ಹರಪನಹಳ್ಳಿ: ಅನ್ಯ ಸಮಾಜದವರ ಬೆಂಬಲ, ವಿಶ್ವಾಸಗಳಿಸಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದವರು
ರಾಜಕೀಯವಾಗಿ ಮುಂದೆ ಬರಬೇಕು ಎಂದು ಜಿಪಂ ಸದಸ್ಯೆ ಸುವರ್ಣ ನಾಗರಾಜ ಹೇಳಿದರು.
ತಾಲೂಕಿನ ತಲುವಾಗಲು ಗ್ರಾಮದಲ್ಲಿ ಪಂಚಮಸಾಲಿ ಸಮಾಜದವರು ಆಯೋಜಿಸಲಾಗಿದ್ದ ಕಿತ್ತೂರು ರಾಣಿ ಚನ್ನಮ್ಮನವರ 194ನೇ ವಿಜಯೋತ್ಸವ ಹಾಗೂ ಪಂಚಮಸಾಲಿ ಸಮಾಜದ ಗ್ರಾಮಗಳ ಘಟಕಗಳ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಭಾನುವಾರ
ಮಾತನಾಡಿದರು. ಪಂಚಮಸಾಲಿ ಸಮಾಜಕ್ಕೂ ಮೀಸಲಾತಿ ಅಗತ್ಯ. ಪಂಚಮಸಾಲಿ ಯುವರು ಕಾಯಕ ಜೀವಿಗಳು ಎಂದು ಹೇಳಿದರು.
ಉಪನ್ಯಾಸಕ ಎಚ್ .ಮಲ್ಲಿಕಾರ್ಜುನ ಮಾತನಾಡಿ, ಕಿತ್ತೂರು ರಾಣಿ ಚನ್ನಮ್ಮ ಒಂದು ಜನಾಂಗಕ್ಕೆ ಸೀಮಿತವಲ್ಲ. ಸರ್ವ ಜನಾಂಗಕ್ಕೂ ಆದರ್ಶಮಯ. ಸ್ತ್ರೀಯರ ಸಾಧನೆಗೆ ರಾಣಿ ಚನ್ನಮ್ಮ ಪ್ರೇರಣೆಯಾಗುತ್ತಾಳೆ. ಪ್ರತಿ ಗ್ರಾಮಗಳಲ್ಲೂ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಘಟಕ ಸ್ಥಾಪನೆಯಾಗಬೇಕು ಎಂದರು. ಬಿಜೆಪಿ ಮುಖಂಡ ಅರಸಿಕೇರಿ ಎನ್ .ಕೊಟ್ರೇಶ ಮಾತನಾಡಿ, ಪಂಚಮಸಾಲಿ ಮಠಕ್ಕೆ ವೈಯಕ್ತಿಕವಾಗಿ 5 ಲಕ್ಷ ರೂ. ದೇಣಿಗೆ ಹಾಗೂ ಹಗರಿಬೊಮ್ಮನಹಳ್ಳಿ ಹಾಗೂ ಕೆರೆಗುಡಿಹಳ್ಳಿ ಗ್ರಾಮಗಳ ಸಮಾಜದ ಸಮುದಾಯ ಭವನಕ್ಕೆ ಧನ ಸಹಾಯ ಮಾಡಿ¨ªೇನೆ. ಉಳಿದಂತೆ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ ಅವರು ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಿಸಲು ಶಾಸಕರು ಈಗಾಗಲೇ 1 ಕೋಟಿ ರು. ಅನುದಾನ ನೀಡಿದ್ದು, ಅದನ್ನು 2 ಕೋಟಿ ರು.ಗಳಿಗೆ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದರು. ಸಮಾಜದ ಸಂಘಟನೆ ಬೇರೆ ಸಮಾಜದವರ ವಿರುದ್ದವಲ್ಲ ಎಂದು ಸ್ಪಷ್ಟ ಪಡಿಸಿದರು. ಬಿಜೆಪಿ ತಾ. ಮಾಜಿ ಅಧ್ಯಕ್ಷ ಆರುಂಡಿ ನಾಗರಾಜ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ಜಿಪಂ ಸದಸ್ಯ ಡಾ| ಮಂಜುನಾಥ ಉತ್ತಂಗಿ,
ಸಂಘಟಕ ಜಿ.ಕೆ. ಮಲ್ಲಿಕಾರ್ಜುನ್ ಮಾತನಾಡಿದರು.
ಮುಖಂಡರಾದ ಇಂಜಿನಿಯರ್ ನಾಗರಾಜ, ಓಂಕಾರಗೌಡ, ತಾಪಂ ಸದಸ್ಯರಾದ ಗಣೇಶ, ಲತಾ, ವೆಂಕಟೇಶರೆಡ್ಡಿ, ವಿಶಾಲಕ್ಷಮ್ಮ, ಬಸವರಾಜಪ್ಪ, ಲೀಲಾ ಲಿಂಗರಾಜ, ಸಂಗೀತ, ಚನ್ನಗೌಡ, ನಾಗರಾಜ, ಬಾವಿಹಳ್ಳಿ ಬಸವರಾಜ, ಸಿ.ರುದ್ರಪ್ಪ, ಎನ್.ಜಿ. ಮನೋಹರ, ಬೇಲೂರು ಸಿ¨ªೇಶ, ರವಿ ಅಧಿ ಕಾರ, ಕನ್ನಿಹಳ್ಳಿ ಪ್ರಭಾಕರ ಉಪಸ್ಥಿತರಿದ್ದರು.