ಕಲಬುರಗಿ: ಸರ್ಕಾರದ ಯೋಜನೆಗಳೇ ಪರಿಣಾಮಕಾರಿ ತಲುಪಿಸುವ ನಿಟ್ಟಿನಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದ್ದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಆಡಳಿತ ಮಂಡಳಿಯನ್ನು ರಾಜ್ಯದ ನೂತನ ಸರ್ಕಾರ ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿದೆ.
ಅದೇ ರೀತಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ) ಗೆ ನಾಮನಿರ್ದೇಶನಗೊಳಿಸಲಾಗಿದ್ದ ಅಧ್ಯಕ್ಷರು ಹಾಗೂ ಸದಸ್ಯರು ಗಳ ನಾಮನಿರ್ದೇಶನ ಸಹ ರದ್ದುಗೊಳಿಸಲಾಗಿದೆ. ಯೋಜನೆ ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ನಿರ್ದೇಶಕರು ಹಾಗೂ ಪದ ನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ ಡಿ.ಚಂದ್ರಶೇಖರಯ್ಯ ಈ ಎರಡು ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಕೆಕೆ ಸಂಘ ಉಳಿಸುತ್ತಾರೆಯೋ ಇಲ್ಲ ರದ್ದುಗೊಳಿಸುತ್ತಾರೆಯೋ?
ಹೊಅ ದಿಕ್ಕು ಹಾಗೂ ಹೊಸ ವಿಚಾರ ಮತ್ತು ಸ್ವಾವಲಂಬನೆ ಬದುಕು ರೂಪಿಸುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಅಸ್ತಿತ್ವಕ್ಕೆ ತರಲಾಗಿದೆ. ಆದರೆ ಈ ಸಂಘಕ್ಕೆ ಸರ್ಕಾರದಿಂದ ನೇರವಾಗಿ ಅನುದಾನ ಬಾರದೇ ಕೆಕೆಆರ್ ಡಿಬಿ ಗೆ ಬಂದ ಅನುದಾನದಲ್ಲೇ ಸಂಘಕ್ಕೆ ನೀಡಿರುವುದು ವ್ಯಾಪಕ ಅಸಮಾಧಾನ ಹಾಗೂ ವಿರೋಧ ಕ್ಕೆ ಕಾರಣವಾಗಿತ್ತು. ಯೋಜನೆ ಹಾಗೂ ಕಾರ್ಯಕ್ರಮಗಳ ತಕ್ಕ ಅನುದಾನ ದೊರಕದ ಹಿನ್ನೆಲೆಯಲ್ಲಿ ಮಾಜಿ ಸಂಸದ ಹಾಗೂ ಸಂಘದ ಅಧ್ಯಕ್ಷರಾಗಿದ್ದ ಡಾ.ಬಸವರಾಜ ಪಾಟೀಲ್ ಸೇಡಂ ಮೂರು ತಿಂಗಳ ಹಿಂದೆಯೇ ಆಗಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸಂಘ ಮುಂದುವರೆಸಿಕೊಂಡು ಹೋಗಲು ಹೊಸದಾಗಿ ಮಂಡಳಿ ನಿಯೋಜಿಸುವಂತೆ ಪತ್ರ ಬರೆದು ಅಸಮಾಧಾನ ಹೊರ ಹಾಕಿದ್ದರಲ್ಲದೇ ಸಿಬ್ಬಂದಿಗಳಿಗೆ ನಿಮ್ಮ ಉದ್ಯೋಗ ನೋಡಿಕೊಳ್ಳಿ ಎಂದು ಹೇಳಿದ್ದರಂತೆ. ಆದರೆ ಮುಖ್ಯ ಮಂತ್ರಿಗಳು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರ ಸಧ್ಯಕ್ಕಂತು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಆಡಳಿತ ಮಂಡಳಿ ರದ್ದುಪಡಿಸದೆ. ಮುಂದಿನ ದಿನಗಳಲ್ಲಿ ಸಂಘ ರದ್ದುಪಡಿಸುತ್ತದೆಯೋ ಇಲ್ಲಬೇ ಮುಂದುವರೆಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
Related Articles
ಕೆಕೆಆರ್ ಡಿಬಿ ಆಡಳಿತ ಮಂಡಳಿಯನ್ನು ರದ್ದು ಮಾಡಿರುವ ಸರ್ಕಾರ, ಆದಷ್ಟು ಬೇಗ ನೂತನ ಅಧ್ಯಕ್ಷ ರ ಹಾಗೂ ಸದಸ್ಯರ ನಾಮನಿರ್ದೇಶನ ಗೊಳಿಸುವುದು ಅಗತ್ಯವಾಗಿದೆ ಏಕೆಂದರೆ ಮಂಡಳಿಗೆ ಐದು ಸಾವಿರ ಕೋ.ರೂ ಅನುದಾನ ಬಿಡುಗಡೆಯಾಗುವ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ರಚಿಸಿದಲ್ಲಿ ಕ್ರಿಯಾ ಯೋಜನೆ ರೂಪಿಸಲು ಹಾಗೂ ಸರ್ಕಾರದ ಅನುಮತಿ ಪಡೆಯಲು ಸಹಕಾರಿಯಾಗುತ್ತದೆ. ಈ ಮಂಡಳಿಗೆ ಮೊದಲು ಸಚಿವರೇ ಅಧ್ಯಕ್ಷರಾಗುವಂತಿತ್ತು. ಆದರೆ ಹಿಂದಿನ ಬಿಜೆಪಿ ಸರ್ಕಾರ ಶಾಸಕರೂ ಅಧ್ಯಕ್ಷರಾಗುವಂತೆ ಮಂಡಳಿ ನಿಯಮಾವಳಿಗೆ ತಿದ್ದುಪಡಿ ತರಲಾಗಿತ್ತು. ಆದರೆ ನೂತನ ಕಾಂಗ್ರೆಸ್ ಸರ್ಕಾರ ಇದೇ ನಿಯಮಾವಳಿ ಮುಂದುವರೆಸುತ್ತದೆಯೋ ಇಲ್ಲವೇ ತಿದ್ದುಪಡಿ ತರಲಾಗುತ್ತದೆಯೋ ಎಂಬುದನ್ನು ಸಹ ಕಾದು ನೋಡಬೇಕಿದೆ. ಒಟ್ಟಾರೆ ಈ ಮೇಲಿನ ಎರಡೂ ಆಡಳಿತ ಮಂಡಳಿ ಇಷ್ಟು ಬೇಗನೆ ರದ್ದು ಮಾಡಿರುವಂತೆ ಹೊಸ ಮಂಡಳಿ ಸಹ ನೇಮಕಗೊಂಡಲ್ಲಿ ಅಭಿವೃದ್ಧಿಗೆ ಪೂರಕವಾಗುತ್ತದೆ.