Advertisement

ಬಾಲಿವುಡ್‌ ನಟಿ ನಿಧಿ ಜತೆ ಕೆ.ಎಲ್‌. ರಾಹುಲ್‌ ಪ್ರತ್ಯಕ್ಷ!

06:00 AM Jun 01, 2018 | Team Udayavani |

ಮುಂಬಯಿ: ಬಾಲಿ ವುಡ್‌ನ‌ಲ್ಲಿ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ನಿಧಿ ಅಗರ್ವಾಲ್‌ ಜತೆ ಖ್ಯಾತ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಇಬ್ಬರೂ ಜತೆ ಯಾಗಿ ಡಿನ್ನರ್‌ ಮುಗಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫೋಟೋವನ್ನು ಸ್ವತಃ ನಿಧಿ ಅಗರ್ವಾಲ್‌ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. 

Advertisement

ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪರ ಕೆ.ಎಲ್‌.ರಾಹುಲ್‌ ಆಡಿದ್ದರು.  14 ಪಂದ್ಯ ಗಳಿಂದ  659 ರನ್‌ ಗಳಿಸಿ ಪ್ರಚಂಡ ಆಟ ಪ್ರದರ್ಶಿಸಿದ್ದರು. ನಿಧಿ ಅಗ ರ್ವಾಲ್‌ ಬಾಲಿವುಡ್‌ನ‌ಲ್ಲಿ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಜತೆಗೆ ಆಕೆ ರೂಪದರ್ಶಿ ಕೂಡ ಆಗಿದ್ದಾರೆ. 

ನಿಧಿ ಮೂಲತಃ ಹೈದರಾಬಾದ್‌ನವರಾದರೂ ಕೆಲವು ಕಾಲದಿಂದ ಮುಂಬಯಿಯಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next