Advertisement

ಜರ್ಮನಿಯಲ್ಲಿ ಕ್ರಿಕೆಟಿಗ ರೋಹಿತ್‌, ಪತ್ನಿ ರಿತಿಕಾ ಸಂಭ್ರಮ

03:45 AM Feb 17, 2017 | Team Udayavani |

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೊದಲ ಎರಡು ಟೆಸ್ಟ್‌ಗೆ ಆಯ್ಕೆಯಾಗದ ಭಾರತ ತಂಡದ ಕ್ರಿಕೆಟಿಗ ರೋಹಿತ್‌ ಶರ್ಮಾ ಏನು ಮಾಡುತ್ತಿದ್ದಾರೆ? ಹೀಗೊಂದು ಪ್ರಶ್ನೆಗೆ ಉತ್ತರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕದೆ. ಪತ್ನಿ ರಿತಿಕಾ ಜತೆ ರೋಹಿತ್‌ ಶರ್ಮಾ ಜರ್ಮನಿಯ ಮ್ಯೂನಿಚ್‌ಗೆ ತೆರಳಿದ್ದು, ಬಿಡುವಿನ ಸಮಯವನ್ನು ಸುಂದರ ತಾಣಗಳ ವೀಕ್ಷಣೆಗೆ ವಿನಿಯೋಗಿಸುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಫ‌ುಟ್ಬಾಲ್‌ ಚಾಂಪಿಯನ್ಸ್‌ ಲೀಗ್‌ನಲ್ಲಿ ಬೇಯರ್ನ್ ಮತ್ತು ಆರ್ಸೆನಲ್‌ ನಡುವಿನ ಪಂದ್ಯವನ್ನು ವೀಕ್ಷಿಸಿದ್ದಾರೆ.

Advertisement

ಈ ಸುಂದರ ಕ್ಷಣಗಳಿಗೆ ಸಾಕ್ಷಿಯೆಂಬಂತೆ ಪತ್ನಿ ಜತೆ ಕೆಲವು ಸೆಲ್ಫಿà ತೆಗೆದುಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಅಭಿಮಾನಿಗಳು ಇದನ್ನು ಭಾರೀ ಪ್ರಮಾಣದಲ್ಲಿ ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಈ ಇಬ್ಬರ ಜೊತೆ ಕನ್ನಡಿಗರ ಕೆ.ಎಲ್‌.ರಾಹುಲ್‌ ಕೂಡ ಇದ್ದಾರೆನ್ನುವುದು ವಿಶೇಷ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್‌ ಸರಣಿ ಫೆ.23ರಿಂದ ಆರಂಭವಾಗಲಿದೆ. ಮೊದಲ ಎರಡು ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ರೋಹಿತ್‌ ಶರ್ಮಾ ಸ್ಥಾನ ಪಡೆಯಲು ವಿಫ‌ಲರಾಗಿದ್ದಾರೆ. ಗಾಯದ ಸಮಸ್ಯೆಯಿಂದ ಇಂಗ್ಲೆಂಡ್‌ ವಿರುದ್ಧ ನಡೆದ ಸರಣಿಗೂ ಆಯ್ಕೆಯಾಗಿರಲಿಲ್ಲ. ಆದರೆ ಕಳೆದ ವರ್ಷ ನಡೆದ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next