Advertisement

KMF Rate; ಮಜ್ಜಿಗೆ, ಮೊಸರಿನ ದರವೂ ಏರಿಕೆ

12:08 AM Aug 01, 2023 | Team Udayavani |

ಬೆಂಗಳೂರು: ಸರಕಾರ ಹಾಲಿನ ಬೆಲೆ ಏರಿಕೆಗೆ ಸಮ್ಮತಿ ನೀಡಿದ ಬೆನ್ನಲ್ಲೇ ಕೆಎಂಎಫ್ ದರ ಪರಿಷ್ಕರಣೆ ಮಾಡಿದ್ದು, ಹಾಲಿನ ಜತೆಗೆ ಮೊಸರು, ಮಜ್ಜಿಗೆ ಬೆಲೆಯನ್ನೂ ಹೆಚ್ಚಿಸಿದೆ.

Advertisement

ಸರಕಾರವು ಹಾಲು ಒಕ್ಕೂಟಗಳ ಮನವಿಗೆ ಮಣಿದು ಆ. 1ರಿಂದ ಹಾಲಿನ ದರದಲ್ಲಿ 3 ರೂ. ಹೆಚ್ಚಳಕ್ಕೆ ಹಸುರು ನಿಶಾನೆ ನೀಡಿತ್ತು. ಕೆಎಂಎಫ್ ಇದನ್ನೇ ನೆಪವಾಗಿ ಇರಿಸಿಕೊಂಡು ಈಗ ಮೊಸರು, ಮಜ್ಜಿಗೆ ದರವನ್ನೂ ಏರಿಸಿದೆ. ಹೀಗಾಗಿ ಗ್ರಾಹಕರು 1 ಲೀ. ಮೊಸರಿಗೆ ಇನ್ನು ಮುಂದೆ ಹೆಚ್ಚುವರಿಯಾಗಿ 3 ರೂ. ಸೇರಿ ಒಟ್ಟು 50 ರೂ. ಹಾಗೂ 200 ಮಿ.ಲೀ. ಪೊಟ್ಟಣದ ಮಜ್ಜಿಗೆಗೆ 1 ರೂ. ಹೆಚ್ಚುವರಿಯಾಗಿ 9 ರೂ. ಪಾವತಿಸಬೇಕಾಗುತ್ತದೆ.

ಹಿಂದೆ ನಂದಿನಿ ಪ್ಯಾಕೆಟ್‌ ಮೊಸರು ಪ್ರತೀ ಲೀ.ಗೆ 47 ರೂ., ಪ್ರತೀ 200 ಮಿ.ಲೀ. ಮಜ್ಜಿಗೆ 8 ರೂ.ಗಳಿಗೆ ಮಾರಾಟವಾಗುತ್ತಿತ್ತು. ಕೆಎಂಎಫ್ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಮಂಗಳವಾರದಿಂದ 1 ಲೀ. ಟೋನ್ಡ್ ಹಾಲಿನ ಬೆಲೆ (ನೀಲಿ ಪೊಟ್ಟಣ) 42 ರೂ., ಟೋನ್ಡ್ ಹಾಲು (ಹೋಮೋಜಿನೈಸ್ಡ್) 43 ರೂ., ಹಸುವಿನ ಹಾಲು (ಹಸುರು) 46 ರೂ. ಮತ್ತು ಶುಭಂ 48 ರೂ.ಗೆ ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next