Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾಧನೆ ಮಾಡಿರುವ ಮಹಿಳೆಯರು, ಮಹಿಳಾ ಪರವಾಗಿ ಕೆಲಸ ಮಾಡಿರುವ ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಮಹಿಳೆಯರ ಬಗ್ಗೆ ಸೇವೆ ಸಲ್ಲಿಸಿದ 6 ಸಂಸ್ಥೆಗಳು, 8 ವ್ಯಕ್ತಿಗಳು, ಕಲೆ 5, ಸಾಹಿತ್ಯ 3, ಕ್ರೀಡೆ 2, ಶಿಕ್ಷಣ 1, ವೀರಮಹಿಳೆ 1 ಹಾಗೂ 10 ಅತ್ಯುತ್ತಮ ಸ್ತ್ರೀ ಶಕ್ತಿಗುಂಪುಗಳಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
Related Articles
ಈ ಪ್ರಶಸ್ತಿ ಹೊರತುಪಡಿಸಿ ಮಹಿಳಾ ಮತ್ತು ಮಕ್ಕಳ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಮೂವರಿಗೆ (ಕೋಲಾರದ ಗೌತಮ್, ಹಾವೇರಿಯ ಶೋಭಾ, ಬೆಳಗಾವಿಯ ಸುಗಂಧಾ) ವಿಶೇಷ ಬಹುಮಾನ ನೀಡಲಾಗುತ್ತಿದೆ ಎಂದರು.
Advertisement
ಉಸ್ತುವಾರಿಗೆ ಸಿದ್ಧರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದರಿಂದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸ್ಥಾನ ಖಾಲಿ ಇದೆ. ಜಿಲ್ಲಾ ಉಸ್ತುವಾರಿಯ ಜವಾಬ್ದಾರಿ ವಹಿಸಿದರೆ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ಶಶಿಕಲಾ ಜೊಲ್ಲೆ ಹೇಳಿದರು.