ಬೆಂಗಳೂರು: ಟೀಂ ಇಂಡಿಯಾ ಆಟಗಾರ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರು ಸದ್ಯ ಗಾಯದ ಕಾರಣದಿಂದ ಐಪಿಎಲ್ ನಿಂದ ಹೊರಬಿದ್ದಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರಾಹುಲ್ ಸದ್ಯ ಚೇತರಿಕೆಯ ಹಂತದಲ್ಲಿದ್ದಾರೆ.
ಪ್ರಸಿದ್ದ ಯೂಟ್ಯೂಬ್ ಕಾರ್ಯಕ್ರಮ ದಿ ರನ್ವೀರ್ ಶೋದಲ್ಲಿ ರಾಹುಲ್ ಭಾಗವಹಿಸಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಯಾವ ಆಟಗಾರನ ವಿರುದ್ಧ ಆಡುವುದು ಕಷ್ಟ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್, ತಮ್ಮ ಮಾಜಿ ಆರ್ ಸಿಬಿ ಟೀಮ್ ಮೇಟ್ ಎಬಿ ಡಿವಿಲಿಯರ್ಸ್ ಹೆಸರು ಹೇಳಿದರು. ಎಡಿಬಿ ಜತೆ ಆಡುವುದನ್ನು ಆನಂದಿಸುತ್ತೇನೆ. ಆದರೆ ಆತನ ವಿರುದ್ಧ ಆಡುವುದು ಕಷ್ಟ. ಆತ ಬೇಗ ಔಟ್ ಆಗಬೇಕು ಎಂದು ಇಚ್ಛಿಸುತ್ತೇನೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯನವರ ಪ್ರಮಾಣ ವಚನಕ್ಕೆ ತಮಿಳುನಾಡು ಸಿಎಂಗೆ ಆಹ್ವಾನ
Related Articles
ಅಫ್ಘಾನಿಸ್ಥಾನ ಮತ್ತು ಗುಜರಾತ್ ಟೈಟಾನ್ಸ್ ಆಟಗಾರ ರಶೀದ್ ಖಾನ್ ತಾನೆದುರಿಸಿದ ಕಷ್ಟದ ಬೌಲರ್ ಎಂದಿದ್ದಾರೆ ರಾಹುಲ್. ರಶೀದ್ ಖಾನ್ ಬೌಲಿಂಗ್ ಗೆ ಹಲವು ಬಾರಿ ಔಟಾಗಿದ್ದೇನೆ ಎಂದರು.