Advertisement

ಚಂದ್ರಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಕೋಚ್‌

10:38 PM Aug 17, 2022 | Team Udayavani |

ಹೊಸದಿಲ್ಲಿ: ಭಾರತದ ಮಾಜಿ ವಿಕೆಟ್‌ ಕೀಪರ್‌ ಚಂದ್ರ ಕಾಂತ್‌ ಪಂಡಿತ್‌ ಕೋಲ್ಕತಾ ನೈಟ್‌ರೈಡರ್ ತಂಡದ ನೂತನ ಪ್ರಧಾನ ಕೋಚ್‌ ಆಗಿ ಆಯ್ಕೆಯಾಗಿದ್ದಾರೆ. ಅವರು ಬ್ರೆಂಡನ್‌ ಮೆಕಲಮ್‌ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ಮೆಕಲಮ್‌ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿ ತೆರಳಿದ ಕಾರಣ ಈ ಬದಲಾವಣೆ.

Advertisement

ಚಂದ್ರಕಾಂತ್‌ ಪಂಡಿತ್‌ ದೇಶಿ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಕೋಚ್‌ ಎಂಬುದನ್ನು ಮರೆಯುವಂತಿಲ್ಲ. ಇತ್ತೀಚೆಗೆ ಮಧ್ಯಪ್ರದೇಶ ತಂಡ ಪಂಡಿತ್‌ ಅವರ ಮಾರ್ಗದರ್ಶನದಲ್ಲೇ ಚೊಚ್ಚಲ ರಣಜಿ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದು ಇದಕ್ಕೊಂದು ಅತ್ಯುತ್ತಮ ಉದಾ ಹರಣೆ. ಮುಂಬಯಿ, ವಿದರ್ಭ ತಂಡದ ಗೆಲು ವಿನ ವೇಳೆಯೂ ಪಂಡಿತ್‌ ಈ ತಂಡಗಳ ಕೋಚ್‌ ಆಗಿದ್ದರು.

“ಚಂದು ಕೆಕೆಆರ್‌ ಕುಟುಂಬವನ್ನು ಸೇರಿಕೊಳ್ಳುತ್ತಿರುವುದಕ್ಕೆ ಬಹಳ ಖುಷಿ ಆಗುತ್ತಿದೆ. ನಮ್ಮ ಮುಂದಿನ ಹಂತದ ಪಯಣಕ್ಕೆ ಇವರು ಎಲ್ಲ ರೀತಿಯಲ್ಲೂ ಮಾರ್ಗದರ್ಶಕರಾಗಿರುತ್ತಾರೆ’ ಎಂಬು ದಾಗಿ ಕೆಕೆಆರ್‌ ಸಿಇಒ ವೆಂಕಿ ಮೈಸೂರ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next