Advertisement

KL Rahul ಮತ್ತೆ ಆರ್‌ಸಿಬಿಗೆ ? ವೀಡಿಯೊ ವೈರಲ್‌

01:52 AM Sep 17, 2024 | Team Udayavani |

ಬೆಂಗಳೂರು: ಕರ್ನಾಟಕದ ಕೆ.ಎಲ್‌. ರಾಹುಲ್‌ ಮತ್ತೆ ಆರ್‌ಸಿಬಿಗೆ ಮರಳುವ ಕುರಿತ ಚರ್ಚೆಯೊಂದು ಮೊದಲ್ಗೊಂಡಿದೆ. “ನೀವು ಆರ್‌ಸಿಬಿಗೆ ಮರಳಬೇಕು, ಇಲ್ಲಿ ಭರ್ಜರಿ ಪ್ರದರ್ಶನ ನೀಡಬೇಕು ಎಂದು ನಾನು ಬಯಸುತ್ತಿದ್ದೇನೆ, ಪ್ರಾರ್ಥಿಸುತ್ತಿದ್ದೇನೆ’ ಎಂದು ಅಭಿಮಾನಿಯೊಬ್ಬರ ಅಭಿಲಾಷೆಗೆ, ರಾಹುಲ್‌ “ಹಾಗೆಂದು ಆಶಿಸೋಣ’ ಎಂದು ಪ್ರತಿಕ್ರಿಯೆ ನೀಡಿದ್ದೇ ಚರ್ಚೆಯ ಮೂಲ. ಈ ವೀಡಿಯೊ ವೈರಲ್‌ ಆಗಿದೆ.

Advertisement

ಮುಂದಿನ ಐಪಿಎಲ್‌ನಲ್ಲಿ ಕೆ.ಎಲ್‌. ರಾಹುಲ್‌ ಲಕ್ನೋ ಸೂಪರ್‌ ಜೈಂಟ್ಸ್‌ ತೊರೆದು ಮತ್ತೆ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ, ಈ ವೀಡಿಯೊ ಸಂಚಲನ ಮೂಡಿಸಿದೆ. 2013ರಲ್ಲಿ ಆರ್‌ಸಿಬಿ ಮೂಲಕವೇ ರಾಹುಲ್‌ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ 2014ರಲ್ಲಿ ಹೈದರಾಬಾದ್‌, 2016ರಲ್ಲಿ ಮತ್ತೆ ಆರ್‌ಸಿಬಿ, 2018ರಲ್ಲಿ ಪಂಜಾಬ್‌… ಹೀಗೆ ತಂಡಗಳನ್ನು ಬದಲಾಯಿಸಿದ್ದರು. 2022ರಿಂದ ರಾಹುಲ್‌ ಲಕ್ನೋ ಪರ ಆಡುತ್ತಿದ್ದಾರೆ. ಕಳೆದ ಐಪಿಎಲ್‌ನಲ್ಲಿ ಹೈದರಾಬಾದ್‌ ವಿರುದ್ಧ ಲಕ್ನೋ ಸೋತ ಬೆನ್ನಲ್ಲೇ, ನಾಯಕ ರಾಹುಲ್‌ ಜತೆಗೆ ಲಕ್ನೋ ಮಾಲಕ ಸಂಜೀವ್‌ ಗೋಯೆಂಕಾ ಸಿಡುಕಿನಿಂದ ಮಾತನಾಡಿದ್ದರು. ಅಂದಿನಿಂದ ರಾಹುಲ್‌, ಲಕ್ನೋ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಲಾರಂಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.