌಕರರಿಗೂ ತುಟ್ಟಿ ಭತ್ತೆ : ಹೈಕೋರ್ಟ್‌ ಆದೇಶ

02:23 AM Jun 15, 2021 | Team Udayavani |

ಬೆಂಗಳೂರು : ಸರಕಾರದ ವಿವಿಧ ಇಲಾಖೆಗಳ ಮತ್ತು ನಿಗಮಗಳ ದಿನಗೂಲಿ ನೌಕರರು ಕೂಡ ರಾಜ್ಯ ಸರಕಾರಿ ನೌಕರರಂತೆಯೇ ಶೇ. 100ರಷ್ಟು ತುಟ್ಟಿ ಭತ್ತೆ ಮತ್ತು ವರ್ಷಕ್ಕೆ 30 ವೇತನ ಸಹಿತ ರಜೆ (ಗಳಿಕೆ ರಜೆ) ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್‌ ಆದೇಶಿಸಿದೆ.

Advertisement

ರಾಜ್ಯ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-2012ರಡಿ ದಿನಗೂಲಿ ನೌಕರರಿಗೆ ಲಭ್ಯವಾಗುತ್ತಿದ್ದ ಶೇ. 100ರಷ್ಟು ತುಟ್ಟಿ ಭತ್ತೆ ಮತ್ತು ಗಳಿಕೆ ರಜೆ ಕಡಿತಗೊಳಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ದಿನಗೂಲಿ ನೌಕರರ ಒಕ್ಕೂಟ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ದಿನಗೂಲಿ ನೌಕರರು ಕಾಯ್ದೆಯ ಪ್ರಕಾರ ಕಾಲಕಾಲಕ್ಕೆ ಸರಕಾರ ನಿಗದಿಪಡಿಸಿದ ತುಟ್ಟಿಭತ್ತೆ ಪಡೆಯಲು ಅರ್ಹ ರಾಗಿದ್ದಾರೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next