Advertisement

ಚೆನ್ನೈ ದಾಳಿಗೆ ಕೆಕೆಆರ್‌ ತತ್ತರ

12:41 AM Apr 10, 2019 | sudhir |

ಚೆನ್ನೈ: ಭಾರೀ ನಿರೀಕ್ಷೆಯ ಚೆನ್ನೈ-ಕೋಲ್ಕತಾ ನಡುವಿನ ಮಂಗಳವಾರದ ಐಪಿಎಲ್‌ ಹಣಾಹಣಿಯಲ್ಲಿ ಆತಿಥೇಯ ಧೋನಿ ಪಡೆ 7 ವಿಕೆಟ್‌ಗಳ ಜಯ ಸಾಧಿಸಿದೆ.

Advertisement

ತೀರಾ ನಿಧಾನ ಗತಿಯಿಂದ ಕೂಡಿದ “ಚಿಪಾಕ್‌ ಪಿಚ್‌’ನಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌ 9 ವಿಕೆಟಿಗೆ ಕೇವಲ 108 ರನ್‌ ಗಳಿಸಿದ್ದರೆ, ಚೆನ್ನೈ 17.2 ಓವರ್‌ಗಳಲ್ಲಿ 3 ವಿಕೆಟಿಗೆ 111 ರನ್‌ ಮಾಡಿ 5ನೇ ಜಯ ಒಲಿಸಿಕೊಂಡಿತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನ ಅಲಂಕರಿಸಿತು.

ಮಧ್ಯಮ ವೇಗಿ ದೀಪಕ್‌ ಚಹರ್‌, ಸ್ಪಿನ್‌ ತ್ರಿವಳಿಗಳಾದ ಹರ್ಭಜನ್‌, ತಾಹಿರ್‌ ಮತ್ತು ಜಡೇಜ ಸೇರಿಕೊಂಡು ಕೋಲ್ಕತಾ ಸರದಿಗೆ ಭರ್ಜರಿ ಕಡಿವಾಣ ಹಾಕಿದರು. ಅಗ್ರ ಕ್ರಮಾಂಕದ ಬಿಗ್‌ ಹಿಟ್ಟಿಂಗ್‌ ಬ್ಯಾಟ್ಸ್‌ ಮನ್‌ಗಳೆಲ್ಲ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್‌ ಸೇರಿಕೊಳ್ಳುವುದರೊಂದಿಗೆ ಕೆಕೆಆರ್‌ ತೀವ್ರ ಒತ್ತಡಕ್ಕೆ ಸಿಲುಕಿತು, ರನ್‌ ಬರಗಾಲ ಕಾಡತೊಡಗಿತು. ಆದರೆ ಕೆರಿಬಿಯನ್‌ ದೈತ್ಯ ಆ್ಯಂಡ್ರೆ ರಸೆಲ್‌ ಮಾತ್ರ ಚೆನ್ನೈ ದಾಳಿಗೆ ಜಗ್ಗದೆ ಅಜೇಯ ಅರ್ಧ ಶತಕ ಬಾರಿಸಿದರು. ಹೀಗಾಗಿ ತಂಡದ ಮೊತ್ತ ನೂರರ ಗಡಿ ದಾಟಿತು. 44 ಎಸೆತಗಳ ಈ ಏಕಾಂಗಿ ಹೋರಾಟದಲ್ಲಿ 5 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಕೆಕೆಆರ್‌ ಸರದಿಯ ಇನ್ನೊಂದು ಸಿಕ್ಸರ್‌ ಪೀಯೂಷ್‌ ಚಾವ್ಲಾ ಹೊಡೆದರು.

ಆ್ಯಂಡ್ರೆ ರಸೆಲ್‌ ಅವರನ್ನು ಚೆನ್ನೈ ಬೌಲರ್‌ಗಳು ಹೇಗೆ ನಿಯಂತ್ರಿಸಿಯಾರು ಎಂಬುದು ಈ ಪಂದ್ಯದ ಕುತೂಹಲವಾಗಿತ್ತು. ಆದರೆ ಉಳಿದ ಬ್ಯಾಟ್ಸ್‌ಮನ್‌ಗಳು ಅಗ್ಗಕ್ಕೆ ಔಟಾಗುತ್ತ ಹೋದುದರಿಂದ ಧೋನಿ ಪಡೆಗೆ ರಸೆಲ್‌ ದೊಡ್ಡ ತಲೆನೋವಾಗಿ ಕಾಡಲಿಲ್ಲ.

ಸ್ಕೋರ್‌ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌ ಎಲ್‌ಬಿಡಬ್ಲ್ಯು ಚಹರ್‌ 0
ಸುನೀಲ್‌ ನಾರಾಯಣ್‌ ಸಿ ಚಹರ್‌ ಬಿ ಹರ್ಭಜನ್‌ 6
ರಾಬಿನ್‌ ಉತ್ತಪ್ಪ ಸಿ ಜಾಧವ್‌ ಬಿ ಚಹರ್‌ 11
ನಿತೀಶ್‌ ರಾಣಾ ಸಿ ರಾಯುಡು ಬಿ ಚಹರ್‌ 0
ದಿನೇಶ್‌ ಕಾರ್ತಿಕ್‌ ಸಿ ಹರ್ಭಜನ್‌ ಬಿ ತಾಹಿರ್‌ 19
ಶುಭಮನ್‌ ಗಿಲ್‌ ಸ್ಟಂಪ್ಡ್ ಧೋನಿ ಬಿ ತಾಹಿರ್‌ 9
ಆ್ಯಂಡ್ರೆ ರಸೆಲ್‌ ಔಟಾಗದೆ 50
ಪೀಯೂಷ್‌ ಚಾವ್ಲಾ ಸ್ಟಂಪ್ಡ್ ಧೋನಿ ಬಿ ಹರ್ಭಜನ್‌ 8
ಕುಲದೀಪ್‌ ಯಾದವ್‌ ರನೌಟ್‌ 0
ಪ್ರಸಿದ್ಧ್ ಕೃಷ್ಣ ಸಿ ಹರ್ಭಜನ್‌ ಬಿ ಜಡೇಜ 0
ಹ್ಯಾರಿ ಗರ್ನಿ ಔಟಾಗದೆ 1
ಇತರ 4
ಒಟ್ಟು (9 ವಿಕೆಟಿಗೆ) 108
ವಿಕೆಟ್‌ ಪತನ: 1-6, 2-8, 3-9, 4-24, 5-44, 6-47, 7-76, 8-76, 9-79.
ಬೌಲಿಂಗ್‌: ದೀಪಕ್‌ ಚಹರ್‌ 4-0-20-3
ಹರ್ಭಜನ್‌ ಸಿಂಗ್‌ 4-0-15-2
ರವೀಂದ್ರ ಜಡೇಜ 4-0-17-1
ಸ್ಕಾಟ್‌ ಕ್ಯುಗೆಲೀನ್‌ 4-0-34-0
ಇಮ್ರಾನ್‌ ತಾಹಿರ್‌ 4-0-21-2

Advertisement

ಚೆನ್ನೈ ಸೂಪರ್‌ ಕಿಂಗ್ಸ್‌
ಶೇನ್‌ ವಾಟ್ಸನ್‌ ಸಿ ಚಾವ್ಲಾ ಬಿ ನಾರಾಯಣ್‌ 17
ಫಾ ಡು ಪ್ಲೆಸಿಸ್‌ ಔಟಾಗದೆ 43
ಸುರೇಶ್‌ ರೈನಾ ಸಿ ಚಾವ್ಲಾ ಬಿ ನಾರಾಯಣ್‌ 14
ಅಂಬಾಟಿ ರಾಯುಡು ಸಿ ರಾಣಾ ಬಿ ಚಾವ್ಲಾ 21
ಕೇದಾರ್‌ ಜಾಧವ್‌ ಔಟಾಗದೆ 8
ಇತರ 8
ಒಟ್ಟು (17.2 ಓವರ್‌ಗಳಲ್ಲಿ 3 ವಿಕೆಟಿಗೆ) 111
ವಿಕೆಟ್‌ ಪತನ: 1-18, 2-35, 3-81.
ಬೌಲಿಂಗ್‌: ಪೀಯೂಷ್‌ ಚಾವ್ಲಾ 4-0-28-1
ಪ್ರಸಿದ್ಧ್ ಕೃಷ್ಣ 4-0-23-0
ಸುನೀಲ್‌ ನಾರಾಯಣ್‌ 3.2-0-24-2
ಕುಲದೀಪ್‌ ಯಾದವ್‌ 4-0-16-0
ಹ್ಯಾರಿ ಗರ್ನಿ 2-0-20-0

Advertisement

Udayavani is now on Telegram. Click here to join our channel and stay updated with the latest news.

Next