Advertisement
ಶನಿವಾರ ಕೆಎಂಎಫ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿನಿತ್ಯ 76 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದ್ದು ಸುಮಾರು 18 ಕೋಟಿ ರೂ.ಗಳನ್ನು ಹಾಲು ಉತ್ಪಾದಕರಿಗೆ ಪಾವತಿಸಲಾಗುತ್ತಿದೆ. ರೈತರಿಂದ ಶೇಖರಿಸುತ್ತಿರುವ ಹಾಲಿನಲ್ಲಿ ಪ್ರತಿನಿತ್ಯ 35 ಲಕ್ಷ ಲೀಟರ್ ಹಾಲನ್ನು ಸ್ಯಾಶೆ ರೂಪದಲ್ಲಿ ಹಾಗೂ 6.5 ಲಕ್ಷ ಲೀ. ಯುಎಚ್‌ಟಿ ಹಾಲಿ ರೂಪದಲ್ಲಿ ಹಾಗೂ 6.5 ಲಕ್ಷ ಲೀ. ಮೊಸರಿನಲ್ಲಿ ಮಾರಾಟವಾಗುತ್ತಿದೆ.
Related Articles
Advertisement
ಪೆಟ್ ಬಾಟಲ್/ಐಸ್‌ಕ್ರೀಂ ಘಟಕ: ಸುವಾಸಿತ ಹಾಲು ಉತ್ಪಾದನೆಗೆ ಹಾಸನ ಡೇರಿಯಲ್ಲಿ ಅತ್ಯಾಧುನಿಕ ಫುಡ್ ಗ್ರೇಡ್ ಪ್ಲಾಸ್ಟಿಕ್ ಪೆಟ್ ಬಾಟಲ್ ಘಟಕ ತೆರೆಯಲಾಗುತ್ತಿದೆ. 150 ಕೋಟಿ ರೂ.ವೆಚ್ಚದಲ್ಲಿ ತಯಾರಾಗುತ್ತಿರುವ ಈ ಘಟಕದಲ್ಲಿ ನಿತ್ಯ 5 ಲಕ್ಷ ಬಾಟಲ್‌ಗಳು ತಯಾರಾಗಲಿವೆ. ಅಲ್ಲದೆ, ಇಲ್ಲಿ 20 ಸಾವಿರ ಲೀಟರ್ ಐಸ್‌ಕ್ರೀಂ ತಯಾರಿಕಾ ಘಟಕ ಕೂಡ ಸ್ಥಾಪಿಸಲಾಗಿದೆ.
ಸೈನಿಕರಿಗೆ ಗುಡ್‌ಲೈಫ್: ರಕ್ಷಣಾ ಇಲಾಖೆಯೊಂದಿಗೆ ಕೆಎಂಎಫ್ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಪ್ರತಿನಿತ್ಯ 18 ಸಾವಿರ ಲೀಟರ್ ನಂದಿನಿ ಗುಡ್‌ಲೈಫ್ (ಯುಎಚ್‌ಟಿ) ಹಾಲನ್ನು ಸಿಯಾಚಿನ್ ಹಾಗೂ ಕಾರ್ಗಿಲ್ ಗಡಿಯ ಸೈನಿಕರಿಗೆ ತಲುಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಪ್ರಮಾಣ ಹೆಚ್ಚಾಗಲಿದೆ. ಅದೇ ರೀತಿ ಹಿಂದುಸ್ಥಾನ್ ಲೀವರ್ ಲಿ., ಅವರಿಗೆ 600 ಮೆಟ್ರಿಕ್ ಟನ್ ನಂದಿನಿ ಕೆನೆರಹಿತ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ತಯಾರಿಕೆಗೆ 14 ಲಕ್ಷ ಕೆಜಿ ನಂದಿನಿ ತುಪ್ಪ ಸರಬರಾಜಿನ ಒಪ್ಪಂದವಾಗಿದ್ದು ಅದರ ಪ್ರಕಾರ ಮೊದಲ ಹೊರೆ ತುಪ್ಪ ಇಂದು ಕಳುಹಿಸಲಾಗಿದೆ.
ಬರಲಿರುವ ಉತ್ಪನ್ನಗಳು: ನಂದಿನಿ ಚೆಡ್ಡಾರ್ ಚೀಸ್, ಚೀಸ್ ಸ್ಲೆ$çಸಸ್, ಪ್ರೊಸೆಸ್ಸಡ್ ಚೀಸ್ ಮತ್ತಿತರ ರುಚಿಕರ ಚೀಸ್‌ಸ್‌ಪ್ರೈಡ್, ಮೊಜ್‌ಹಾರೆಲ್ಲಾ ಚೀಸ್ ಇತ್ಯಾದಿಗಳು ಮಾರುಕಟ್ಟೆಗೆ ಶೀಘ್ರದಲ್ಲೇ ಬರಲಿವೆ. ಈ ಸಂದರ್ಭದಲ್ಲಿ ಜಾಹಿರಾತು ವಿಭಾಗದ ಅಪರ ನಿರ್ದೇಶಕ ರಘುನಂದನ್ ಹಾಗೂ ಇತರರು ಉಪಸ್ಥಿತರಿದ್ದರು.