Advertisement

ವಲಸೆ ಕಾರ್ಮಿಕರಿಗೆ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳಲು ಕೆಎಂಎಫ್ ಮನವರಿಕೆ

05:10 PM May 23, 2020 | keerthan |

ಕಲಬುರಗಿ: ಕೋವಿಡ್-19 ಲಾಕ್ ಡೌನ್ ನಿಂದ ವಾಪಾಸ್ಸು ಬಂದಿರುವ ಕಾರ್ಮಿಕರಿಗೆ ಹಾಲು ಉತ್ಪಾದನೆಯ ಹೈನೋದ್ಯಮದಲ್ಲಿ ತೊಡಗಿಸಿ ಕೊಳ್ಳುವಂತೆ ಮನವರಿಕೆ ಮಾಡಲು ಇಲ್ಲಿನ ಕಲಬುರಗಿ- ಬೀದರ್, ಯಾದಗಿರಿ ಸಹಕಾರ ಹಾಲು  ಉತ್ಪಾದಕರ ಸಂಘಗಳ ಒಕ್ಕೂಟ (ಕೆಎಂಎಫ್) ಮುಂದಾಗಿದೆ.

Advertisement

ಉದ್ಯೋಗ ಅರಸಿ ದೂರದ ಪಟ್ಟಣಗಳಿಗೆ ತೆರಳಿ ವಾಪಸ್ಸು ಬಂದಿರುವ ಕಾರ್ಮಿಕರಿಗೆ ಅವರಿರುವ ಕ್ವಾರೆಂಟೈನ್ ಕೇಂದ್ರಗಳಿಗೆ ಹೋಗಿ ವಲಸೆ ಕಾರ್ಮಿಕರಿಗೆ ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಒಕ್ಕೂಟ ನೀಡುವ ಅಗತ್ಯ ತರಬೇತಿ ಹಾಜರಾಗುವಂತೆ ಕೋರಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಲ್ಯಾಣ ರಾವ್ (ಆರ್ ಕೆ.) ಪಾಟೀಲ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಯೊಬ್ಬ ವಲಸಿಗರು ಸ್ಥಳೀಯವಾಗಿ ಇದ್ದು ಹೈನೋದ್ಯಮದಲ್ಲಿ ತೊಡಗಿಸಿಕೊಂಡರೆ ಸ್ವಾವಲಂಬನೆ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಒಕ್ಕೂಟದ ವತಿಯಿಂದ 5 ಕೋ ರೂ ವೆಚ್ಚದಲ್ಲಿ ತರಬೇತಿ ಕೇಂದ್ರದ ನಿರ್ಮಿಸಲಾಗಿದ್ದು, ಈ ಮುಂಚೆ ತರಬೇತಿಗೆ ಧಾರವಾಡಕ್ಕೆ ಹೋಗಬೇಕಿತ್ತು. ಈಗ ಕಲಬುರಗಿಯಲ್ಲೇ ತರಬೇತಿ ನೀಡಬಹುದಾಗಿದೆ. ತರಬೇತಿ ಪಡೆದ ರೈತರು ಆಕಳುಗಳನ್ನು ಖರೀದಿಸಿ ಕಲಬುರಗಿ ಜಿಲ್ಲೆಯ ಹೈನೋದ್ಯಮ ಬೆಳವಣಿಗೆಗೆ ಕೈ ಜೋಡಿಸಬೇಕು. ಬ್ಯಾಂಕ್ ಗಳ ವತಿಯಿಂದ ಸಾಲ ದೊರಕಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಗುವುದು. ಜತೆಗೆ ಅಗತ್ಯ ಸಹಾಯ ಕಲ್ಪಿಸುಂತೆ ಪಶು ಸಂಗೋಪನೆ ಸಚಿವರನ್ನು ಕೋರಲಾಗುವುದು ಎಂದು ಆರ್ ಕೆ. ಪಾಟೀಲ್ ತಿಳಿಸಿದರು.

ಒಕ್ಕೂಟದ ವ್ಯಾಪ್ತಿಯಲ್ಲಿ 45 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಇದನ್ನು ಒಂದು ಲಕ್ಷ ಹೆಚ್ಚಿಸುವ ಗುರಿ ಹೊಂದಲಾಗಿದೆ. ಅಗತ್ಯದ ಹಾಲನ್ನು ವಿಜಯಪುರ, ಕೋಲಾರದಿಂದ ಹಾಲು ತರಿಸಿಕೊಳ್ಳಲಾಗುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸಲು ಹಾಗೂ ಗುಣಮಟ್ಟ ಹೆಚ್ಚಿಸಲು ಆಧುನೀಕರಣ ಗೊಳಿಸಲಾಗುತ್ತಿದೆ‌ ಎಂದರು.

Advertisement

ರಂಜಾನ್ ಹಬ್ಬದ ಪ್ರಯುಕ್ತ ಹಾಲಿನ ಬೇಡಿಕೆಯಂತೆ ಹಾಲು ಶೇಖರಿಸಲಾಗುತ್ತಿದ್ದು,ಬೇರೆ ರಾಜ್ಯಗಳಿಂದ ಬರುವ ಹಾಲು ಅಷ್ಟು ಗುಣಮಟ್ಟದಿಂದ ಇರದೇ ಆರೋಗ್ಯಕ್ಕೆ ಹಾನಿ ಮಾಡುವುದೇ ಜಾಸ್ತಿ. ಹೀಗಾಗಿ ನಂದಿನಿ ಗುಣಮಟ್ಟದ ಹಾಲನ್ನೇ ಖರೀದಿಸಿ ರಾಜ್ಯದ ರೈತರ ಅಭಿವೃದ್ಧಿಗೆ ಶ್ರಮಿಸಬೇಕೆಂದು ಒಕ್ಕೂಟದ ಅಧ್ಯಕ್ಷರು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next